ಮನುಕುಲದ ಅಭಿವೃದ್ಧಿಗೆ ಸಂದೇಶ ನೀಡಿದ ಕನಕ

district koppal kanakadasa jayanthi mla raghavendra hitnal
Published on

ಕೊಪ್ಪಳ: ದಾಸ ಶ್ರೇಷ್ಠ ಕನಕದಾಸರು ತಮ್ಮ ಕೀರ್ತನೆಗಳ ಮೂಲಕ ಮನುಕುಲದ ಉದ್ದಾರಕ್ಕೆ ಅನೇಕ ಸಂದೇಶ ನೀಡಿದ್ದಾರೆ ಎಂದು ಶಾಸಕ ರಾವೇಂದ್ರ ಹಿಟ್ನಾಳ ಹೇಳಿದರು.

ನಗರದ ಸಾಹಿತ್ಯ ಭವನದಲ್ಲಿ ಜಿಲ್ಲಾಡಳಿತದಿಂದ ಸೋಮವಾರ ಹಮ್ಮಿಕೊಂಡಿದ್ದ ಕನಕದಾಸ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕನಕದಾಸರು ಎಲ್ಲ ಸಮುದಾಯಗಳ ಏಳಿಗೆಗೆ ಶ್ರಮಿಸಿದರು. ಜಾತಿ ಪದ್ಧತಿ ವಿರೋಧಿಸಿದರು. ಕೀರ್ತನೆಗಳ ಮೂಲಕ ಸರಳ ಭಾಷೆ ಬಳಸಿ ಸಮಾಜದ ಅಂಕುಡೊಂಕು ತಿದ್ದಿದರು. ಬಸವಣ್ಣ, ಅಂಬೇಡ್ಕರ್​, ವಾಲ್ಮೀಕಿ, ಕನಕದಾಸ ಸೇರಿ ಇತರ ಶರಣ, ಸಂತ, ದಾಸರು ಸಮಾಜ ಉದ್ಧಾರಕ್ಕೆ ಸಂದೇಶ ನೀಡಿದರು. ಮಹನೀಯರ ಜಯಂತಿ ಕೇವಲ ಒಂದೇ ಸಮುದಾಯಕ್ಕೆ ಸೀಮಿತವಾಗಬಾರದು. ಎಲ್ಲರೂ ಭಾಗವಹಿಸಿ ಅವರ ಸಂದೇಶ ಪಾಲಿಸಿದಾಗ ಜಯಂತಿ ಆಚರಣೆಗೆ ಒಂದು ಅರ್ಥ ಬರಲಿದೆ. ಕೊಪ್ಪಳದ ಕನಕದಾಸ ವೃತ್ತ, ಆಸ್ಪತ್ರೆ ಸೇರಿ ಇತರ ಕಾಮಗಾರಿಗಳ ಉದ್ಘಾಟನೆಗೆ ಸಿಎಂ ಸಿದ್ದರಾಮಯ್ಯ ಶ್ರೀವೇ ಜಿಲ್ಲೆಗೆ ಆಗಮಿಸಲಿದ್ದಾರೆ ಎಂದರು.

ಶಿಕ್ಷಕಿ ಅರುಣಾ ನರೇಂದ್ರ ಪಾಟೀಲ್​ ಉಪನ್ಯಾಸ ನೀಡಿ ಮಾತನಾಡಿ, ಸಮಾನತೆ, ಸಹಬಾಳ್ವೆ ದಾರಿ ತೋರಿದವರು ಕನಕದಾಸರು. ತಮಗಿದ್ದ ಭಾಗ್ಯ ತೊರೆದು ಸಮಾಜ ಸುಧಾರಣೆಗೆ ಶ್ರಮಿಸಿದರು. ಜನರ ನಡುವೆ ಇದ್ದುಕೊಂಡು ಜೀವನ ಪಾಠ ಕಲಿಸಿದವರು. ತಳ ಸಮುದಾಯಗಳ ಒಳಿತಿಗಾಗಿ ಸ್ವಾಭಿಮಾನದ ಕಿಚ್ಚು ಹೊತ್ತಿಸಿದವರು. ದಾರ್ಶನಿಕ ಲೋಕದ ಧೃವತಾರೆ. ದಾಸರಲ್ಲಿಯೇ ಶ್ರೇಷ್ಠ ಎನಿಸಿಕೊಂಡರು. ಕೀರ್ತನೆಗಳ ಜತೆಗೆ ಹಲವು ಕಾವ್ಯ ರಚಿಸಿ ಕನ್ನಡ ಸಾಹಿತ್ಯಕ್ಕೆ ತಮ್ಮದೇ ಕೊಡುಗೆ ನೀಡಿದ್ದಾರೆಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ರಾಜ್ಯೋತ್ಸವ ಪುರಸತ ಅಲ್ಲಮಪ್ರಭು ಬೆಟ್ಟದೂರು, ಎ.ಜಿ.ಕಾರಟಗಿ, ಸುವರ್ಣ ಮಹೋತ್ಸವ ಪ್ರಶಸ್ತಿ ಪುರಸತ ಡಾ.ಚಂದ್ರಪ್ಪ, ರುಕ್ಮಿಣಿ ಬಾಯಿ ಹಾಗೂ ಪಿಎಸ್​ಐ ಆಗಿ ಆಯ್ಕೆಯಾದ ಸಮುದಾಯದ ಯುವಕರನ್ನು ಸನ್ಮಾನಿಸಲಾಯಿತು.

ಕೊಪ್ಪಳ ನಗರಸಭೆ ಅಧ್ಯಕ್ಷ ಅಮ್ಜದ್​ ಪಟೇಲ್​, ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಶ್ರೀನಿವಾಸ ಗುಪ್ತಾ, ಡಿಸಿ ನಲಿನ್​ ಅತುಲ್​, ಎಸ್ಪಿ ಡಾ.ರಾಮ್​ ಎಲ್​.ಅರಸಿದ್ದಿ, ಎಡಿಸಿ ಸಿದ್ರಾಮೇಶ್ವರ, ಎಡಿ ಕ್ಯಾ.ಮಹೇಶ ಮಾಲಗಿತ್ತಿ, ತಹಸೀಲ್ದಾರ್​ ವಿಠ್ಠಲ್​ ಚೌಗಲಾ, ತಾಪಂ ಇಒ ದುಂಡಪ್ಪ ತುರಾದಿ, ಡಿಡಿಪಿಐ ಶ್ರೀಶೈಲ ಬಿರಾದಾರ, ಡಿಡಿಪಿಯು ಜಗದೀಶ, ಕನ್ನಡ ಮತ್ತು ಸಂಸತಿ ಇಲಾಖೆ ಸಹಾಯಕ ನಿರ್ದೇಶಕ ಕೊಟ್ರೇಶ ಮರಬನಳ್ಳಿ, ವಕೀಲರ ಸಂದ ಜಿಲ್ಲಾಧ್ಯಕ್ಷ ಎ.ವಿ.ಕಣವಿ, ಮಾಜಿ ಶಾಸಕ ಬಸವರಾಜ ಹಿಟ್ನಾಳ, ಪ್ರಮುಖರಾದ ಜುಮ್ಮಣ್ಣ ನಂದಾಪುರ, ಭರಮಪ್ಪ ನಗರ, ಜಡಿಯಪ್ಪ ಬಂಗಾಳಿ, ಗುಡದಪ್ಪ ಬಾನಪ್ಪನವರ, ಹನುಮಂತಪ್ಪ ಕೌದಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net