ತೆರೆಗೆ ಸರಿದ ಉಪ ಚುನಾವಣೆ ಚರ್ಚೆ ? ಜನಾರ್ದನ ರೆಡ್ಡಿಗೆ ಜಾಮೀನು

district koppal janardhana reddy mla gangavathi jail release
Published on

ವಿಜಯವಾಣಿ ವಿಶೇಷ ಕೊಪ್ಪಳ

ಅನರ್ಹ ಶಾಸಕ ಗಾಲಿ ಜನಾರ್ದನ ರೆಡ್ಡಿ ವಿರುದ್ಧದ ಶಿೆಗೆ ಹೈದ್ರಾಬಾದ್​ ಹೈಕೋರ್ಟ್​ ತಡೆ ನೀಡಿದೆ. ಜಾಮೀನು ಮಂಜೂರಾಗಿದ್ದು, ರೆಡ್ಡಿ ಶಾಸಕ ಸ್ಥಾನ ಉಳಿದುಕೊಂಡಿದೆ. ಅನರ್ಹತೆ ಬೆನ್ನಲ್ಲೆ ಎದ್ದಿದ್ದ ಉಪ ಚುನಾವಣೆ ಚರ್ಚೆ ಹಿನ್ನೆಲೆಗೆ ಸರಿಯುವಂತಾಗಿದೆ.

ರಾಜ್ಯ ರಾಜಕೀಯದಲ್ಲಿ ವಿಭಿನ್ನ ರಾಜಕಾರಣಕ್ಕೆ ಹೆಸರಾದ ರೆಡ್ಡಿ, ಅಕ್ರಮ ಗಣಿಗಾರಿಕೆ ಮೂಲಕವೂ ಕುಖ್ಯಾತಿ ಪಡೆದಿದ್ದಾರೆ. ಓಬಳಾಪುರಂ ಮೈನಿಂಗ್​ ಪ್ರಕರಣದಲ್ಲಿ ಈ ಮೊದಲು ಜೈಲು ಸೇರಿದಾಗಲೂ ರಾಜಕೀಯ ಭವಿಷ್ಯ ಮುಗಿಯಿತು ಎಂದು ರಾಜ್ಯ ರಾಜಕೀಯ ಲೆಕ್ಕ ಹಾಕಿತ್ತು. ಆದರೆ, ಜಾಮೀನು ಮೇಲೆ ಹೊರ ಬಂದು ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಸ್ಥಾಪಿಸಿ ಗಂಗಾವತಿ ಶಾಸಕರಾಗಿದ್ದಾರೆ. ಬಳಿಕ ಕಮಲ ಪಾಳಯ ಸೇರಿದ್ದರು. ಇದಾದ ವರ್ಷದಲ್ಲಿ ಸಿಬಿಐ ಕೋರ್ಟ್​ ಬಳ್ಳಾರಿ ಪ್ರವೇಶಕ್ಕೆ ಅವಕಾಶ ಮಾಡಿಕೊಡುತ್ತಲೇ ಮತ್ತೆ ಬಳ್ಳಾರಿಯಲ್ಲಿ ತಮ್ಮ ರಾಜಕೀಯ ಸಾಮ್ರಾಜ್ಯ ವಿಸ್ತರಣೆಗೆ ಮುಂದಡಿ ಇಟ್ಟಿದ್ದರು.

ಇದೇ ವೇಳೆ ಸಿಬಿಐ ಕೋರ್ಟ್​ ನೀಡಿದ ತೀರ್ಪು ರೆಡ್ಡಿ ಮತ್ತೆ ಜೈಲು ಸೇರುವಂತೆ ಮಾಡಿತು. ಮೇ 6ರಂದು ರೆಡ್ಡಿಗೆ 7 ವರ್ಷ ಸಜೆ ವಿಧಿಸಿ ವಿಚಾರಣಾಧೀನ ನ್ಯಾಯಾಲಯ ತೀರ್ಪು ನೀಡಿದ್ದು ಗಣಿ ಧಣಿ ರಾಜಕೀಯಕ್ಕೆ ಬಿದ್ದ ಕೊಡಲಿ ಪೆಟ್ಟು ಎಂಬ ಚರ್ಚೆ ನಡೆದವು. ಈ ಬೆನ್ನಲ್ಲೇ ವಿಧಾನಸಭೆ ಕಾರ್ಯಾಲಯವೂ ರೆಡ್ಡಿ ಶಾಸಕ ಸ್ಥಾನ ಅನರ್ಹಗೊಳಿಸಿ ಆದೇಶಿಸಿದ್ದು ಗಾಲಿಗೆ ನೀಡಿದ ಬಲವಾದ ಹೊಡೆತವೆಂದೇ ಹೇಳಲಾಗಿತ್ತು. ಸಿಬಿಐ ಕೋರ್ಟ್​ ತೀರ್ಪು ಪ್ರಶ್ನಿಸಿ ಹೈಕೋರ್ಟ್​ ಮೆಟ್ಟಿಲೇರಿದರೂ 35 ದಿನಗಳವರೆಗೆ ಯಾವೊಂದು ಪ್ರಕ್ರಿಯೆ ನಡೆದಿರಲಿಲ್ಲ. ಬುಧವಾರ ಹೈದ್ರಾಬಾದ್​ ಹೈಕೋರ್ಟ್​ ರೆಡ್ಡಿ ವಿರುದ್ಧದ ಶಿೆಗೆ ತಡೆ ನೀಡಿದ್ದಲ್ಲದೇ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.

ಅನರ್ಹ ಶಾಸಕ ಗಾಲಿ ಜನಾರ್ದನ ರೆಡ್ಡಿ ಅಕ್ರಮ ಗಣಿಗಾರಿಕೆ ಪ್ರಕರಣದ ತೀರ್ಪಿನಲ್ಲಿ ಜೈಲು ಸೇರುವ ಜತೆಗೆ ಶಾಸಕ ಸ್ಥಾನವನ್ನೂ ಕಳೆದುಕೊಂಡಿದ್ದರು. ಈ ಬೆನ್ನಲ್ಲೇ ಗಂಗಾವತಿ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯಲಿದೆ ಎಂಬ ವಿಷಯ ಮುನ್ನೆಲೆಗೆ ಬಂದಿತ್ತು. ಕೈ&ಕಮಲ ಪಾಳಯದಲ್ಲಿ ಆಕಾಂಗಳ ಪಟ್ಟಿ ಬೆಳೆದಿದೆ. ಮುಖ್ಯವಾಗಿ ಆಡಳಿತಾರೂಢ ಕಾಂಗ್ರೆಸ್​ನಲ್ಲಿ ಉಪ ಚುನಾವಣೆ ಸದ್ದು ಹೆಚ್ಚಿತ್ತು. ಮಾಜಿ ಶಾಸಕ ಇಕ್ಬಾಲ್​ ಅನ್ಸಾರಿ, ಮಾಜಿ ಸಂಸದ ಸಂಗಣ್ಣ ಕರಡಿ, ಹಿಟ್ನಾಳ ಬೆಂಬಲಿಗರು ಅನೇಕರ ಹೆಸರುಗಳು ತೇಲಿ ಬಂದವು. ಸಿಎಂ ಸಿದ್ದರಾಮಯ್ಯ ಹಾದಿಯಾಗಿ ಸಚಿವರು, ರಾಜ್ಯ ನಾಯಕರೂ ಚುನಾವಣೆ ನಡೆದರೆ ಎದುರಿಸುವ ಮಾತಾಡುವ ಮೂಲಕ ಆಕಾಂಗಳ ನಿರೀೆ ಹೆಚ್ಚಿಸಿದ್ದರು.

ಬೈ ಎಲೆಕ್ಷನ್​ ಚರ್ಚೆ ಹಿನ್ನೆಲೆಗೆ

ರೆಡ್ಡಿ ಶಾಸಕ ಸ್ಥಾನ ಕಳೆದುಕೊಳ್ಳುತ್ತಲೇ ಮುನ್ನೆಲೆಗೆ ಬಂದಿದ್ದ ಬೈ ಎಲೆಕ್ಷನ್​ ಗುಂಗು ಹಿನ್ನೆಲೆಗೆ ಸರಿದಿದೆ. ನಿಯಮಾವಳಿ ಅನುಸಾರ ಕ್ರಿಮಿನಲ್​ ಪ್ರಕರಣಗಳಲ್ಲಿ 3 ವರ್ಷಕ್ಕಿಂತ ಹೆಚ್ಚಿನ ಶಿೆಯಾದರೆ ಜನಪ್ರತಿನಿಧಿಗಳು ತಮ್ಮ ಹುದ್ದೆ ಕಳೆದುಕೊಳ್ಳಲಿದ್ದಾರೆ. ಇದೇ ನಿಯಮದಡಿ ವಿಧಾನಸಭೆ ಕಾರ್ಯಾಲಯ ಜನಾರ್ದನ ರೆಡ್ಡಿ ಶಾಸಕ ಸ್ಥಾನ ಅನರ್ಹಗೊಳಿಸಿ ಆದೇಶಿಸಿತ್ತು. ಸದ್ಯ ರೆಡ್ಡಿ ವಿರುದ್ಧದ ಶಿೆಗೆ ತಡೆ ಸಿಕ್ಕಿದ್ದು ಮುಂದಿನ ಆದೇಶದವರೆಗೆ ತಡೆ ಇರಲಿದೆ. ಹೀಗಾಗಿ ರೆಡ್ಡಿ ಶಾಸಕ ಸ್ಥಾನ ಮುಂದುವರೆಯಲಿದ್ದು ಉಪ ಚುನಾವಣೆ ವಿಷಯವೂ ತೆರೆಗೆ ಸರಿಯಲಿದೆ.

ಕಾರ್ಯಕರ್ತರಿಗೆ ರಿಲ್ಯಾಕ್ಸ್​

ಇನ್ನು ಶಾಸಜ ರೆಡ್ಡಿ ಜೈಲು ಸೇರುತ್ತಲೇ ಅವರ ಬೆಂಬಲಿಗರು ರಾಜಕೀಯ ಚಟುವಟಿಕೆಗಳಿಂದ ದೂರ ಉಳಿದಿದ್ದರು. ಪತ್ರಿ ಅರುಣಾ ಲಕ್ಷಿ$್ಮ ಸಹ ಬಳ್ಳಾರಿಯಿಂದಲೇ ಕಾರ್ಯಕರ್ತರ ಸಭೆ ನಡೆಸಿ ಧೈರ್ಯ ತುಂಬುವ ಕೆಲಸ ಮಾಡಿದ್ದರು. ದೇವರಿಗೆ ಮೊರೆ ಹೋಗಿ ಪತಿ ಬಿಡುಗಡೆಗೆ ಕೋರಿಕೆ ಸಲ್ಲಿಸಿದ್ದರು. ನಿರೀೆಯಂತೆ ಬುಧವಾರ ರೆಡ್ಡಿಗೆ ಜಾಮೀನು ದೊರೆತಿದ್ದು ಕಾರ್ಯಕರ್ತರಿಗೆ ಜೀವ ಮರಳಿದಂತಾಗಿದೆ. ಗಂಗಾವತಿಯಲ್ಲಿ ಮತ್ತೆ ಗಣಿಧಣಿ ಚಟುವಟಿಕೆಗಳು ಗರಿಗೆದರಲು ಅವಕಾಶ ದೊರೆತಂತಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net