ಕನಕದಾಸ ಜಯಂತಿ ಆಚರಣೆ ಅಚ್ಚುಕಟ್ಟಾಗಿರಲಿ, ಹಿಟ್ನಾಳ

district koppal kanakadasa jayanthi meeting mla hitnala
Published on

ಕೊಪ್ಪಳ: ಭಕ್ತ ಶ್ರೇಷ್ಠ ಕನಕದಾಸ ಜಯಂತಿ ನ.18ರಂದು ಅಚ್ಚುಕಟ್ಟಾಗಿ ಆಚರಿಸಿ ಎಂದು ಶಾಸಕ ರಾವೇಂದ್ರ ಹಿಟ್ನಾಳ ಅಧಿಕಾರಿಗಳಿಗೆ ಸೂಚಿಸಿದರು.

ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.

ಸಾಹಿತ್ಯ ಭವನದಲ್ಲಿ ಬೆಳಗ್ಗೆ 11.30ಕ್ಕೆ ವೇದಿಕೆ ಕಾರ್ಯಕ್ರಮ ಇರಲಿದೆ. ಈ ಬಗ್ಗೆ ಸಮುದಾಯ ನಾಯಕರಿಗೆ ಮಾಹಿತಿ ನೀಡಿ. ರಾಜ್ಯೋತ್ಸವ ಪ್ರಶಸ್ತಿ ಪಡೆದವರನ್ನು ಸನ್ಮಾನಿಸಿ. ಎಲ್ಲ ಕಚೇರಿ, ಶಾಲಾ&ಕಾಲೇಜುಗಳಲ್ಲಿ ಜಯಂತಿ ಆಚರಣೆಗೆ ಕ್ರಮ ಕೈಗೊಳ್ಳಿ. ಕೊಪ್ಪಳ ವಿವಿ ಕುಲಪತಿ ಡಾ.ಬಿ.ಕೆ.ರವಿ ಅವರನ್ನು ಉಪನ್ಯಾಸಕರನ್ನಾಗಿ ಆಹ್ವಾನಿಸಿ. ಸಮುದಾಯ ನಾಯಕರಿಗೆ ತಿಳಿಸಿದಲ್ಲಿ ಜಯಂತಿಗೆ ಹೆಚ್ಚು ಜನರನ್ನು ಸೇರಿಸಲು ಅನುಕೂಲವಾಗಲಿದೆ. ಕಾರ್ಯಕ್ರಮದ ಮುನ್ನಾ ದಿನ ಸಾಹಿತ್ಯ ಭವನ ಸ್ವಚ್ಛಗೊಳಿಸಿ. ಉತ್ತಮವಾಗಿ ಕಾರ್ಯಕ್ರಮ ಆಯೋಜಿಸಿ ಎಂದು ಸಲಹೆ ನೀಡಿದರು.

ಜಿಲ್ಲಾಧಿಕಾರಿ ನಲಿನ್​ ಅತುಲ್​ ಮಾತನಾಡಿ, ಕನಕದಾಸರ ಜಯಂತಿ ಕಾರ್ಯಕ್ರಮಕ್ಕೆ ಸಕಲ ಸಿದ್ಧತೆ ಕೈಗೊಳ್ಳಲಾಗುವುದು. ಅರ್ಥಪೂರ್ಣ ಜಯಂತಿ ಆಚರಣೆಗೆ ಕ್ರಮ ತೆಗೆದುಕೊಳ್ಳುತ್ತೇವೆ. ಸಂಬಂಧಿಸಿದ ಅಧಿಕಾರಿಗಳು ನಿಮಗೆವಹಿಸಿದ ಜವಾಬ್ದಾರಿ ಸರಿಯಾಗಿ ನಿಭಾಯಿಸಿ ಎಂದು ಸೂಚಿಸಿದರು.

ಜಿಪಂ ಸಿಇಒ ರಾಹುಲ್​ ರತ್ನಂ ಪಾಂಡೆಯ, ಎಡಿಸಿ ಸಿದ್ರಾಮೇಶ್ವರ, ಡಿಯುಡಿಸಿ ಪಿಡಿ ರೇಷ್ಮಾ ಹಾನಗಲ್​, ಕನ್ನಡ ಮತ್ತು ಸಂಸತಿ ಇಲಾಖೆ ಸಹಾಯಕ ನಿರ್ದೇಶಕ ಕೊಟ್ರೇಶ ಮರಬನಳ್ಳಿ, ಹಾಲುಮತ ಸಮುದಾಯ ತಾಲೂಕು ಅಧ್ಯಕ್ಷ ಮುದ್ದಣ್ಣ ಬೇವಿನಳ್ಳಿ, ಕಾಳಿದಾಸ ಸಂಸ್ಥೆ ಕಾರ್ಯದರ್ಶಿ ಜಂಬಣ್ಣ, ಡೊಳ್ಳಿನ ಸಂದ ತಾಲೂಕು ಅಧ್ಯಕ್ಷ ಗುಡದಪ್ಪ ಹಲಗೇರಿ, ಪ್ರಮುಖರಾದ ಶಿವರಾಮ ಗಬ್ಬೂರು, ಹನುಮಂತ ಹಳ್ಳಿಕೇರಿ, ವರುಣ ಕುಮಾರ್​ ನೀಟ್ಟಾಲಿ, ಹನುಮಂತ ಅಬ್ಬಿಗೇರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net