ನವೋದಯ ವಿದ್ಯಾಲಯ ಪ್ರವೇಶ ಅವಧಿ ವಿಸ್ತರಣೆ

Published on

ಕೊಪ್ಪಳ: 2025-26ನೇ ಸಾಲಿನಲ್ಲಿ ಕುಕನೂರು ಜವಾಹರ ನವೋದಯ ವಿದ್ಯಾಲಯದಲ್ಲಿ 9 ಮತ್ತು 11ನೇ ತರಗತಿಗೆ ಪ್ರವೇಶಕ್ಕಾಗಿ ಆನ್​ಲೈನ್​ ಮೂಲಕ ಅರ್ಜಿ ಆಹ್ವಾನಿಸಿದ್ದು, ಸಲ್ಲಿಕೆ ಅವಧಿ ನ.9ವರೆಗೆ ವಿಸ್ತರಿಸಲಾಗಿದೆ.

9ನೇ ತರಗತಿ ಪ್ರವೇಶಕ್ಕಾಗಿ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು https://cbseitms.nic.in/2024/nvsixನಲ್ಲಿ ಹಾಗೂ 11ನೇ ತರಗತಿ ಪ್ರವೇಶಕ್ಕಾಗಿ ಅರ್ಜಿ ಸಲ್ಲಿಸುವ https://cbseitms.nic.in/2024/nvsxi-11ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳ ಪ್ರವೇಶ ಪರೀೆ 2025ರ ಫೆಬ್ರವರಿ 8ರಂದು ನಡೆಯಲಿದೆ ಎಂದು ಕುಕನೂರು ಜವಾಹರ ನವೋದಯ ವಿದ್ಯಾಲಯದ ಪ್ರಾಚಾರ್ಯರು ತಿಳಿಸಿದ್ದಾರೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net