

ಕೊಪ್ಪಳ: ನಗರಕ್ಕೆ ಹೊಂದಿಕೊಂಡು ಕಾರ್ಖಾನೆ ನಿರ್ಮಿಸಲು ಖಾಸಗಿ ಉಕ್ಕು ಕಂಪನಿಯೊಂದು ರಾಜ್ಯ ಸರ್ಕಾರದದೊಂದಿಗೆ 54 ಸಾವಿರ ಕೋಟಿ ರೂಪಾಯಿ ವೆಚ್ಚದ ಯೋಜನೆಗೆ ಸಹಿ ಹಾಕಿರುವುದು ಆತಂಕಕಾರಿ ಬೆಳವಣಿಗೆ ಎಂದು ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯ ಸಿ.ವಿ.ಚಂದ್ರಶೇಖರ ಹೇಳಿದ್ದಾರೆ.
ಕೊಪ್ಪಳದಲ್ಲಿ ನೂರಕ್ಕೂ ಹೆಚ್ಚು ಕೈಗಾರಿಕೆಗಳು ಸ್ಥಾಪನೆಯಾಗಿ ಸಮುದಾಯದ ಮೇಲೆ ದುಷ್ಪರಿಣಾವ ಬೀರಿವೆ. ಕಾರ್ಖಾನೆಗಳನ್ನು ವಿರೋಧಿಸಿ ಅನೇಕ ಪ್ರತಿಭಟನೆಗಳು ನಡೆದಿವೆ. ಕಾನೂನು ಗಾಳಿಗೆ ತೂರಿ ವಿಷಾನಿಲ ಹೊರಬಿಟ್ಟು ಜನರ ಆರೋಗ್ಯಕ್ಕೆ ಹಾನಿ ಮಾಡುತ್ತಿವೆ. ಸದ್ಯ 54ಸಾವಿರ ಕೋಟಿ ವೆಚ್ಚದ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ ಸ್ಥಾಪನೆಗೆ ಸರ್ಕಾರ ಸಮ್ಮತಿಸಿರುವುದು ದುರಂತ.
ಸಹಿ ಹಾಕಲ್ಪಟ್ಟ ಯೋಜನೆ ಕೊಪ್ಪಳ ನಗರವನ್ನು ನರಕವನ್ನಾಗಿಸುವ ಸಾಧ್ಯತೆ ಇದೆ. ರಾಜ್ಯ ಸರ್ಕಾರ ಜನರ ಭಾವನೆ ಅರಿತು ನಿರ್ಧಾರ ಕೈಗೊಳ್ಳಬೇಕು. ಜನರ ವಿರೋಧವಿದ್ದು ಯೋಜನೆ ಮರು ಪರಿಶೀಲನೆ ನಡೆಸಬೇಕು. ಜನರು ಹಾಗೂ ಇಲ್ಲಿನ ನೈಸರ್ಗಿಕ ಸಂಪನ್ಮೂಲಗಳ ರಕ್ಷಣೆ ಹೊಣೆ ಸರ್ಕಾರದ ಮೇಲಿದೆ. ಈ ನಿಟ್ಟಿನಲ್ಲಿ ಸಿಎಂ ಸಿದ್ದರಾಮಯ್ಯ ಸೂಕ್ತ ನಿರ್ಧಾರ ಕೈಗೊಳ್ಳಬೇಕು. ಈಬಗ್ಗೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರೊಂದಿಗೆ ಚರ್ಚಿಸುವುದಾಗಿ ತಿಳಿಸಿದ್ದಾರೆ.