ನ.11ರಂದು ವಾಕ್​ ಇನ್​ ಇಂಟರ್​ವ್ಯೂವ್​

Published on

ಕೊಪ್ಪಳ: ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ವತಿಯಿಂದ ಕೊಪ್ಪಳದ ಕಿನ್ನಾಳ ರಸ್ತೆಯ ಭಾಗ್ಯನಗರದ ಎನ್​.ಜಿ.ಒ ಕಾಲೋನಿಯಲ್ಲಿ ನವೆಂಬರ್​ 11ರಂದು ವಾಕ್​ ಇನ್​ ಇಂಟರ್​ವ್ಯೂವ್​ ಅನ್ನು ಆಯೋಜಿಸಲಾಗಿದೆ.

ಈ ವಾಕ್​ ಇನ್​ ಇಂಟರ್​ವ್ಯೂವ್​ನಲ್ಲಿ ಅನ್ನಪೂರ್ಣ ಪೈನಾನ್ಸ್​ ಲಿಮಿಟೆಡ್​ ಸಂಸ್ಥೆ ಭಾಗವಹಿಸಲಿದ್ದು, ತಮ್ಮಲ್ಲಿರುವ ಖಾಲಿ ಹುದ್ದೆಗಳನ್ನು ನೇರ ಸಂದರ್ಶನದ ಮೂಲಕ ನೇಮಕಾತಿ ಮಾಡಿಕೊಳ್ಳಲಿದ್ದಾರೆ. ಅಂದು ಬೆಳಿಗ್ಗೆ 10 ರಿಂದ 1.30 ಗಂಟೆಯವರೆಗೆ ವಾಕ್​ ಇನ್​ ಇಂಟರ್​ವ್ಯೂವ್​ ನಡೆಯಲಿದ್ದು, ಎಲ್ಲರಿಗೂ ಉಚಿತ ಪ್ರವೇಶವಿರುತ್ತದೆ.

18 ರಿಂದ 30 ವಯೋಮಾನದ ಪಿಯುಸಿ, ಯಾವುದೇ ಪದವಿ, ಅಭ್ಯರ್ಥಿಗಳಿಗೆ ನೇರ ಸಂದರ್ಶನ ಮೂಲಕ ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಅರ್ಹ ವಿದ್ಯಾರ್ಹತೆ ಹೊಂದಿದ ಯುವಕ ನಿರುದ್ಯೋಗಿ ಅಭ್ಯರ್ಥಿಗಳು ತಮ್ಮ ವಿದ್ಯಾರ್ಹತೆಯ ಎಲ್ಲ ಪ್ರಮಾಣ ಪತ್ರಗಳು ಮತ್ತು ಆಧಾರ ಕಾರ್ಡಿನ ಪ್ರತಿ, ಬಯೋಡಾಟಾ ಹಾಗೂ ಪಾಸ್​ಪೋರ್ಟ್​ ಅಳತೆಯ ಭಾವಚಿತ್ರಗಳೊಂದಿಗೆ ವಾಕ್​ ಇನ್​ ಇಂಟರ್​ವ್ಯೂವ್​ನಲ್ಲಿ ಭಾಗವಹಿಸಿ ಉದ್ಯೋಗದ ನೆರವು ಪಡೆಯಬಹುದು.

ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ಜಿಲ್ಲಾ ಆಡಳಿತ ಭವನ, ಮೊದಲನೇ ಮಹಡಿ, ಕೊಪ್ಪಳ, ದೂ.ಸಂ: 08539-&220859 ಗೆ ಸಂಪರ್ಕಿಸಬಹುದು ಎಂದು ಜಿಲ್ಲಾ ಉದ್ಯೋಗಾಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net