ಜೆಡಿಎಸ್​ ಇನ್ನಷ್ಟು ಬಲಪಡಿಸೋಣ, ರಾಜ್ಯ ಕೋರ್​ ಕಮಿಟಿ ಸದಸ್ಯ ಸಿವಿಸಿ ಕರೆ

district koppal jds meeting cv chandrashekhar
Published on

ಕೊಪ್ಪಳ: ಕ್ಷೇತ್ರದಲ್ಲಿ ಜೆಡಿಎಸ್​ ಬೇರುಗಳಿವೆ. ಸಂಟನೆ ಮೂಲಕ ಮತ್ತಷ್ಟು ಬಲಪಡಿಸಬೇಕಿದೆ ಎಂದು ಜೆಡಿಎಸ್​ ರಾಜ್ಯ ಕೋರ್​ ಕಮಿಟಿ ಸದಸ್ಯ ಸಿ.ವಿ.ಚಂದ್ರಶೇಖರ ಹೇಳಿದರು.

ನಗರದ ಜೆಡಿಎಸ್​ ಜಿಲ್ಲಾ ಕಚೇರಿಯಲ್ಲಿ ಸದಸ್ಯತ್ವ ನೋಂದಣಿ ಅಭಿಯಾನ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

ಸಂಟನೆಯೇ ಪಕ್ಷದ ಬಲ. ಬರುವ ನಗರ, ಸ್ಥಳಿಯ ಸಂಸ್ಥೆ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಪಡೆಯಬೇಕಿದೆ. ನಿರಂತರ ಜನಸಂಪರ್ಕದಿಂದ ಸಂಟನೆ ಬಲಗೊಳ್ಳಲಿದೆ. ನಮ್ಮ ಕಾರ್ಯಕರ್ತರು ಈ ಜವಾಬ್ದಾರಿ ನಿರ್ವಹಿಸಬೇಕು. ಹೆಚ್ಚಿನ ಜನರನ್ನು ಪಕ್ಷಕ್ಕೆ ಸೇರಿಸಿ. ಸೆಪ್ಟಂಬರ್​ನಲ್ಲಿ ಯುನ ನಾಯಕ ನಿಖಿಲ್​ ಕುಮಾರಸ್ವಾಮಿ ಕೊಪ್ಪಳಕ್ಕೆ ಬರಲಿದ್ದಾರೆ. ಮೈತ್ರಿ ಪಕ್ಷವಾದ ಬಿಜೆಪಿ ಮುಖಂಡರು, ಕಾರ್ಯಕರ್ತರೊಡನೆ ಸ್ನೇಹ, ಸಮನ್ವಯತೆ ಸಾಧಿಸಿ. ಆಳುವ ಪಕ್ಷದ ದುರಾಡಳಿತ ಜನರಿಗೆ ತಿಳಿಸಿ ಎಂದರು.

ಜೆಡಿಎಸ್​ ಜಿಲ್ಲಾಧ್ಯಕ್ಷ ಸುರೇಶ ಭೂಮರಡ್ಡಿ ಮಾತನಾಡಿ, ಕಡಿಮೆ ಮಾತು ಹೆಚ್ಚು ಸಂಟನೆ ಆಗಬೇಕು. ಕುಮಾರಸ್ವಾಮಿ ಸಿಎಂ ಆಗಿದ್ದಾಗ ರೈತರ ಸಾಲ ಮನ್ನಾ ಮಾಡಿದರು. ಕೊಪ್ಪಳದಲ್ಲಿ ಹೆಚ್ಚಿನ ಲಾನುಭವಿಗಳಿದ್ದಾರೆ. ಎಲ್ಲರನ್ನೂ ಸಂಪರ್ಕಿಸಿ ಸದಸ್ಯತ್ವ ಮಾಡಿಸಿ. ಇದರಿಂದ ಸಂಟನೆ ಬಲಗೊಳ್ಳಲಿದೆ ಎಂದು ಸಲಹೆ ನೀಡಿದರು.

ಸಾಂಸತಿಕ ವಿಭಾಗ ಜಿಲ್ಲಾಧ್ಯಕ್ಷ ಮಂಜುನಾಥ ಸೊರಟೂರ, ಒಬಿಸಿ ಜಿಲ್ಲಾಧ್ಯಕ್ಷ ಕರಿಯಪ್ಪ ಹಾಲವರ್ತಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶರಣಪ್ಪ ಜಡಿ, ಹಿರಿಯ ಮುಖಂಡ ಸಂಗಮೇಶ ಡಂಬಳ ಮಾತನಾಡಿದರು.

ಬ್ಲಾಕ್​ ಏಜೆಂಟ್​ಗಳ ನೇಮಕ, ಮನೆ ಭೇಟಿ, ಸಾಮಾಜಿಕ ಜಾಲತಾಣ ನಿರ್ವಹಣೆ ಕುರಿತು ಕಾರ್ಯಕರ್ತರಿಗೆ ತರಬೇತಿ ನೀಡಲು ಸಭೆಯಲ್ಲಿ ನಿರ್ಧರಿಸಲಾಯಿತು.

ಜಿಲ್ಲಾ ಉಪಾಧ್ಯಕ್ಷ ಮೂರ್ತೆಪ್ಪ ಹಿಟ್ನಾಳ, ಚುನಾವಣಾ ಅಧಿಕಾರಿ ಶಿವಕುಮಾರ್​ ಏಣಗಿ, ಜಿಲ್ಲಾ ಕ್ರೀಡಾ ವಿಭಾಗದ ಅಧ್ಯಕ್ಷ ಸೈಯದ್​ ಮೊಹಮ್ಮದ್​ ಹುಸೇನಿ ಬಲ್ಲೆ, ತಾಲೂಕು ಅಧ್ಯಕ್ಷ ವೀರೇಶ್​ ಗೌಡ ದಳಪತಿ, ನೇಕಾರ ವಿಭಾಗ ಜಿಲ್ಲಾ ಅಧ್ಯಕ್ಷ ಮಾರುತಿ, ಒಬಿಸಿ ತಾಲೂಕು ಅಧ್ಯಕ್ಷ ಬಸವರಾಜ್​, ಗಂಗಾವತಿ ತಾಲೂಕ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್​, ಕನಕಗಿರಿ ತಾಲೂಕ ಅಧ್ಯಕ್ಷ ನೀಲಪ್ಪ,ಯುವ ಘಟಕದ ಜಿಲ್ಲಾಧ್ಯಕ್ಷ ರವಿಕುಮಾರ್​ ನೀರಲಗಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net