ಮಾಜಿ ಸೈನಿಕರಿಂದ ಸರೋವರ ದಡದಲ್ಲಿ ಬಾನೇತ್ತರಕ್ಕೆ ತ್ರಿವರ್ಣ ಧ್ವಜ

district koppal indipendence day celebration lake
Published on

ಕೊಪ್ಪಳ:ತಾಲೂಕಿನ ಕಲ್ ತವರಗೇರಾ ಗ್ರಾಮ ಪಂಚಾಯತಿಯ ಕಲ್ ತವರಗೇರಾ ಓಬಲಪ್ಪ ಅಮೃತ ಸರೋವರ ಕೆರೆ ದಡದಲ್ಲಿ 79 ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಮಾಜಿ ಸೈನಿಕರಾದ ಶ್ರೀ ದಲ್ಜಿತ್ ಸಿಂಗ್ ರಾಷ್ಟ್ರ ಧ್ವಜರೋಹಣ ನೆರವೇರಿಸಿ ಮಾತನಾಡಿದರು.

ಅಮೃತ ಸರೋವರ ಗ್ರಾಮದ ನೀರಿನ ದಾಹ ತೀರಿಸುವ ತಾಣಗಳಾಗಿವೆ. ಭಾರತ ಸರ್ಕಾರವು ಗ್ರಾಮದ ಕೆರೆಗಳನ್ನು ನರೇಗಾ ಯೋಜನೆಯಡಿ ಅಭಿವೃದ್ದಿಪಡಿಸಿ ಸುಂದರ ತಾಣಗಳನ್ನಾಗಿ ನಿರ್ಮಿಸಿ ಆ ಮೂಲಕ ಜಲಸಂರಕ್ಷಣೆ ಕೈಗೊಳ್ಳುತ್ತಿರುವದು ನಿಜಕ್ಕೂ ಶ್ಲಾಘನೀಯ. ಬೇಸಿಗೆ ಕಾಲದಲ್ಲಿ ಜಾನುವಾರುಗಳಿಗೆ ಕುಡಿಯಲು ಅನುಕೂಲವಾಗುತ್ತದೆ. ಕೆರೆಯ ಸುತ್ತಲೂ ರೈತರ ಜಮೀನುಗಳಿಗೆ ನೀರು ಇಂಗುವದರಿಂದ ರೈತರ ಕೊಳವೆ ಬಾವಿಗಳು ಮರುಪೂರಣಗೊಳ್ಳುತ್ತವೆ. ಮುಂದಿನ ಪೀಳಿಗೆಗೆ ಕುಡಿಯಲು ನೀರು ದೊರಕಬೇಕಾದರೆ ಕೆರೆಗಳನ್ನು ಉಳಿಸಿ ಬಳಸಿಕೊಂಡು ಹೋದಲ್ಲಿ ಮಾತ್ರ ಸಾಧ್ಯವೆಂದರು.

ಗ್ರಾಮ ಪಂಚಾಯತಿ ಸದಸ್ಯರಾದ ಮಂಜುಳಾದೇವಿ ಹುಣಶಿಹಾಳ ಮಾತನಾಡಿ 2022-23ನೇ ಸಾಲಿನಲ್ಲಿ ಮಹಾತ್ಮಾ ಗಾಂಧಿ ನರೇಗಾ ಯೋಜನೆಯಡಿ ಇಂತಹ ಕೆರೆಗಳನ್ನು ಅಭಿವೃದ್ದಿಪಡಿಸಿ ಸುಂದರ ತಾಣಗಳನ್ನಾಗಿ ನಿರ್ಮಿಸಿರುವದು ಅಲ್ಲಿನ ರೈತರಿಗೆ, ಜಾನುವಾರುಗಳಿಗೆ ಅನುಕೂಲ ಮಾಡಿಕೊಟ್ಟಿರುವದು ನಿಜಕ್ಕೂ ಶ್ಲಾಘನೀಯವಾಗಿದೆ ಎಂದರು.

ಗ್ರಾಮ ಪಂಚಾಯತ ಸದಸ್ಯರಾದ ರವಿಕುಮಾರ ಒಂಟಿಗಾರ ಮಾತನಾಡಿ ಅಮೃತ ಸರೋವರ ದಡದ ಮೇಲೆ ಮಾಜಿ ಸೈನಿಕರಿಗೆ, ಸ್ವಾತಂತ್ರ್ಯ ಹೋರಾಟಗಾರರಿಗೆ 79ನೇ ರಾಷ್ಟ್ರ ಧ್ವಜಾರೋಹಣ ನೆರವೇರಿಸಲು ಅವಕಾಶ ಮಾಡಿಕೊಟ್ಟಿರುವದು ಹೆಮ್ಮೆಯ ಹಾಗು ಗೌರವ ವಿಷಯವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಕಲ್ಲತಾವರಗೇರಾ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಗಂಗಪ್ಪ ನಾಯಕ್, ಜಿಲ್ಲಾ ಐಇಸಿ ಸಂಯೋಜಕ ಶ್ರೀನಿವಾಸ ಚಿತ್ರಗಾರ, ತಾಲೂಕ ಐಇಸಿ ಸಂಯೋಜಕ ದೇವರಾಜ ಪತ್ತಾರ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಯಮನೂರಪ್ಪ ಕಬ್ಬಣ್ಣವರ್ ಗ್ರಾಮ ಪಂಚಾಯತಿ ಸದಸ್ಯರಾದ ಅಶೋಕ್ ಗುಳದಳ್ಳಿ, ಸರೋಜ ನಾಗರಾಜ್ ಬಂಗಾಳಿ, ಶಿವಪುತ್ರಪ್ಪ ಹರಿಜನ್, ಸರಸ್ವತಿ ಅಮರೇಶ್ ಚಕ್ರಸಾಲಿ, ನೀಲಮ್ಮ ಶಿವಪ್ಪ ನಿಂಗಾಪುರ್, ಹನುಮನಗೌಡ ಮಾಲಿಪಾಟೀಲ್, ಈರಣ್ಣ ಚನ್ನದಾಸರ, ಶಿವಮ್ಮ ಕುಂಬಾರ್, ಶಾಂತಮ್ಮ ಪರ್ವತ್ ಮಲ್ಲಯ್ಯ ಪಾರಮ್ಮ ಕೊಳ್ಳಿ, ಅಮರೇಶ್ ಆರಾಳ್, ಗ್ರಾಮ ಪಂಚಾಯತಿ ಕಾರ್ಯದರ್ಶಿ ಸುರೇಶ ಗೌಡ ಕರವಸೂಲಿಗಾರ ನಾಗರಾಜ,ಗಣಕ ಯಂತ್ರ ನಿರ್ವಾಹಕ ಲಕ್ಷ್ಮಣ್ ಹಿರೇಮನಿ, ಗ್ರಾಮ ಕಾಯಕ ಮಿತ್ರ ಯಂಕಮ್ಮ ತಳವಾರ್ , ಮಲ್ಲಪ್ಪ ಎಸ್ ಭೀಮನೂರ್ ಹಾಗೂ ಗ್ರಾಮ ಪಂಚಾಯಿತಿ ಸರ್ವ ಸಿಬ್ಬಂದಿ ವರ್ಗದವರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net