ಸಮ್ಮೇಳನ ಯಶಸ್ಸಿಗೆ ಸಹಕರಿಸಿ, ಶಾಸಕ ಹಿಟ್ನಾಳ ಮನವಿ

district koppal kannada sahitya sammelana logo relese mla
Published on

ಕೊಪ್ಪಳ: ತಾಲೂಕಿನ ಹಲಗೇರಾ ಗ್ರಾಮದಲ್ಲಿ ಮಾ.23ರಂದು ತಾಲೂಕು 10ನೇ ಕನ್ನಡ ಸಾಹಿತ್ಯ ಸಮ್ಮೇಳನ ಹಮ್ಮಿಕೊಂಡಿದ್ದು ಎಲ್ಲರೂ ಭಾಗಿಯಾಗಿ ಯಶಸ್ವಿಗೊಳಿಸಬೇಕೆಂದು ಶಾಸಕ ರಾವೇಂದ್ರ ಹಿಟ್ನಾಳ ಮನವಿ ಮಾಡಿದರು.

ನಗರದ ನಗರಾಭಿವೃದ್ಧಿ ಪ್ರಾಧಿಕಾರ ಕಚೇರಿ ಸಭಾಂಗಣದಲ್ಲಿ ಸೋಮವಾರ ಸಮ್ಮೇಳನ ಆಹ್ವಾನ ಪತ್ರಿಕೆ ಬಿಡುಗಡೆ ಮಾಡಿ ಮಾತನಾಡಿದರು.

ಸಮ್ಮೇಳನ ಯಶಸ್ವಿಗೊಳಿಸಲು ಸಂಪೂರ್ಣ ಸಹಕಾರ ನೀಡಲಾಗುವುದು. ರಾಜ್ಯದಲ್ಲೆ ಮಾದರಿ ಎನ್ನುವಂತೆ ಕೊಪ್ಪಳ ತಾಲೂಕಿನ ಸಮ್ಮೇಳನವನ್ನ ಆಚರಿಸೋಣ. ಕನ್ನಡ ಕಟ್ಟುವ ಕೆಲಸಕ್ಕೆ ನಾವೇಲ್ಲರು ಕೈಜೋಡಿಸೋಣ. ಎಲ್ಲರೂ ಸಹಕರಿಸಿ ಯಶಸ್ವಿಗೊಳಿಸಿ. ಕನ್ನಡ ಕಟ್ಟುವ ಕೆಲಸದಲ್ಲಿ ಎಲ್ಲರ ಜವಾಬ್ದಾರಿ ಇದೆ. ಅದನ್ನು ಅರಿತು ಕೆಲಸ ಮಾಡೋಣ ಎಂದು ಕರೆ ನೀಡಿದರು.

ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಶ್ರೀನಿವಾಸ ಗುಪ್ತಾ, ಭಾಗ್ಯನಗರ ಪಪಂ ಅಧ್ಯಕ್ಷ ತುಕಾರಾಮಪ್ಪ ಗಡಾದ, ತಾಲೂಕು ಕಸಾಪ ಅಧ್ಯಕ್ಷ ರಾಮಚಂದ್ರ ಗೊಂಡಬಾಳ, ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಶರಣಪ್ಪ ಬಾಚಲಾಪುರ, ಪತ್ರಕರ್ತರಾದ ಸೋಮರೆಡ್ಡಿ ಅಳವಂಡಿ, ಸಂತೋಷ ದೇಶಪಾಂಡೆ, ಹುಸೇನ್​ ಪಾಷಾ, ಹನುಮಂತ ಹಳ್ಳಿಕೇರಿ, ಬಸವರಾಜ ಕರುಗಲ್​ , ಕಂದಾಯ ಇಲಾಖೆ ನೌಕರರ ಸಂಘದ ಜಿಲ್ಲಾಧ್ಯಕ್ಷ ಮಂಜುನಾಥ ಮ್ಯಾಗಳಮನಿ, ಗ್ರಾಮಸ್ಥರಾದ ಮಾರುತೇಶ ಅಂಗಡಿ, ಕಳಕನಗೌಡ ಹಳೆಮನಿ, ಕಾಸಿಂ ಸಾಬ್​, ಭೀಮಣ್ಣ ಗುಡ್ಲಾನೂರ, ಕಸಾಪ ಪದಾಧಿಕಾರಿಗಳಾದ ಶಿವಕುಮಾರ ಕುಕನೂರ, ರಮೇಶ ತುಪ್ಪದ, ಸೋಮನಗೌಡ ಹೊಗರನಾಳ, ಶರಣು ಡೊಳ್ಳಿನ ಇತರರಿದ್ದರು.

ಲಾಂಛನ ಬಿಡುಗಡೆ : ಹಲಗೇರಿ ಗ್ರಾಮ ದೇವತೆ ಶಾಂಭವಿ ದೇವಿಯನ್ನು ಕೇಂದ್ರವಾಗಿಟ್ಟುಕೊಂಡು, ಸಾಮ್ರಾಟ ಅಶೋಕನ ಶಿಲಾಶಾಸನ, ಕೊಪ್ಪಳ ಕೋಟೆ, ಜೈನ ಬಸದಿ, ತೊಗಲು ಗೊಂಬೆ, ಕಿನ್ನಾಳ ಕಲೆ, ಹುಲಿಗೆಮ್ಮ ದೇವಿ, ಜೀವನಾಡಿ ತುಂಗಭದ್ರಾ ಜಲಾಶಯ, ಗವಿಮಠ, ಸಾಮರಸ್ಯ ತಾಣ ಮರ್ದಾನ ಅಲಿ ದರ್ಗಾ ಭಾವಚಿತ್ರಗಳನ್ನು ಬಳಸಿ ಸಮ್ಮೇಳನ ಲಾಂಛನ ಸಿದ್ಧಪಡಿಸಲಾಗಿದೆ. ಮೇಲ್ಭಾಗದಲ್ಲಿ ಕನ್ನಡ ತಾಯಿ ಭುವನೇಶ್ವರಿ ಹಾಗೂ ನಾಡ ಧ್ವಜಗಳನ್ನು ಒಳಗೊಂಡಿದ್ದು ಆಕರ್ಷಕವಾಗಿದೆ. ಶನಿವಾರ ಶಾಸಕ ರಾವೇಂದ್ರ ಹಿಟ್ನಾಳ ಲಾಂಛನ ಬಿಡುಗಡೆ ಮಾಡಿದರು. ಕಸಾಪ ಪದಾಧಿಕಾರಿಗಳಾದ ರಮೇಶ್​ ತುಪ್ಪದ ಹಾಗೂ ಶರಣು ಡೊಳ್ಳಿನ ಲಾಂಛನ ವಿನ್ಯಾಸಗೊಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net