ಯಾರೂ ರಾಜಕಾರಣ ಮಾಡಬಾರದು

district koppal kashmir terrorist attack congress amaregouda bayyapura
Published on

ಕೊಪ್ಪಳ: ಕಾಶ್ಮೀರದಲ್ಲಿ ನಡೆದ ಉಗ್ರ ದಾಳಿಗೆ ಸಂಬಂಧಿಸಿದಂತೆ ಯಾರೋಬ್ಬರೂ ರಾಜಕಾರಣ ಮಾಡಬಾರದು ಎಂದು ಕಾಂಗ್ರೆಸ್​ ಜಿಲ್ಲಾಧ್ಯಕ್ಷ ಅಮರೇಗೌಡ ಬಯ್ಯಾಪುರ ಹೇಳಿದರು.

ನಗರದಲ್ಲಿ ಶುಕ್ರವಾರ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದರು.

ಭದ್ರತೆ ವಿಷಯದಲ್ಲಿ ಸ್ವಲ್ಪ ವ್ಯತ್ಯಾಸ ಆಗಿದೆ. ಕೇಂದ್ರ ಸರ್ಕಾರ ಭಯೋತ್ಪಾದನೆ ನಿಗ್ರಹಕ್ಕೆ ಸೂಕ್ತ ಕಾರ್ಯಾಚರಣೆ ನಡೆಸಬೇಕು. ಸೈನಿಕರಿಗೆ ಧೈರ್ಯ ತುಂಬುವ ಕೆಲಸವಾಗಲಿ. ಯಾವುದೇ ರಾಜಕಾರಣಿಗಳಿರಲಿ. ಇಂಥ ವಿಷಯದಲ್ಲಿ ರಾಜಕಾರಣ ಮಾಡುವುದು ಸರಿಯಲ್ಲ. ಜಾಗೃತಿವಹಿಸಿ ಮುಂದೆ ಇಂಥ ಟನೆಗಳಾಗದಂತೆ ಕೇಂದ್ರ ಕ್ರಮವಹಿಸಲಿ. ಕಾಶ್ಮೀರಕ್ಕ ದೇಶ ಅಷ್ಟೇ ಅಲ್ಲದೆ, ವಿದೇಶಿ ಪ್ರವಾಸಿಗರು ಬರುತ್ತಾರೆ. ಉಗ್ರ ದಾಳಿಯಿಂದ ಬರಲು ಹಿಂದೇಟು ಹಾಕುತ್ತಾರೆ. ಎಲ್ಲರಲ್ಲೂ ಮಾನವೀಯತೆ ಎಂಬುದು ಇರುವುದಿಲ್ಲ. ಅಂಥವರು ದುಷತ್ಯ ಎಸಗುತ್ತಾರೆ. ಇದರಿಂದ ಇನ್ನುಳಿದವರಿಗೆ ಅಪಖ್ಯಾತಿ ಬರುತ್ತದೆ ಎಂದರು.

ಉಗ್ರ ದಾಳಿಯಿಂದ ಮೃತಪಟ್ಟವರಿಗೆ ಜಿಲ್ಲಾ ಕಾಂಗ್ರೆಸ್​ನಿಂದ ಶುಕ್ರವಾರ ಸಂಜೆ ದೀಪ ಬೆಳಗಿಸಿ ಶ್ರದ್ಧಾಂಜಲಿ ಕೋರಲಾಯಿತು. ನಗರಸಭೆ ಅಧ್ಯಕ್ಷ ಅಮ್ಜದ್​ ಪಟೇಲ್​, ಪ್ರಮುಖರಾದ ಎಸ್​.ಬಿ.ನಾಗರಳ್ಳಿ, ಕೃಷ್ಣಾ ಇಟ್ಟಂಗಿ, ಅಜಿಂ ಅತ್ತಾರ, ಗುರುರಾಜ ಹಲಗೇರಿ, ಮುತ್ತುರಾಜ ಕುಷ್ಟಗಿ, ಕಿಶೋರಿ ಬೂದನೂರ, ಸವಿತಾ ಗೋರಂಟ್ಲಿ, ಜ್ಯೋತಿಗೊಂಡಬಾಳ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net