ಆರೋಗ್ಯವೇ ನಿಜವಾದ ಭಾಗ್ಯ, ಚೈತನ್ಯಾನಂದ ಸ್ವಾಮೀಜಿ ಅನಿಸಿಕೆ, ವಿಜಯವಾಣಿ ಸಹಯೋಗದಲ್ಲಿ ಯೋಗ ದಿನಾಚರಣೆ

international yoga day celebration in koppal by Vijayavani and KS hospital team
ಕನ್ನಡದ ನಂ.1 ದಿನಪತ್ರಿಕೆ ವಿಜಯವಾಣಿ ಹಾಗೂ ಕೆ.ಎಸ್​.ಆಸ್ಪತ್ರೆ ಮತ್ತು ನರ್ಸಿಂಗ್​ ಕಾಲೇಜಿನಿಂದ ಕೊಪ್ಪಳದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ರಾಮಕೃಷ್ಣ ಆಶ್ರಮದ ಚೈತನ್ಯಾನಂದ ಸ್ವಾಮೀಜಿ ಉದ್ಘಾಟಿಸಿದರು. ಕೆ.ಎಸ್​.ಆಸ್ಪತ್ರೆ ಮುಖ್ಯಸ್ಥ ಡಾ.ಬಸವರಾಜ ಕ್ಯಾವಟರ್​, ನ್ಯಾಷನಲ್​ ಪ್ಯಾರಾಮೆಡಿಕಲ್​ ಕಾಲೇಜಿನ ಡಾ.ಸುಮಾ, ದೈಹಿಕ ನಿರ್ದೇಶಕ ವಿನೋದ ಕುಮಾರ್​, ಡಾ.ಶಿವನಗೌಡ ಪಾಟೀಲ್​, ಲೆಕ್ಕ ಪರಿಶೋಧಕ ವಿ.ಬಿ.ಅಂಗಡಿ ಇದ್ದರು.
Published on

ಕೊಪ್ಪಳ: ಕನ್ನಡದ ನಂ.1ದಿನ ಪತ್ರಿಕೆ ವಿಜಯವಾಣಿ ಹಾಗೂ ಕೆ.ಎಸ್​.ಆಸ್ಪತ್ರೆ ಮತ್ತು ನರ್ಸಿಂಗ್​ ಕಾಲೇಜಿನಿಂದ ಅಂತಾರಾಷ್ಟ್ರೀ ಯೋಗ ದಿನಾಚರಣೆ ಅಂಗವಾಗಿ ನಗರದ ಎಂ.ಪಿ.ಪ್ಯಾಲೇಸ್​ನಲ್ಲಿ ಶುಕ್ರವಾರ ಯೋಗ ದಿನ ಆಚರಿಸಲಾಯಿತು. 280ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿ ಭಾಗಿಯಾಗಿ ಕಾರ್ಯಕ್ರಮ ಯಶಸ್ವಿಗೊಳಿಸಿದರು.

ಕಾರ್ಯಕ್ರಮದ ಸಾನ್ನಿಧ್ಯವಹಿಸಿದ್ದ ರಾಮಕೃಷ್ಣ ಆಶ್ರಮದ ಚೈತನ್ಯಾನಂದ ಸ್ವಾಮೀಜಿ ಯೋಗದಲ್ಲಿ ಭಾಗಿಯಾಗಿ ಧ್ಯಾನ ಮಾಡುವ ಮೂಲಕ ಗಮನ ಸೆಳೆದರು. ಐದು ವರ್ಷದ ಬಾಲಕಿಯಿಂದ ಹಿಡಿದು 75 ವರ್ಷದ ವೃದ್ಧರವರೆಗೆ ಎಲ್ಲರೂ ಯೋಗಾಸನ ಮಾಡುವ ಮೂಲಕ ಕಾರ್ಯಕ್ರಮದ ಮೆರಗು ಹೆಚ್ಚಿಸಿದರು.

ನಂತರ ಕಾರ್ಯಕ್ರಮ ಉದ್ಘಾಟಿಸಿದ ಚೈತನ್ಯಾನಂದ ಸ್ವಾಮೀಜಿ, ಆರೋಗ್ಯವೇ ನಿಜವಾದ ಭಾಗ್ಯ. ನಾವು ಚಿಕ್ಕಂದಿನಲ್ಲಿದ್ದಾಗ ಆರೋಗ್ಯಕ್ಕಾಗಿ ಖರ್ಚು ಮಾಡುತ್ತಿದ್ದಿದ್ದು ಕಡಿಮೆ ಹಣ. ಆದರೆ, ಇಂದು ದುಡಿತದ ಬಹುಪಾಲು ಹಣವನ್ನು ಆರೋಗ್ಯಕ್ಕೆ ಮೀಸಲಿಡಬೇಕಾದ ಸ್ಥಿತಿ ಇದೆ. ಮನಸ್ಸು, ದೇಹ ಎರಡೂ ಸದೃಢವಾಗಿರಬೇಕೆಂದು ಸ್ವಾಮಿ ವಿವೇಕಾನಂದರು ಪ್ರತಿಪಾದಿಸಿದರು. ಇಂದಿನ ಜೀವನ ಶೈಲಿ ಎಲ್ಲರನ್ನು ರೋಗ ಗ್ರಸ್ಥರನ್ನಾಗಿಮಾಡುತ್ತಿದೆ. ಅದರಿಂದ ಹೊರ ಬರಲು ನಮ್ಮ ಪೂರ್ವಜರು ಯೋಗದ ಮೂಲಕ ಪರಿಹಾರ ಕಂಡುಕೊಂಡಿದ್ದಾರೆ. ಅದನ್ನು ನಾವು ಮರೆತಿದ್ದೇವೆ. ನಿತ್ಯ ಜೀವನದಲ್ಲಿ ಅಳವಡಿಸಿಕೊಂಡಲ್ಲಿ ಆರೋಗ್ಯಯುತ ಜೀವನ ಸಾಗಿಸಬಹುದು. ಈ ಬಗ್ಗೆ ಯುವಕರಿಗೆ ತಿಳಿಸಿಕೊಡುವ ನಿಟ್ಟಿನಲ್ಲಿ ವಿಜಯವಾಣಿ ತಂಡ ಹಾಗೂ ಆಸ್ಪತ್ರೆಯವರು ತೋರಿದ ಕಾಳಜಿ ಶ್ಲಾನೀಯ ಎಂದರು.

ಗವಿಸಿದ್ದೇಶ್ವರ ಕಾಲೇಜು ವಿದ್ಯಾರ್ಥಿಗಳು ಪ್ರದರ್ಶಿಸಿದ ಯೋಗ ನೃತ್ಯದ ಝಲಕ್​.
ಗವಿಸಿದ್ದೇಶ್ವರ ಕಾಲೇಜು ವಿದ್ಯಾರ್ಥಿಗಳು ಪ್ರದರ್ಶಿಸಿದ ಯೋಗ ನೃತ್ಯದ ಝಲಕ್​.

ಕೆ.ಎಸ್​.ಆಸ್ಪತ್ರೆ ಮುಖ್ಯಸ್ಥ ಡಾ.ಬಸವರಾಜ ಕ್ಯಾವಟರ್​ ಮಾತನಾಡಿ, ಮನುಷ್ಯರು ಮನುಷ್ಯರಾಗಿ ಬದುಕುವ ವಿಧಾನ ತಿಳಿಸಿಕೊಡುವ ಸರಳ ತಪ್ಪಸು ಯೋಗ. ಪ್ರಧಾನಿ ನರೇಂದ್ರ ಮೋದಿ ವಿಶ್ವಕ್ಕೆ ಯೋಗ ಪರಿಚಯಿಸಿದರು. ನಾವು ಆರೋಗ್ಯ ರಂಗದಲ್ಲಿ ಇರುವವರು. ಜನರಿಗೆ ಉತ್ತಮ ಆರೋಗ್ಯ ಹೊಂದುವಂತೆ ಸಲಹೆ ನೀಡುತ್ತೇವೆ. ನಾವು ನಿತ್ಯ ಜೀವನದಲ್ಲಿ ಯೋಗ ಅಭ್ಯಾಸ ಮಾಡಿದಲ್ಲಿ ಉತ್ತಮ ಆರೋಗ್ಯ ನಮ್ಮದಾಗಿಸಿಕೊಳ್ಳಬಹುದು. ಈ ನಿಟ್ಟಿನಲ್ಲಿ ಪ್ರಯತ್ನ ಮುಂದುವರೆಸೋಣ. ವಿಜಯವಾಣಿಯವರು ಕಾರ್ಯಕ್ರಮ ಹಮ್ಮಿಕೊಳ್ಳಲು ಸಹಕಾರ ನೀಡಿದ್ದು ಅಭಿನಂದನೆ ಎಂದರು.

ಯೋಗ ತರಬೇತುದಾರರಾದ ಡಾ.ಭಾಗ್ಯಶ್ರೀ ಹಾಗೂ ಗಣೇಶ ಅವರು ಯೋಗಾಸನ ತರಬೇತಿ ನೀಡಿದರು. ಗವಿಸಿದ್ದೇಶ್ವರ ಕಾಲೇಜು ವಿದ್ಯಾರ್ಥಿಗಳು ಯೋಗ ನೃತ್ಯ ಪ್ರದರ್ಶಿಸಿ ಗಮನ ಸೆಳೆದರು. ಯೋಗಾಸನ ಮಾಡಿದ 75 ವರ್ಷದ ಹಿರಿಯ ಕಲ್ಲಯ್ಯ ಹಾಗೂ 5 ವರ್ಷದ ಬಾಲಕಿಗೆ ಕಾಣಿಕೆ ನೀಡಿ ಪ್ರೋತ್ಸಾಹಿಸಲಾಯಿತು. ಜತೆಗೆ ಭಾಗಿಯಾದವ ಹೆಸರಿನ ಚೀಟಿ ಬರೆದು ಮೂವರು ಅದೃಷ್ಟಶಾಲಿಗಳನ್ನು ಡ್ರಾ ಮೂಲಕ ಆಯ್ಕೆ ಮಾಡಿ ನೆನಪಿನ ಕಾಣಿಕೆ ವಿತರಿಸಿದ್ದು ವಿಶೇಷ. ಕಾರ್ಯಕ್ರಮ ಬಳಿಕ ಎಲ್ಲರಿಗೂ ಉಪಾಹಾರ ವ್ಯವಸ್ಥೆ ಕಲ್ಪಿಸಲಾಯಿತು.

ಯೋಗಾಸನದಲ್ಲಿ ಭಾಗಿಯಾಗಿದ್ದ ವಿದ್ಯಾರ್ಥಿಗಳು.
ಯೋಗಾಸನದಲ್ಲಿ ಭಾಗಿಯಾಗಿದ್ದ ವಿದ್ಯಾರ್ಥಿಗಳು.

ನ್ಯಾಷನಲ್​ ಪ್ಯಾರಾಮೆಡಿಕಲ್​ ಕಾಲೇಜಿನ ಡಾ.ಸುಮಾ, ದೈಹಿಕ ನಿರ್ದೇಶಕ ವಿನೋದ ಕುಮಾರ್​, ಡಾ.ಶಿವನಗೌಡ ಪಾಟೀಲ್​, ಲೆಕ್ಕ ಪರಿಶೋಧಕ ವಿ.ಬಿ.ಅಂಗಡಿ, ಲಕ್ಷಿ$್ಮ ನಾರಾಯಣ, ವಿಶ್ವನಾಥ, ಪೂರ್ಣಿಮಾ, ದೀಪಕ್​ ಹಿರೇಮಠ, ವಿಜಯವಾಣಿ ತಂಡದ ರವೀಂದ್ರ ವಿಕೆ, ನಾಭಿರಾಜ ದಸ್ತೇನವರ, ಅಮಿತ್​ ಕುಮಾರ್​ ಮಾಲಗಿತ್ತಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net