ಕೊಪ್ಪಳದಲ್ಲಿ ಉಪನ್ಯಾಸ ಹಾಗೂ ಜಾನಪದ ಗಾಯನ ಕಾರ್ಯಕ್ರಮ

Published on

ಕೊಪ್ಪಳ: ಕರ್ನಾಟಕ ಜಾನಪದ ಅಕಾಡೆಮಿಯಿಂದ ಗಿಡ-ಗಿಡಕ ಕೂತು ಕೈಮಾಡಿ ಕರೀತಾವ... ಉಪನ್ಯಾಸ ಹಾಗೂ ಜಾನಪದ ಗಾಯನ ಕಾರ್ಯಕ್ರಮ ಏ.17 ರಂದು ಬೆಳಗ್ಗೆ 10 ಗಂಟೆಗೆ ನಗರದ ಶ್ರೀ ಗವಿಸಿದ್ಧೇಶ್ವರ ಬಿ.ಇಡಿ ಮಹಾವಿದ್ಯಾಲಯದಲ್ಲಿ ಆಯೋಜಿಸಲಾಗಿದೆ.

ಕರ್ನಾಟಕ ಜಾನಪದ ಅಕಾಡೆಮಿಯ ಅಧ್ಯಕ್ಷರಾದ ಗೊಲ್ಲಹಳ್ಳಿ ಶಿವಪ್ರಸಾದ್​ ಕಾರ್ಯಕ್ರಮ ಉದ್ಘಾಟಿಸುವರು. ಶ್ರೀ ಗವಿಸಿದ್ಧೇಶ್ವರ ಬಿ.ಇಡಿ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಎಸ್​.ಬಿ.ಕಂಬಾರ ಅಧ್ಯಕ್ಷತೆ ವಹಿಸುವರು. ಸಾಹಿತಿ ಡಾ. ಸಿದ್ದಲಿಂಗಪ್ಪ ಕೊಟ್ಟೆಕಲ್​ ಅವರು "ಕೊಪ್ಪಳ ಪರಿಸರದ ಜನಪದ ಭಾಷಾ ವೈಶಿಷ್ಟತೆ' ವಿಷಯ ಕುರಿತು ಉಪನ್ಯಾಸ ನೀಡುವರು. ಕರ್ನಾಟಕ ಜಾನಪದ ಅಕಾಡೆಮಿಯ ಸದಸ್ಯಡಾ. ಜೀವನಸಾಬ್​ ವಾಲಿಕಾರ್​ ಬಿನ್ನಾಳ ಪ್ರಾಸ್ತಾವಿಕ ನುಡಿಗಳನ್ನಾಡುವರು.

ಪದ್ಮಶ್ರೀ ಪುರಸತ ಭೀಮವ್ವ ಶಿಳ್ಳೆಕ್ಯಾತರ, ರಾಜ್ಯೋತ್ಸವ ಪ್ರಶಸ್ತಿ ಪುರಸತ ಪ್ರೊ.ಅಲ್ಲಮಪ್ರಭು ಬೆಟ್ಟದೂರು ಮತ್ತು ಎ.ಎಮ್​.ಮದರಿ ಅವರಿಗೆ ಗೌರವ ಸನ್ಮಾನ ನೀಡಲಾಗುವುದು. ಮುಖ್ಯ ಅತಿಥಿಗಳಾಗಿ ಬಳ್ಳಾರಿ ಜಿಲ್ಲೆಯ ಜಾನಪದ ಮಹಾಕಾವ್ಯ ಗಾಯನ ಕಲಾವಿದರಾದ ದಳವಾಯಿ ಚಿತ್ತಪ್ಪ, ಕೊಪ್ಪಳ ಕನ್ನಡ ಮತ್ತು ಸಂಸತಿ ಇಲಾಖೆ ಸಹಾಯಕ ನಿರ್ದೇಶಕ ಕೊಟ್ರೇಶ್​ ಮರಬನಹಳ್ಳಿ, ಕರ್ನಾಟಕ ಜಾನಪದ ಅಕಾಡೆಮಿಯ ಸದಸ್ಯ ಮೆಹಬೂಬ ಕಿಲ್ಲೆದಾರ ಪಾಲ್ಗೊಳ್ಳುವರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net