

ಕೊಪ್ಪಳ: ರಾಷ್ಟ್ರೀಯ ಲೋಕ ಅದಾಲತ್ ಅಂಗವಾಗಿ ಜು.012ರಂದು ಜಿಲ್ಲಾದ್ಯಂತ ಎಲ್ಲ ನ್ಯಾಯಾಲಯಗಳಲ್ಲಿ ಅದಾಲತ್ ಹಮ್ಮಿಕೊಳ್ಳಲಾಗುವುದೆಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾಯಾಧೀಶ ಮಹಾಂತೇಶ ಎಸ್.ದರಗದ ತಿಳಿಸಿದರು.
ನಗರದ ಕಾನೂನು ಸೇವಾ ಪ್ರಾಧಿಕಾರ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.
ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳ ದಾವೆದಾರರು ಹಾಗೂ ಕಕ್ಷಿದಾರರು ಅದಾಲತ್ ಲಾಭ ಪಡೆಯಬಹುದು. ವ್ಯಾಜ್ಯಪೂರ್ವ ಪ್ರಕರಣಗಳ ರಾಜೀಸಂಧಾನಕ್ಕೂ ಅವಕಾಶವಿದೆ. ಪರಸ್ಪರ ರಾಜೀ ಮಾಡಿಕೊಳ್ಳುವುದರಿಂದ ಪ್ರರಕಣ ಬೇಗ ಇತ್ಯರ್ಥವಾಗಲಿದೆ. ಇಬ್ಬರಿಗೂ ಲಾಭವಾಗಲಿದೆ. ಸಿವಿಲ್, ಭೂಸ್ವಾಧಿನ, ಬ್ಯಾಂಕ್ ವಸೂಲಿ, ದರಖಾಸ್ತು, ಕಾರ್ಮಿಕ, ಎಂಎಂಆರ್ಡಿ, ಚೆಕ್ ಬೌನ್ಸ್, ಮೋಟಾರು ಅಪಘಾತ ಪರಿಹಾರ, ವೈವಾಹಿಕ ಪ್ರಕರಣ ಮತ್ತು ರಾಜಿಗೆ ಅರ್ಹವಿರುವ ಕ್ರಿಮಿನಲ್ ಪ್ರಕರಣಗಳನ್ನು ಪರಸ್ಪರ ಪರಿಹರಿಸಿಕೊಳ್ಳಬಹುದೆಂದರು. ವಾರ್ತಾಧಿಕಾರಿ ಡಾ.ಸುರೇಶ ಜಿ. ಇದ್ದರು.
ಜಿಲ್ಲಾ ಸಾಥಿ ಸಮಿತಿ: ವಿವಿಧ ಇಲಾಖೆ ಅಧಿಕಾರಿಗಳನ್ನೊಳಗೊಂಡು ಜಿಲ್ಲಾ ಸಾಥಿ ಸಮಿತಿ ರಚಿಸಲಾಗಿದೆ. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ, ತಹಸೀಲ್ದಾರ್, ಶಿಕ್ಷಣಾಧಿಕಾರಿ, ಆರೋಗ್ಯಾಧಿಕಾರಿ, ಮಹಿಳಾ ಮಕ್ಕಳ ಅಭಿವೃದ್ಧಿ ಅಧಿಕಾರಿ, ಪೊಲೀಸ್ ಅಧಿಕಾರಿಗಳು, ಪ್ಯಾನಲ್ ವಕೀಲರು, ಪ್ಯಾರಾ ಲೀಗಲ್ ಸ್ವಯಂ ಸೇವಕರು ಸದಸ್ಯರಿರುತ್ತಾರೆ. ಪರಿತ್ಯಕ್ತ ಮಕ್ಕಳನ್ನು ಗುರುತಿಸಿ ಆಧಾರ್ ಕಾರ್ಡ್ ನೋಂದಾಯಿಸುವುದು, ಅಂಥ ಮಕ್ಕಳಿಗೆ ಸರ್ಕಾರಿ ಸೌಲಭ್ಯ ದೊರೆಯುವಂತೆ ಮಾಡುವುದು ಸಮಿತಿ ಉದ್ದೇಶವೆಂದು ನ್ಯಾಯಾಧೀಶರು ವಿವರಿಸಿದರು.
ನೇಮಕಾತಿ: ಮುಖ್ಯ ಕಾನೂನು ಅಭಿರಕ್ಷಕರು, ಉಪ ಮುಖ್ಯ ಕಾನೂನು ಅಭಿರಕ್ಷಕರು ಹಾಗೂ ಸಹಾಯಕ ಕಾನೂನು ಅಭಿರಕ್ಷಕರ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಿದೆ. ಜೂ.9 ರಿಂದ 19 ರೊಳಗೆ ಅರ್ಜಿ ಸಲ್ಲಿಸಬೇಕು. ಮಾಹಿತಿಗಾಗಿ ಜಠಿಠಿಟಠ://ಟಟಟಚ್ಝ.ಛ್ಚಟ್ಠ್ಟಠಿಠ.ಜಟಡ.ಜ್ಞಿ ಹಾಗೂ ಜಠಿಠಿಟಠ://ಟಟಟಚ್ಝ.ಛ್ಚಟ್ಠ್ಟಠಿಠ.ಜಟಡ.ಜ್ಞಿ/ಛ್ಝಠಚ-ಠ್ಝಿಠಚ/ ಲಿಂಕನ್ನು ಸಂಪರ್ಕಿಸುವಂತೆ ನ್ಯಾ.ಮಹಾಂತೇಶ ದರಗದ ತಿಳಿಸಿದರು.