ಕಾಶ್ಮೀರದಲ್ಲಿ ಸಿಲುಕಿದ ಕೊಪ್ಪಳ ಪ್ರವಾಸಿಗರು

district koppal kashmeera terrosit attack koppal tourist visit
Published on

ಕೊಪ್ಪಳ: ಕಾಶ್ಮೀರಕ್ಕೆ ಕೊಪ್ಪಳದಿಂದ ನಾಲ್ಕು ಕುಟುಂಬಗಳ 19 ಪ್ರವಾಸಿಗರು ಸಿಲುಕಿದ್ದು ರಾಜ್ಯ ಸರ್ಕಾರ ಸುರತವಾಗಿ ಕರೆತರಲು ಮುಂದಾಗಿದೆ. ಬುಧವಾರ ದೆಹಲಿಗೆ ತೆರಳಿ ಅಲ್ಲಿಂದ ಬೆಂಗಳೂರು ಮೂಲಕ ಕೊಪ್ಪಳಕ್ಕೆ ಬರಲು ಮುಂದಾಗಿದ್ದಾರೆ.

ಕೊಪ್ಪಳದ ಉದ್ಯಮಿಗಳಾದ ಶರಣಪ್ಪ ಸಜ್ಜನ, ಶಿವಕುಮಾರ ಪಾವಲಿ ಶೆಟ್ಟರ್​ ಮತ್ತು ಕಾಂಗ್ರೆಸ್​ ನಗರ ಟಕ ಅಧ್ಯಕ್ಷ ಎಂ.ಕಾಟನ್​ ಪಾಷಾ, ಸಿದ್ದು ಗಣವಾರಿ ಕುಟುಂಬ ಶ್ರೀನಗರದಲ್ಲಿ ಸಿಲುಕಿವೆ. ಮಂಗಳವಾರ ಮಧ್ಯಾಹ್ನ 2.30ಕ್ಕೆ ಬೆಂಗಳೂರಿನಿಂದ ಪ್ರವಾಸ ಬೆಳೆಸಿದ್ದು, ಶ್ರೀನಗರಕ್ಕೆ ಸಂಜೆ 6.30ಕ್ಕೆ ತಲುಪಿದ್ದಾರೆ. ಅಷ್ಟರಲ್ಲಿ ಉಗ್ರರ ದಾಳಿ ನಡೆದ ಮಾಹಿತಿ ಸಿಕ್ಕಿದ್ದು ಶ್ರೀನಗರದ ಹೋಟೆಲ್​ನಲ್ಲಿ ತಂಗಿದ್ದಾರೆ. ದಾಳಿ ನಡೆದ ಪ್ರದೇಶದಿಂದ 90 ಕಿ.ಮೀ.ದೂರದಲ್ಲಿದ್ದು, ಪೋಲಿಸ್​, ಸೇನೆ ಭದ್ರತೆಯಲ್ಲಿದ್ದಾರೆ.

ಮಧ್ಯಾಹ್ನ ವೇಳೆಗೆ ಕಾರ್ಮಿಕ ಸಚಿವ ಸಂತೋಷ ಲಾಡ್​ ಭೇಟಿಯಾಗಿದ್ದು, ಸುರತವಾಗಿ ರಾಜ್ಯಕ್ಕೆ ಕರೆತರುವ ಭರವಸೆ ನೀಡಿದ್ದಾರೆ. ದೆಹಲಿ ಮೂಲಕ ಬೆಂಗಳೂರಿಗೆ ಬಂದು ಅಲ್ಲಿಂದ ಕೊಪ್ಪಳಕ್ಕೆ ಬರಲಿದ್ದಾರೆಂದು ತಿಳಿದು ಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net