ಕಲ್ಯಾಣಿ‌ ಕಾರ್ಖಾನೆಯಲ್ಲಿ ಕಾರ್ಮಿಕ ಸಾವು

Published on
ಕೊಪ್ಪಳ : ತಾಲೂಕಿನ ಗಿಣಿಗೇರಾ ಗ್ರಾಮದ ಕಲ್ಯಾಣಿ ಫ್ಯಾಕ್ಟರಿಯಲ್ಲಿ ಬುಧವಾರ ಕೆಲಸ ಮಾಡುವ ವೇಳೆ ಕುದಿವ ನೀರಿಗೆ ಬಿದ್ದ ಕಾರ್ಮಿಕನೊಬ್ಬ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ.
ಕರ್ಕಿಹಳ್ಳಿ‌ ಗ್ರಾಮದ ಗಾಳೆಪ್ಪ ಸೆಲ್ಯೂಡಿ (36) ಮೃತ. ಗಾಳೆಪ್ಪ ಬೆಳಗಿನ ಪಾಳೆಯಲ್ಲಿ ಸ್ಲಾಗ್‌ (ಸುಡುವ ವಸ್ತು) ತೆಗೆಯುವಾಗ ನೀರಿಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು. ತಕ್ಷಣ ಸ್ಥಳದಲ್ಲಿದ್ದ ಇತರ ಕಾರ್ಮಿಕರು ಹಾಗೂ ಕಾರ್ಖಾ‌ನೆಯವರು ಕೊಪ್ಪಳದ ಕೆ.ಎಸ್. ಆಸ್ಪತ್ರೆಗೆ ದಾಖಲಿಸಿದ್ದಾರೆ. ಚಿಕಿತ್ಸೆ ನೀಡಿದ ವೈದ್ಯರು ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿ ಕಿಮ್ಸ್ ಗೆ ಕಳಿಸಿದ್ದಾರೆ. ಹುಬ್ಬಳ್ಳಿಯಲ್ಲಿ ಚಿಕಿತ್ಸೆ ಫಲಿಸದೇ ಗಾಳೆಪ್ಪ ಮೃತಪಟ್ಟಿದ್ದಾರೆ.
ಕೆಲಸ ಮಾಡುವಾಗ ಗಾಳೆಪ್ಪಗೆ ಯಾವುದೇ  ಸುರಕ್ಷಿತಾ ಪರಿಕರಗಳನ್ನು ನೀಡಿರಲಿಲ್ಲ. ಇದರಿಂದ ಅವಘಡ ನಡೆದಿದೆ. ಕಾರ್ಮಿಕರಿಗೆ ಸುರಕ್ಷತಾ ಕಿಟ್ ನೀಡದೆ ನಿರ್ಲಕ್ಷ್ಯ ತೋರಿದ ಫ್ಯಾಕ್ಟರಿಯ ಜನರಲ್‌ ಮ್ಯಾನೇಜರ್‌ ಅಂಜುಮನ್‌ ಬೈರೆ, ಶಿಫ್ಟ್‌ ನಿರ್ವಹಣೆ ಮಾಡುತ್ತಿದ್ದ ಅಮ್ಜದ್‌ ಮಜೀದ್‌ ಮತ್ತು ಕಾರ್ಮಿಕರ ಗುತ್ತಿಗೆದಾರ ಸಂತೋಷ ಪೂಜಾರ ಬೇಜಬಾಬ್ದಾರಿಯಿಂದ‌ ಸಾವಾಗಿದೆ. ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಗಾಳೆಪ್ಪ ಪತ್ನಿ ಯಮನವ್ವ ನೀಡಿದ ದೂರಿನ ಅಮ್ವಯ ಕೊಪ್ಪಳ‌ ಗ್ರಾಮೀಣ‌ಠಾಣೆಯಲ್ಲಿ ಪ್ರಕರಣ‌‌ ದಾಖಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net