ಮೊಳಕೆ ಒಡೆದ ಭತ್ತ

district koppal karatagi paddy rain affect
Published on

ಕೊಪ್ಪಳ : ಅಕಾಲಿಕ ಮಳೆ ಸುರಿದ ಕಾರಣ ಕಾರಟಗಿ ತಾಲೂಕಿನ ಸಿದ್ದಾಪುರ ಸೇರಿ ತಾಲೂಕಿನ ವಿವಿಧೆಡೆ ಭತ್ತ ಮೊಳಕೆ ಒಡೆದಿದ್ದು ರೈತರು ಸಂಕಷ್ಟ ಅನುಭವಿಸುವಂತಾಗಿದೆ.

ಕಳೆದರೆಡು ದಿನದಿಂದ ವರುಣ ಕಣ್ಣಾಮುಚ್ಚಾಲೆ ಆಡುತ್ತಿದ್ದಾನೆ. ತಾಲೂಕಿನಲ್ಲಿ ಭತ್ತದ ಬೆಳೆಗಾರರು ಭತ್ತ ಕಟಾವು ಮಾಡಿದ್ದಾರೆ. ಒಣಗಿಸಲು ರಾಶಿ ಮಾಡಿದ್ದು, ಮಳೆ ಅಡ್ಡಿಯಾಗಿದೆ. ಏಕಾಏಕಿ ಮೋಡ ಕವಿದು ಮಳೆ ಆಗುತ್ತಿದ್ದು, ರಾಶಿ ಗೂಡಿಸುವುದು, ಭತ್ತ ಒಣಗಿಸುವುದು ಕಷ್ಟವಾಗಿದೆ. ಮಳೆ ನೀರಿಗೆ ಭತ್ತದ ರಾಶಿ ಕೊಚ್ಚಿ ಹೋಗಿದ್ದು, ಅನ್ನದಾತರ ಪಾಡು ಹೇಳತೀರದಾಗಿದೆ. ನಷ್ಟ ಸಂಭವಿಸಿದರೂ ಅಧಿಕಾರಿಗಳು ಗೋಳು ಕೇಳಲು ಆಗಮಿಸುತ್ತಿಲ್ಲವೆಂದು ರೈತರು ಅಳಲು ತೋಡಿಕೊಂಡರು.

ಗುರುವಾರ ಸುರಿದ ಮಳೆಗೆ ಭತ್ತ ನೀರಿನಲ್ಲಿ ಕೊಚ್ಚಿ ಹೋಗಿದೆ. ಉಳಿದ ಭತ್ತ ಮೊಳಕೆ ಒಡೆದಿದೆ. ಕೂಡಲೇ ಸರ್ಕಾರ ನಷ್ಟ ಭರ್ತಿ ಮಾಡಬೇಕು. ಅಗತ್ಯ ಪರಿಹಾರ ಒದಗಿಸಬೇಕೆಂದು ರೈತರು ಆಗ್ರಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net