ಸ್ವಾತಂತ್ರ ದಿನ ಅರ್ಥಪೂರ್ಣ ಆಚರಣೆಗೆ ಡಿಸಿ ಸೂಚನೆ

district koppal indipendence day celebration dc suresh itnal meeting
Published on

ಕೊಪ್ಪಳ: ಬರುವ ಆಗಸ್ಟ್​ 15ರಂದು ಸ್ವಾತಂತ್ರ$್ಯ ದಿನಾಚರಣೆ ಅರ್ಥಪೂರ್ಣವಾಗಿ ಆಚರಿಸಲು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಡಾ.ಸುರೇಶ ಬಿ. ಇಟ್ನಾಳ ಅಧಿಕಾರಿಗಳಿಗೆ ಸೂಚಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಅಧಿಕಾರಿಗಳೊಂದಿಗೆ ಪೂರ್ವಭಾವಿ ಸಭೆ ನಡೆಸಿ ಮಾತನಾಡಿದರು.

ಬೆಳಗ್ಗೆ 8 ಗಂಟೆಗೆ ಡಿಸಿ ಕಚೇರಿ ಆವರಣದಲ್ಲಿ, 9 ಗಂಟೆಗೆ ಜಿಲ್ಲಾ ಕ್ರೀಡಾಂಗಣದಲ್ಲಿ ಧ್ವಜಾರೋಹಣ ಇರಲಿದೆ. ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಧ್ವಜಾರೋಹಣ ನೆರವೇರಿಸುವರು. ಸ್ವಾತಂತ್ರೊ$್ಯತ್ಸವ ಅಂಗವಾಗಿ ವಿವಿಧ ಸಮಿತಿ ರಚಿಸಲಾಗಿದೆ. ನಿಮಗೆ ವಹಿಸಿದ ಜವಾಬ್ದಾರಿ ಅಚ್ಚುಕಟ್ಟಾಗಿ ನಿಭಾಯಿಸಿ. ರ್ನಿಲಕ್ಷ$್ಯವಹಿಸಿದರೆ ಕ್ರಮ ಕೈಗೊಳ್ಳಲಾಗುವುದು. ಶಿಷ್ಠಾಚಾರ ಪಾಲನೆಯೊಂದಿಗೆ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಮತ್ತು ವ್ಯವಸ್ಥಿತವಾಗಿ ಆಯೋಜಿಸಬೇಕೆಂದು ನಿರ್ದೇಶಿಸಿದರು.

ಜಿಲ್ಲಾ ಕೇಂದ್ರದ ಪ್ರಮುಖ ರಸ್ತೆಗಳು, ವೃತ್ತಗಳನ್ನು ಸ್ವಚ್ಛಗೊಳಿಸಿ ಅಲಂಕಾರ ಮಾಡಿ. ಕ್ರೀಡಾಂಗಣದಲ್ಲಿ ಸಾರ್ವಜನಿಕರಿಗೆ ಕುಡಿವ ನೀರು ವ್ಯವಸ್ಥೆ ಇರಲಿ. ಎಲ್ಲ ಇಲಾಖೆ ಜಿಲ್ಲಾಮಟ್ಟದ ಅಧಿಕಾರಿಗಳು ನಿಮ್ಮ ಸಿಬ್ಬಂದಿಯೊಂದಿಗೆ ಕಡ್ಡಾಯವಾಗಿ ಹಾಜರಾಗಿ. ಪಥ ಸಂಚಲನ ಶಿಸ್ತುಬದ್ಧವಾಗಿರಲಿ. ಭಾಗಿಯಾಗುವ ತಂಡಗಳಿಗೆ ತರಬೇತಿ ನೀಡಿ. ಸ್ವಾತಂತ್ರ$್ಯ ಹೋರಾಟ ಬಿಂಬಿಸುವ ಸಾಂಸತಿಕ ಕಾರ್ಯಕ್ರಮಗಳಿರಲಿ. ಬಸ್​ ನಿಲ್ದಾಣದಿಂದ ಕ್ರೀಡಾಂಗಣವರೆಗೆ ಸಾರಿಗೆ ಬಸ್​ ಸೌಲಭ್ಯ ಕಲ್ಪಿಸಿ. ಮಕ್ಕಳಿಗೆ ಹಾಲು ಇಲ್ಲವೇ ಉಪಾಹಾರ ನೀಡಿ. ತುರ್ತು ಪರಿಸ್ಥಿತಿ ನಿರ್ವಹಣೆಗೆ ಆ್ಯಂಬುಲೆನ್ಸ್​, ಅಗ್ನಿಶಾಮಕ ವಾಹನ ಕಾಯ್ದಿರಿಸಿ. ಪ್ಲಾಸ್ಟಿಕ್​ ಧ್ವಜ, ವಸ್ತುಗಳನ್ನು ಬಳಸದಿರಿ ಎಂದು ತಾಕೀತು ಮಾಡಿದರು.

ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ ಮಾತನಾಡಿ, ತಾಲೂಕು ಮಟ್ಟದಲ್ಲಿಯೂ ಧ್ವಜ ಸಂಹಿತೆ ಪಾಲಿಸಿ ಧ್ವಜಾರೋಹಣ ನೆರವೇರಿಸಲು ತಹಸೀಲ್ದಾರ್​ಗಳು ಕ್ರಮ ಕೈಗೊಳ್ಳಿ. ಪಥ ಸಂಚಲನದಲ್ಲಿ ನಿಗದಿಪಡಿಸಿದ ತಂಡಗಳು ಮಾತ್ರ ಭಾಗಿಯಾಗಲಿ. ಸಾಧಕರಿಗೆ ಸನ್ಮಾನ ಇನ್ನಿತರ ವಿಷಯಗಳಿದ್ದಲ್ಲಿ ಆಯಾ ಇಲಾಖೆ ಅಧಿಕಾರಿಗಳು ಜಿಲ್ಲಾಡಳಿತ, ಸಂಬಂಧಿಸಿದ ಸಮಿತಿ ಗಮನಕ್ಕೆ ತನ್ನಿ ಎಂದು ತಿಳಿಸಿದರು.

ಎಸ್ಪಿ ಡಾ.ರಾಮ್​ ಎಲ್​.ಅರಸಿದ್ದಿ, ಜಿಪಂ ಉಪ ಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ, ಡಿಯುಡಿಸಿ ಪಿಡಿ ಮಂಜುನಾಥ ಗುಂಡೂರ, ಜಿಲ್ಲಾ ತರಬೇತಿ ಕೇಂದ್ರ ಪ್ರಾಚಾರ್ಯ ಕೃಷ್ಣಮೂರ್ತಿ ದೇಸಾಯಿ, ಜಂಟಿ ಕೃಷಿ ನಿರ್ದೇಶಕ ರುದ್ರೇಶಪ್ಪ ಟಿ.ಎಸ್​., ಡಿಡಿಪಿಐ ಶ್ರೀಶೈಲ ಬಿರಾದಾರ, ಡಿಡಿಪಿಯು ಜಗದೀಶ ಜಿ.ಎಚ್​., ಆಹಾರ ಇಲಾಖೆ ಉಪನಿರ್ದೇಶಕ ಸೋಮಶೇಖರ ಬಿರಾದಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಪಿ.ವೈ.ಶೆಟ್ಟೆಪ್ಪನವರ, ಪಶುಪಾಲನಾ ಇಲಾಖೆ ಡಿಡಿ ಡಾ.ಪಿ.ಎಂ.ಮಲ್ಲಯ್ಯ, ಕ್ರೀಡಾಧಿಕಾರಿ ವಿಠ್ಠಲ ಜಾಬಗೌಡರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net