

ಕೊಪ್ಪಳ: ಪಂಚ ಗ್ಯಾರಂಟಿ ಯೋಜನೆ ಹೆಸರಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್, ಜನತೆಗೆ ಸರಿಯಾಗಿ ಯೋಜನೆ ಮುಟ್ಟಿಸುತ್ತಿಲ್ಲವೆಂದು ಆರೋಪಿಸಿ ಜೆಡಿಎಸ್ ಕಾರ್ಯಕರ್ತರು ಗುರುವಾರ ನಗರದ ಬಸವೇಶ್ವರ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ಗೃಹ ಜ್ಯೋತಿ, ಗೃಹ ಲಕ್ಷಿ$್ಮ, ಶಕ್ತಿ, ಅನ್ನಭಾಗ್ಯ, ಯುವನಿಧಿ ಯೋಜನೆಗಳ ಅನುಷ್ಠಾನದಲ್ಲಿ ಸರ್ಕಾರ ವಿಲವಾಗಿದೆ. ವಿದ್ಯುತ್ ದರ ಏರಿಸಿದ್ದು, ಸರಬರಾಜು ಸಮರ್ಪಕವಾಗಿಲ್ಲ. ವಿತರಣಾ ಕಂಪನಿಗಳಿಗೆ ಅನುದಾನ ನೀಡಿಲ್ಲ. ಗೃಹ ಲಕ್ಷಿ$್ಮ ಯೋಜನೆಯಡಿ 7,517 ಕೋಟಿ ರೂಪಾಯಿ ಬಾಕಿ ಉಳಿಸಿಕೊಂಡಿದೆ. ಚುನಾವಣೆ ಸಮಯದಲ್ಲಿ ಮಾತ್ರ ಜನರ ಖಾತೆಗೆ ಹಣ ಸೇರುತ್ತದೆ. ಸಚಿವರು ದುಡ್ಡು ಕೊಡಿ ಎಂದರೆ, ಇದೇನು ವೇತನ ಅಲ್ಲವೆಂದು ಉಡಾೆ ಉತ್ತರ ನೀಡಿದ್ದಾರೆ. ಅನ್ನಭಾಗ್ಯದಡಿ 5,786 ಕೋಟಿ ರೂ. ಬಾಕಿ ಇದೆ. ಯುವನಿಧಿ ಸಂಪೂರ್ಣ ವಿಲವಾಗಿದೆ ಎಂದು ಆರೋಪಿಸಿದರು.
ಮೈಕ್ರೋ ಫೈನಾನ್ಸ್ ಸಾಲ ವಸೂಲಿ ಕಿರುಕುಳಕ್ಕೆ ಲಕ್ಷಾಂತರ ಕುಟುಂಬಗಳು ತುತ್ತಾಗಿವೆ. ಹಾಲು, ಬಸ್, ವಿದ್ಯುತ್ ದರ ಏರಿಕೆಯಾಗಿದ್ದು, ಮಧ್ಯಮ ವರ್ಗದ ಜನರು ಬದುಕು ದುಸ್ಥರವಾಗಿದೆ. ರೈತರು ಆತ್ಮಹತ್ಯೆ ಮಾಡಿಕೊಂಡರೂ ಸರ್ಕಾರ ಕಣ್ಮುಚ್ಚಿ ಕುಳಿತಿದೆ. ಮಾದಕ ವಸ್ತು ಮಾರಾಟ ಹೆಚ್ಚಾಗಿದೆ. ಅಪರಾಧಗಳು ನಿಯಂತ್ರಣ ತಪ್ಪಿವೆ. ಕಿಡಿಗೇಡಿಗಳು ಪೊಲೀಸ್ ಠಾಣೆ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದು ಬಿದ್ದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯಪಾಲರು ಮಧ್ಯ ಪ್ರವೇಶ ಮಾಡಬೇಕು. ಗಾಢ ನಿದ್ರೆಯಲ್ಲಿರುವ ಕಾಂಗ್ರೆಸ್ ಸರಕಾರಕ್ಕೆ ಚಾಟಿ ಬೀಸಬೇಕು. ಗ್ಯಾರಂಟಿ ಯೋಜನೆಗಳು ಸರಿಯಾಗಿ ಅನುಷ್ಠಾನಗೊಳ್ಳುವಂತೆ ನೋಡಿಕೊಳ್ಳಬೇಕೆಂದು ಒತ್ತಾಯಿಸಿದರು. ಬಳಿಕ ತಹಸೀಲ್ದಾರ್ ವಿಠ್ಠಲ್ ಚೌಗಲಾ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಜೆಡಿಎಸ್ ಜಿಲ್ಲಾಧ್ಯಕ್ಷ ಸುರೇಶ ಭೂಮರಡ್ಡಿ, ವಕ್ತಾರ ಮಲ್ಲನಗೌಡ ಕೋನನಗೌಡ, ಪ್ರಮುಖರಾದ ಮಂಜುನಾಥ ಸೊರಟೂರು, ಮೂರ್ತೆಪ್ಪ ಗಿಣಗೇರಿ, ದೇವಪ್ಪ ಹಳ್ಳಿಕೇರಿ, ಶರಣಪ್ಪ ಜಡಿ, ಸೋಮನಗೌಡ, ಶಿವಕುಮಾರ ಮಹಾಂತಯ್ಯನಮಠ, ರವಿ ಮಾಗಳ, ವಿರೇಶಗೌಡ ಚಿಕ್ಕ ಬಗನಾಳ, ಯಮನಪ್ಪ ಕಟಿಗಿ, ಶಾಂತಕುಮಾರ, ಮಹೇಶ ಕಂದಾರಿ, ಮಾರುತಿ ಪೇಮೀರ್, ವಸಂತ ಹಟ್ಟಿ, ಮಂಜುನಾಥ ವದಗನಾಳ, ಯಂಕಪ್ಪ ಮಣೆಗಾರ, ಲೋಕೇಶ ಬಾರಕೇರ ಇತರರಿದ್ದರು.