ಮೈದುಂಬಿದ ಹಿರೇಹಳ್ಳ ಜಲಾಶಯ

district koppal kinnala dam hirehalla
Published on

ಕೊಪ್ಪಳ: ತಾಲೂಕಿನ ಕಿನ್ನಾಳ ಬಳಿಯ ಹಿರೇಹಳ್ಳ ಜಲಾಶಯ ಬಹುತೇಕ ಮೈದುಂಬಿಕೊಂಡಿದೆ. ಪೂರ್ಣ ಭರ್ತಿಗೆ ಒಂದು ಅಡಿ ಬಾಕಿ ಇದ್ದು, ಯಾವುದೇ ಕ್ಷಣದಲ್ಲಾದರೂ ನದಿಗೆ ನೀರು ಬಿಡುವ ಸಾಧ್ಯತೆ ಇದೆ.

ಜಲಾನಯನ ವ್ಯಾಪ್ತಿಯಲ್ಲಿ ನಿರಂತರ ಮಳೆಯಾಗಿದ್ದು ಜಲಾಶಯಕ್ಕೆ ಅಪಾರ ನೀರು ಹರಿದು ಬಂದಿದೆ. ಮಧ್ಯಮ ನೀವಾವರಿ ಹಾಗೂ ತುಂಗಭದ್ರಾ ಜಲಾಶಯಕ್ಕೆ ಬರುವ ಹೂಳು ನಿಯಂಣತ್ರಣ ಉದ್ದೇಶದಿಂದ ಡ್ಯಾಂ ನಿರ್ಮಾಣವಾಗಿದೆ. 2.27 ಟಿಎಂಸಿ ಅಡಿ ನೀರು ಬಳಕೆಗೆ ಅವಕಾಶವಿದೆ. ಎಡ ಮತ್ತು ಬಲದಂಡೆ ಕಾಲುವೆ ಮೂಲಕ ಒಟ್ಟು 20 ಸಾವಿರ ಎಕರೆ ನೀರಾವರಿ ಉದ್ದೇಶ ಹೊಂದಿದ್ದರೂ ವಾಸ್ತವವಾಗಿ ಅಷ್ಟು ಪ್ರದೇಶಕ್ಕೆ ನೀರೊದಗಿಸುವಲ್ಲಿ ನೀರಾವರಿ ನಿಗಮ ವಿಲವಾಗಿದೆ. ಸದ್ಯ ಜಲಾಶಯ 1.67 ಟಿಎಂಸಿ ಅಡಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿದೆ. ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗಿದ್ದು, ಭರ್ತಿಗೆ ಒಂದು ಅಡಿ ಬಾಕಿ ಇದೆ.

ದಣ ಭಾರತದಲ್ಲಿ ಪೂರ್ವ ಮುಂಗಾರಿನಲ್ಲೇ ಭರ್ತಿಯಾದ ಮೊದಲ ಜಲಾಶಯವೆಂದು ಹೇಳಲಾಗುತ್ತಿದೆ. ಅಚ್ಚುಕಟ್ಟು ವ್ಯಾಪ್ತಿ ರೈತರು ಬಿತ್ತನೆಗೆ ಸಿದ್ಧತೆ ನಡೆಸಿದ್ದಾರೆ. ಯಾವುದೇ ಕ್ಷಣದಲ್ಲಾದರೂ ನೀರು ಬಿಡುಗಡೆ ಸಾಧ್ಯತೆ ಇದೆ. ನೀರಾವರಿ ಅಧಿಕಾರಿಗಳು ಹಳ್ಳ ಪಾತ್ರ ಗ್ರಾಮಗಳ ಜನತೆಗೆ ಎಚ್ಚರಿಕೆ ನೀಡಿದ್ದಾರೆ.

ಈ ಜಲಾಶಯದಲ್ಲೂ ಹೂಳು ಹೆಚ್ಚುತ್ತಿದೆ. 0.43ಟಿಎಂಸಿ ಅಡಿ ಹೂಳು ತುಂಬಿದೆ. ಇದರಿಂದ ನೀರು ಸಂಗ್ರಹ ಕುಸಿಯುತ್ತಿದೆ. ಎಡದಂಡೆ ಕಾಲುವೆ 24.6 ಕಿ.ಮೀ. ಉದ್ದವಿದ್ದು, 5 ಸಾವಿರ ಹೆಕ್ಟೇರ್​ ಅಚ್ಚುಕಟ್ಟು ಹೊಂದಿದೆ. ಬಲದಂಡೆ ಕಾಲುವೆ 25 ಕಿ.ಮೀ. ಉದ್ದವಿದ್ದು, 3330 ಹೆಕ್ಟೇರ್​ ಅಚ್ಚುಕಟ್ಟು ಪ್ರದೇಶ ಹೊಂದಿದೆ. ವಾಸ್ತವವಾಗಿ ಟೇಲ್​ ಎಂಡ್​ವರೆಗೆ ನೀರು ತಲುಪುತ್ತಿಲ್ಲ. ಕಾಲುವೆಗಳು ಹೂಳು ತುಂಬಿದ್ದು, ಜಂಗಲ್​ ಬೆಳೆದಿದೆ. ಕೆಲವೆಡೆ ಕಾಲುವೆ ನಿರ್ಮಿಸಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net