

ಕೊಪ್ಪಳ: ಕೊಪ್ಪಳ ರಾಜ್ಯದ ಗಾಜಾಪಟ್ಟಿ. ಇಲ್ಲಿ ದಲಿತರ ಮೇಲೆ ದೌರ್ಜನ್ಯ ಹೆಚ್ಚಿದೆ. ವಾರಕ್ಕೊಂದು ಪ್ರಕರಣ ದಾಖಲಾಗುತ್ತಿವೆ ಎಂದು ಜಿಲ್ಲಾ ನ್ಯಾಯಾಧೀಶ ಸಿ.ಚಂದ್ರಶೇಖರ ಹೇಳಿದರು.
ನಗರದ ಸಾಹಿತ್ಯ ಭವನದಲ್ಲಿ ಭಾನುವಾರ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಎಸ್ಸಿ&ಎಸ್ಟಿ ದೌರ್ಜನ್ಯ ಪ್ರಕರಣ ವಿಚಾರಣೆಗೆ ಪ್ರತ್ಯೇಕ ನ್ಯಾಯಾಧೀಶರಿರಬೇಕು. ಕೊಪ್ಪಳದಲ್ಲಿ ಇಲ್ಲದ ಕಾರಣ ನಾನೇ ವಿಚಾರಣೆ ನಡೆಸುತ್ತಿರುವೆ. ಕಳೆದ ವರ್ಷ 51, ಈ ವರ್ಷ 19 ಪ್ರಕರಣ ದಾಖಲಾಗಿವೆ. ವಾರಕ್ಕೊಂದು ದೌರ್ಜನ್ಯ ಟನೆ ನಡೆಯುತ್ತಿವೆ. ಇವು ದಾಖಲಾದ ಪ್ರಕರಣಗಳು. ಇನ್ನು ಅನೇಕ ಪ್ರಕರಣಗಳು ಪೊಲೀಸ್ಠಾಣೆ ಮೆಟ್ಟಿಲನ್ನೂ ಹತ್ತುತ್ತಿಲ್ಲ. ಹತ್ತಿದರೂ ಪ್ರತಿದೂರು ದಾಖಲಾಗುತ್ತಿವೆ. ದಲಿತರ ಮೇಲೆ ದೌರ್ಜನ್ಯ ಎಸಗಿ, ಅವರ ವಿರುದ್ಧವೇ ಕೊಲೆ ಯತ್ನ ಪ್ರಕರಣ ದಾಖಲಿಸುತ್ತಿದ್ದಾರೆ. ಪೊಲೀಸರು ಇದಕ್ಕೆ ಸಹಕಾರ ನೀಡುತ್ತಿರುವುದು ನಾಚಿಗೇಡು ಎಂದರು.
ವಿಚಾರಣೆ ವೇಳೆಯೂ ಸರಿಯಾಗಿ ಸಾ ಒದಗಿಸುತ್ತಿಲ್ಲ. ಒಂದು ಟನೆಯನ್ನು ಹತ್ತಾರು ಜನರು ಹಲವು ದೃಷ್ಟಿಕೋನದಲ್ಲಿ ನೋಡುತ್ತಾರೆ. ಆದರೆ ಸಾಗಳ ಹೇಳಿಕೆಗಳೆಲ್ಲವೂ ಒಂದೇ ಥರ ಇರುತ್ತವೆ. ಅವರನ್ನು ಕೇಳಿದರೆ ಬೇರೆ ವಿಧವಾಗಿ ಹೇಳುತ್ತಾರೆ. ಅದನ್ನೇ ಮುಖ್ಯವಾಗಿಸುವ ವಕೀಲರು ದೌರ್ಜನ್ಯ ಎಸಗುವವರನ್ನು ಕೇಸ್ನಿಂದ ರಸುತ್ತಿದ್ದಾರೆ. ಪೊಲೀಸರು ಇದಕ್ಕೆಲ್ಲ ಕುಮಕ್ಕು ನೀಡುತ್ತಿದ್ದಾರೆ. ಅಂಬೇಡ್ಕರ್ ಬಗ್ಗೆ ಅವಹೇಳನಕರ ವಿಡಿಯೋ ಮಾಡಿದ ಯುವಕನ ವಿರುದ್ಧ ಎಸ್ಸಿ&ಎಸ್ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿಲ್ಲ. ಬದಲಿಗೆ ಬೇರೆ ಸೆಕ್ಷನ್ ಹಾಕಿದ್ದಾರೆ. ಈ ಬಗ್ಗೆ ಎಸ್ಪಿಗೆ ವಿಚಾರಿಸಿದರೆ, ಅವರು ಪೊಲೀಸ್ ಅಧಿಕಾರಿಗಳನ್ನು ಸಮರ್ಥಿಸಿಕೊಳ್ಳುತ್ತಾರೆಂದು ಗಂಭೀರ ಆರೋಪ ಮಾಡಿದರು.