ಪೋಕ್ಸೋ ಅರಿವು ಮೂಡಿಸಿ, ನ್ಯಾ.ಡಿ.ಕೆ.ಕುಮಾರ್​ ಸೂಚನೆ

district koppal judge pocso case awareness programme
Published on

ಕೊಪ್ಪಳ: ಬಹುತೇಕರು ಕಾನೂನು ಅರಿವಿಲ್ಲದೇ ತಪು$್ಪ ಮಾಡುತ್ತಾರೆ. ಕಾನೂನು ಜ್ಞಾನ ಮೂಡಿಸಿ. ಪೋಕ್ಸೋ ಬಗ್ಗೆಯೂ ತಿಳಿವಳಿಕೆ ಮೂಡಿಸಿ ಎಂದು ಪೋಕ್ಸೋ ನ್ಯಾಯಾಧೀಶ ಡಿ.ಕೆ.ಕುಮಾರ್​ ಹೇಳಿದರು.

ನಗರದ ಜಿಲ್ಲಾ ನ್ಯಾಯಾಲಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಮಾಸಿಕ ಸಭೆಯಲ್ಲಿ ಮಾತನಾಡಿದರು.

ಬಾಲಕಿಯರ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿವೆ. ಪೋಕ್ಸೋ ಅಡಿ ಅಂಥ ಅಪರಾಧಗಳಿಗೆ ಶಿೆಯಾಗುತ್ತದೆ. ಈ ಬಗ್ಗೆ ಜನರಿಗೆ ಹೆಚ್ಚಿನ ಅರಿವು ಮೂಡಿಸಬೇಕು. ಕಾಲೇಜು ಹಂತದಲ್ಲಿ ವಿದ್ಯಾರ್ಥಿಗಳಿಗೆ ಹೆಚ್ಚಿನ ತಿಳಿವಳಿಕೆ ಮೂಡಿಸಬೇಕಿದೆ. ಲೈಂಗಿಕ ದೌರ್ಜನ್ಯಕ್ಕೆ ಒಳಗಾದಲ್ಲಿ ಕಾಯ್ದೆ ಅನ್ವಯ ಶಿೆಗೆ ಗುರಿಯಾಗಬೇಕಾಗುತ್ತದೆ. ಜತೆಗೆ ಕುಟುಂಬದ ಮರ್ಯಾದೆ ಹೋಗಲಿದೆ. ಶಿಕ್ಷಕರು, ಉಪನ್ಯಾಸಕರು ಈಬಗ್ಗೆ ಮಕ್ಕಳಿಗೆ ಬುದ್ಧಿವಾದ ಹೇಳಬೇಕು. ಕಾನೂನು ಅರಿವು ನೀಡಿದಲ್ಲಿ ಅಂಥ ಕೃತ್ಯಕ್ಕೆ ಕಡಿವಾಣ ಹಾಕಬಹುದು. ಜವಾಬ್ದಾರಿಯುತ ಇಲಾಖೆಯವರು ಜನರಿಗೂ ಕಾಯ್ದೆಗಳ ಬಗ್ಗೆ ತಿಳಿ ಹೇಳುವ ಕಾರ್ಯಕ್ರಮಗಳನ್ನು ಹೆಚ್ಚಾಗಿ ಹಮ್ಮಿಕೊಳ್ಳುವಂತೆ ಸಲಹೆ ನೀಡಿದರು.

ಹಿರಿಯ ಸಿವಿಲ್​ ನ್ಯಾಯಾಧೀಶ ಮಹಾಂತೇಶ ಎಸ್​.ದರಗದ ಮಾತನಾಡಿ, ವಿವಿಧ ಇಲಾಖೆಗಳ ಸಹಯೋಗದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಿ. ಜನರಿಗೆ ಕಾನೂನು ಮಾಹಿತಿ ನೀಡಿ. ಆ್ಯಸಿಡ್​ ದಾಳಿ, ದೌರ್ಜನ್ಯಕ್ಕೆ ಒಳಗಾದ ಮಹಿಳೆಯರಿಗೆ ಸರ್ಕಾರದಿಂದ ಸಿಗುವ ಸೌಲಭ್ಯಗಳ ಮಾಹಿತಿ ಒದಗಿಸಿ. ವಿಶ್ವ ಜಲ ದಿನ, ಭೂ ದಿನ, ಮಹಿಳಾ ದಿನ ಸೇರಿ ಇತರ ದಿನಾಚರಣೆಗಳಂದು ವಿನೂತನ ಕಾರ್ಯಕ್ರಮ ಆಯೋಜಿಸಿ. ಹಿರಿಯ ನಾಗರಿಕರು, ವಿಶೇಷ ಚೇತನರು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗೆ ಕಲ್ಪಿಸಿರುವ ಸೌಲಭ್ಯಗಳು, ಕಾನೂನುಗಳ ಬಗ್ಗೆ ತಿಳಿಹೇಳುವಂತೆ ಸೂಚಿಸಿದರು.

ಜಿಪಂ ಉಪ ಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ, ಎಎಸ್ಪಿ ಹೇಮಂತ ಕುಮಾರ್​, ಎಸಿಎ್​ ಎ.ಎಚ್​.ಮುಲ್ಲಾ, ಚುನಾವಣಾ ತಹಸೀಲ್ದಾರ ರವಿ ವಸ್ತ್ರದ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net