ಪತ್ರಿಕೋದ್ಯಮ ಅಪ್ರೆಂಟಿಸ್​ ತರಬೇತಿಗೆ ಅರ್ಜಿ ಆಹ್ವಾನ

Published on

ಕೊಪ್ಪಳ : ಪಜಾ, ಪಪಂ ವರ್ಗಕ್ಕೆ ಸೇರಿದ ಪತ್ರಿಕೋದ್ಯಮ ಪದವೀಧರರಿಗೆ ವಾರ್ತಾ ಇಲಾಖೆಯಲ್ಲಿ ಮಾಧ್ಯಮ ಚಟುವಟಿಕೆಗಳ ಕಾರ್ಯನಿರ್ವಹಣೆ ಕುರಿತು 12 ತಿಂಗಳ ಅಪ್ರೆಂಟಿಸ್​ ತರಬೇತಿಗೆ ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.

ಪತ್ರಿಕೋದ್ಯಮದಲ್ಲಿ ಪದವಿ, ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿದ, ಕಂಪ್ಯೂಟರ್​ ಜ್ಞಾನ ಇರಬೇಕು. ಮೆರಿಟ್​ ಹಾಗೂ ಸಂದರ್ಶನ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು. 35 ವರ್ಷದೊಳಗಿನ ಆಸಕ್ತರು ನ.21ರೊಳಗೆ ಸಹಾಯಕ ನಿರ್ದೇಶಕರ ಕಚೇರಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಜಿಲ್ಲಾಡಳಿತ ಭವನ ಕೊಪ್ಪಳ ಇಲ್ಲಿಗೆ ಸಲ್ಲಿಸಬೇಕು. ಮಾಹಿತಿಗೆ 9480841245, 8277462995 ಹಾಗೂ 8150920986 ಗೆ ಸಂಪರ್ಕಿಸುವಂತೆ ಸಹಾಯಕ ನಿರ್ದೇಶಕ ಡಾ.ಸುರೇಶ ಜಿ.ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net