ಶಾರದಾ ಶಾಲೆಯಲ್ಲಿ ಯೋಗ ದಿನ ಆಚರಣೆ

international yoga day celebration in koppal by SSIS and SSIPU college
ಕೊಪ್ಪಳ ತಾಲೂಕಿನ ಕಿಡದಾಳದ ಶ್ರೀ ಶಾರದಾ ಇಂಟರ್ನ್ಯಾಷನಲ್​ ಶಾಲೆ ಹಾಗೂ ಪಿಯು ಕಾಲೇಜಿನಲ್ಲಿ ಶುಕ್ರವಾರ ಯೋಗ ದಿನ ಆಚರಿಸಲಾಯಿತು. ಶ್ರೀಧರ ಮುರಡಿ ಮಠದ ಬಸವಲಿಂಗೇಶ್ವರ ಶಿವಾಚಾರ್ಯ, ಗುಳೇದಗುಡ್ಟದ ಒಪ್ಪತ್ತೇಶ್ವರ ಸ್ವಾಮೀಜಿ ಯೋಗಾಸನ ನಡೆಸಿಕೊಟ್ಟರು.
Published on

ಕೊಪ್ಪಳ: ತಾಲೂಕಿನ ಕಿಡದಾಳದ ಶ್ರೀ ಶಾರದಾ ಇಂಟರ್ನ್ಯಾಷನಲ್​ ಶಾಲೆ ಹಾಗೂ ಪಿಯು ಕಾಲೇಜಿನಲ್ಲಿ ಶುಕ್ರವಾರ ಯೋಗ ದಿನ ಆಚರಿಸಲಾಯಿತು. ಶ್ರೀಧರ ಮುರಡಿ ಮಠದ ಬಸವಲಿಂಗೇಶ್ವರ ಶಿವಾಚಾರ್ಯ, ಗುಳೇದಗುಡ್ಟದ ಒಪ್ಪತ್ತೇಶ್ವರ ಸ್ವಾಮೀಜಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ನಂತರ ಮಾತನಾಡಿದ ಬಸವಲಿಂಗೇಶ್ವರ ಶ್ರೀಗಳು, ಯಂತ್ರ ಬಳಕೆಯಿಂದ ಮಾನವ ಜೀವನ ಹಾಳಾಗುತ್ತಿದೆ. ಆರೋಗ್ಯ ಕಾಪಾಡಿಕೊಳ್ಳಲು ಹಿತ&ಮಿತ ಆಹಾರ, ಯೋಗಭ್ಯಾಸ ಅವಶ್ಯ. ಗ್ರಾಮೀಣ ಭಾಗದ ಮಕ್ಕಳ ಶಿಕ್ಷಣಕ್ಕಾಗಿ ಪಾಟೀಲ್​ ಸಹೋದರರು ಇಷ್ಟು ದೊಡ್ಡ ಶಿಕ್ಷಣ ಸಂಸ್ಥೆ ಕಟ್ಟಿದ್ದಾರೆ ಎಂದರು.

ಮಕ್ಕಳಿಗೆ ಯೋಗಾಸನದ ಮಹತ್ವ ವಿವರಿಸುವ ಜತೆಗೆ ಹೇಳಿಕೊಟ್ಟರು. ಶಾಲೆ ವಿದ್ಯಾರ್ಥಿಗಳು ವಿಶೇಷ ಆಸನ ಪ್ರದರ್ಶಿಸಿದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಸ್ವಾಮೀಜಿಗಳು ಪ್ರಶಸ್ತಿ ಪತ್ರ ಮತ್ತು ಪದಕ ವಿತರಿಸಿದರು. ಸಂಸ್ಥೆ ನಿರ್ದೇಶಕರಾದ ಕಿರಣ್​ ಕುಮಾರ್​ ಪಾಟೀಲ್​, ಪದಾಧಿಕಾರಿಗಳಾದ ಲಕ್ಷಿ$್ಮದೇವಿ, ನೀಲಾಂಬಿಕಾ, ಡಾ.ವಿಶ್ವನಾಥ ರೆಡ್ಡಿ, ಎಲ್​.ಶಿವಪ್ರಕಾಶ, ಪ್ರಾಚಾರ್ಯ ರರಾಮ್​, ಬೋಧಕ ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net