ಜನೌಷಧ ಕೇಂದ್ರ ಮುಂದುವರೆಸಿ

district koppal jenaric medician bjp protest congress
Published on

ಕೊಪ್ಪಳ: ಬಡವರಿಗೆ ಅನುಕೂಲವಾಗಲೆಂದು ಕೇಂದ್ರ ಸರ್ಕಾರ ಜನೌಷಧ ಕೇಂದ್ರ ಆರಂಭಿಸಿದೆ. ಜನ ವಿರೋಧಿ ನೀತಿ ಅನುಸರಿಸುತ್ತಿರುವ ರಾಜ್ಯ ಸರ್ಕಾರ ಅವುಗಳನ್ನು ಬಂದ್​ ಮಾಡುತ್ತಿದೆ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ನಗರದ ಜಿಲ್ಲಾಸ್ಪತ್ರೆ ಮುಂದೆ ಶುಕ್ರವಾರ ಪ್ರತಿಭಟನೆ ನಡೆಸಿದರು.

ಇಂದು ಆರೋಗ್ಯ ಸಮಸ್ಯೆಗಳು ಹೆಚ್ಚುತ್ತಿವೆ. ಜನರು ದುಡಿದ ಹಣವನ್ನೆಲ್ಲ ಚಿಕಿತ್ಸೆ ಹಾಗೂ ಔಷಧಕ್ಕೆ ಇಡುವ ಸ್ಥಿತಿ ಇದೆ. ಇದರಿಂದ ಬಡ, ಮಧ್ಯಮ ವರ್ಗ ಜನರು ಸಂಕಷ್ಟ ಅನುಭವಿಸುತ್ತಿದ್ದಾರೆ. ಅವರಿಗೆಲ್ಲ ನೆರವಾಗಲೆಂದು ಕೇಂದ್ರ ಸರ್ಕಾರ ಜನೌಷಧ ಕೇಂದ್ರಗಳನ್ನು ಆರಂಭಿಸಿದೆ. ಇದರಿಂದ ಜನರಿಗೆ ಸಾಕಷ್ಟು ಪ್ರಯೋಜನವಾಗಿದೆ. ಬಡ&ಮಧ್ಯಮ ವರ್ಗದ ಜನರು ಅತ್ಯಂತ ಕಡಿಮೆ ಬೆಲೆಗೆ ಔಷಧ ಕೊಳ್ಳುತ್ತಿದ್ದಾರೆ. ಸಾವಿರಾರು ರೂ.ವ್ಯಯಿಸಬೇಕಿದ್ದ ಔಷಧ ನೂರು ರೂ.ಗೆ ಸಿಗುತ್ತಿದೆ. ಇದನ್ನು ಸಹಿಸದ ಸರ್ಕಾರ ಜನೌಷಧ ಕೇಂದ್ರ ಮುಚ್ಚಲು ಆದೇಶಿಸುವ ಮೂಲಕ ಬಡ ಜನರ ಬದುಕಿಗೆ ಕೊಳ್ಳಿ ಇಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರಧಾನಿ ಮೋದಿ ಜನಪ್ರಿಯ ಯೋಜನೆಗಳನ್ನು ರಾಜ್ಯ ಸರ್ಕಾರಕ್ಕೆ ಸಹಿಸಲಾಗುತ್ತಿಲ್ಲ. ಹೀಗಾಗಿ ಇಲ್ಲದ ನೆಪ ಹೇಳಿ ಮುಚ್ಚಲು ಹೊಂಚು ಹಾಕುತ್ತಿದೆ. ಇದನ್ನು ಜನರು ಸಹಿಸುವುದಿಲ್ಲ. ಕಾಂಗ್ರೆಸ್​ ದುರ್ನಡೆಗೆ ತಕ್ಕ ಪಾಠ ಕಲಿಸುತ್ತಾರೆ. ದ್ವೇಷ ರಾಜಕಾರಣ ಎಲ್ಲೆ ಮೀರಿದೆ ಎಂದು ಕಾಂಗ್ರೆಸ್​ ವಿರುದ್ಧ ದಿಕ್ಕಾರ ಕೂಗಿದರು. ಯಾವುದೇ ಕಾರಣಕ್ಕೂ ಜನೌಷಧ ಕೇಂದ್ರ ಮುಚ್ಚದಂತೆ ಆಗ್ರಹಿಸಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜ ದಢೇಸುಗೂರು, ಪ್ರಮುಖರಾದ ಡಾ.ಕೆ.ಜಿ.ಕುಲಕಣಿ, ಚಂದ್ರು ಪಾಟೀಲ್​ ಹಲಗೇರಿ, ಚಂದ್ರು ಕವಲೂರು, ಪ್ರದಿಪ್​ ಹಿಟ್ನಾಳ, ಗಣೇಶ ಹೊರತಟ್ನಾಳ, ಡಾ.ಮಹೇಶ ಗೋವನಕೊಪ್ಪ, ಮಹಾಲಕ್ಷಿ$್ಮ ಕಂದಾರಿ, ಕೀರ್ತಿ ಪಾಟೀಲ್​, ಗೀತಾ ಮುತ್ತಾಳ, ಶೋಭಾ ನಗರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net