ಬಿಎಸ್​ಪಿಎಲ್​ ಕಾರ್ಖಾನೆ ರದ್ದಾಗಲಿ

Published on

ಕೊಪ್ಪಳ: ಬಿಎಸ್​ಪಿಎಲ್​ ವಿರುದ್ಧ ಹೋರಾಟಕ್ಕೆ ನಮ್ಮದೂ ಬೆಂಬಲವಿದೆ. ಕಾರ್ಖಾನೆ ಕಾಂಪೌಂಡ್​ ತೆರವಿಗೆ ನಾನೇ ಮುಂದೆ ಬಂದು ನಿಲ್ಲುವೆ ಎಂದು ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ಹೇಳಿದರು.

ಸಿಎಂ ಆದೇಶಿಸಿದರೂ ಕ್ರಮ ಕೈಗೊಳ್ಳದ ಡಿಸಿ ನಾಲಾಯಕ್​ ಇದ್ದಾನೆ. ಆತನನ್ನು ಮನೆಗೆ ಕಳಿಸುವುದೇ ವಾಸಿ. ಸಿಎಂ ಎಲ್ಲರೆದುರು ಕೆಲಸ ನಿಲ್ಲಿಸಿ ಎಂದು, ಬಳಿಕ ಕರೆ ಮಾಡಿ ಏನಾದರೂ ಹೇಳಿರಬೇಕು. ಅದಕ್ಕೆ ಜಿಲ್ಲಾಡಳಿತ ಆದೇಶ ಪಾಲಿಸಲಿಲ್ಲ ಎನಿಸುತ್ತದೆ. ಗಾಲಿ ಜನಾರ್ಧನರೆಡ್ಡಿ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ಬಳ್ಳಾರಿಯಿಂದ ಪಾದಯಾತ್ರೆ ಮಾಡಿ ಅಧಿಕಾರಕ್ಕೆ ಬಂದರು. ಜನರಿಗಾಗಿ ಮಾಡಲಿಲ್ಲ. ಇದೊಂದು ಮೈನಿಂಗ್​ ಲಾಬಿ. ಕಾಂಗ್ರೆಸ್​ ಬಂದರೆ ಬಲ್ಡೋಟಾ, ಬಿಜೆಪಿ ಅಧಿಕಾರದಲ್ಲಿದ್ದರೆ ಜನಾರ್ದನ ರೆಡ್ಡಿ ಗ್ರೂಪ್​ ಇಂಥ ಕೆಲಸ ಮಾಡುತ್ತವೆ ಎಂದು ಕೋಡಿಹಳ್ಳಿ ಚಂದ್ರೇಶಖರ್​ ಕುಟುಕಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net