ಅವಧಿಯೊಳಗೆ ಕಾಮಗಾರಿ ಪೂರ್ಣಗೊಳಿಸಿ

district koppal kamanoor village zp ceo rahul pandey visit
Published on

ಕೊಪ್ಪಳ: ದತ್ತು ಗ್ರಾಮಗಳಲ್ಲಿ ನರೇಗಾದಡಿ ಕೈಗೊಂಡ ಕಾಮಗಾರಿಗಳನ್ನು ಬರುವ ಮಾರ್ಚ್​ ಒಳಗೆ ಪೂರ್ಣಗೊಳಿಸುವಂತೆ ಜಿಪಂ ಸಿಇಒ ರಾಹುಲ್​ ರತ್ನಂ ಪಾಂಡೆಯ ಅಧಿಕಾರಿಗಳಿಗೆ ಸೂಚಿಸಿದರು.

ತಾಲೂಕಿನ ಕಾಮನೂರು ಗ್ರಾಮಕ್ಕೆ ಭೇಟಿ ನೀಡಿ ಕಾಮಗಾರಿ ಪರಿಶೀಲಿಸಿ ಮಾತನಾಡಿದರು.

ಕಾಮಗಾರಿ ಗುಣಮಟ್ಟದಿಂದ ಕೂಡಿರಲಿ. ಗ್ರಾಮಸ್ಥರ ಸಹಕಾರ ಪಡೆಯಿರಿ. ಯಾವುದೇ ಕಾರಣಕ್ಕೂ ಕಾಮಗಾರಿ ಅಪೂರ್ಣಗೊಳಿಸಬೇಡಿ. ಅಂದಾಜು ಪತ್ರಿಕೆಯಲ್ಲಿರುವಂತೆ ಕಾಮಗಾರಿ ಇರಲಿ ಎಂದು ಅಧಕಾರಿಗಳಿಗೆ ತಾಕೀತು ಮಾಡಿದರು. ಸಂಜಿವಿನಿ ಸಂಘದ ಶೆಡ್​ ನಿಮಾರ್ಣ, ಶಾಲಾ ಶೌಚಗೃಹ, ಚರಂಡಿ, ಸಿಸಿ ರಸ್ತೆ ಕಾಮಗಾರಿಗಳ ಸ್ಥಿತಿ ವೀಸಿದರು.

ಶಾಲೆಗೆ ತೆರಳಿ ಪರಿಶೀಲಿಸಿದರು. ಬಿಸಿಯೂಟ, ಶೂ, ಸಾಕ್ಸ್​, ಪಠ್ಯದ ಬಗ್ಗೆ ಮಕ್ಕಳಿಗೆ ಹಲವು ಪ್ರಶ್ನೆ ಕೇಳಿ ಉತ್ತರ ಪಡೆದರು. ಶಿಸ್ತಿನಿಂದ ಶಾಲೆಗೆ ಬರುವಂತೆ ಮಕ್ಕಳಿಗೆ ತಿಳಿಸಿದರು. ನಂತರ ಮನೆ ಮನೆಗೆ ತೆರಳಿ ಶೌಚಗೃಹ ಬಳಕೆ ಬಗ್ಗೆ ತಿಳಿವಳಿಕೆ ಮೂಡಿಸಿದರು. ವೈಯಕ್ತಿಕ ಶೌಚಗೃಹ ಬಳಕೆ ಲಾಭಗಳು, ಸರ್ಕಾರದ ಪ್ರೋತ್ಸಾಹದ ಬಗ್ಗೆ ವಿವರಿಸಿದರು. ಗ್ರಾಮಸ್ಥರೆಲ್ಲರೂ ಒಂದಾಗಿ ಒಂದು ದಿನ ಗ್ರಾಮ ಸ್ವಚ್ಛತೆಗೆ ಮುಂದಾಗಿ. ಗ್ರಾಮವನ್ನು ಮಾದರಿ ಗ್ರಾಮವಾಗಿಸುವಂತೆ ವಿನಂತಿಸಿದರು.

ತಾಪಂ ಇಒ ದುಂಡಪ್ಪ ತುರಾದಿ, ನರೇಗಾ ಸಹಾಯಕ ನಿರ್ದೇಶಕ ಯಂಕಪ್ಪ, ಪಿಡಿಒ ಸಂಗಮೇಶ ತೇರಿನ, ತೋಟಗಾರಿಕೆ ಅಧಿಕಾರಿ ವಿಜಯ ಮಹಾಂತೇಶ, ತಾಂತ್ರಿಕ ಸಂಯೋಜಕರಾದ ಯಮನೂರ, ಕವಿತಾ, ತಾಲೂಕ ಐಇಸಿ ಸಂಯೋಜಕ ದೇವರಾಜ ಪತ್ತಾರ, ತಾಂತ್ರಿಕ ಸಹಾಯಕ ಮಲ್ಲಿಕಾರ್ಜುನ ಮೇಗಳಮನಿ, ಮಂಜುನಾಥ ಮಾದಾಪುರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net