ಈದ್ ಅಂಗವಾಗಿ ಸಾಧಕರಿಗೆ ಸನ್ಮಾನ

district koppal id milad festival honor programme
Published on

ಕೊಪ್ಪಳ : ಈದ್ ಮಿಲಾದ್ ನಿಮಿತ್ಯ ನಗರದ ಗಾಂಧಿ ವೃತ್ತದಲ್ಲಿ ಜೆಹೆಚ್ ಪಿಎಸ್ ಗೆಳೆಯರ ಬಳಗದಿಂದ ವೃತ್ತಿ ಸಾಧಕರು ಹಾಗೂ ಸಾಮಾಜಿಕ ಸೇವೆಯ ಐವರು ವ್ಯಕ್ತಿಗಳಿಗೆ ಹಾರ್ದಿಕವಾಗಿ ಸನ್ಮಾನ ಜರುಗಿತು.

ಪ್ರವಾದಿ ಮುಹಮ್ಮದ ಪೈಗಂಬರ್ ಅವರ 1500 ನೇ ಜನ್ಮದಿನಾಚರಣೆ ನಿಮಿತ್ಯ ಕಾರ್ಯಕ್ರಮದಲ್ಲಿ ಮುಫ್ತಿ ನಜೀರ್ ಅಹ್ಮದ ತಸ್ಕೀನ್ ಖಾದ್ರಿ ಹಾಗೂ ಮುಖಂಡರಾದ ಸುರೇಶ ಭೂಮರಡ್ಡಿ 125 ಕೆಜಿಯ ಕೇಕ್ ಕತ್ತರಿಸಿ ಶುಭ ಹಾರೈಸಿದರು.

ರಾಷ್ಟಪತಿ ಪದಕ ಪಡೆದ ಪೊಲೀಸ್ ಇಲಾಖೆಯ ಶಂಶುದ್ದೀನ್ , ಹೆಚ್ಚು ಬಾರಿ ರಕ್ತದಾನ ಮಾಡಿರುವ ಲಕ್ಷ್ಮಿಕಾಂತ ಗುಡಿ, ಸುರೇಶ ಕಂಬಳಿ, ಶ್ರದ್ದಾಂಜಲಿ ವಾಹನ ಚಾಲಕ ರವಿ ದೇವರಕಾಳಿ, 50 ವರ್ಷದಿಂದ ಕಣ್ಣಲ್ಲಿ ಬಿದ್ದ ಹರಳು ತೆಗೆಯುವ ಕಾಯಕದ ಫಾತಿಮಾ ಬೇಗಂ ಮಂಗಳಾಪುರ ಇವರಿಗೆ ಸನ್ಮಾನ ಜರುಗಿತು.‌

ಈ ಸಂದರ್ಭದಲ್ಲಿ ಮುಖಂಡರಾದ ಅಮರೇಶ ಕರಡಿ, ಗೆಳೆಯರ ಬಳಗದ ಹಬೀಬ ಪಾಷಾ, ಮೈಲೈಕ್ ಜಿಲಾನ್, ಖಾಜಾಹುಸೇನ್ ಇಂಜಿನಿಯರ್, ಎಂಡಿ ಮುಜಾಹಿದ್ ಇಂಜಿನಿಯರ್ , ಪ್ರಾಣೇಶ ಪಾಟೀಲ್, ಮುಸ್ತಫಾ ಕುದರಿಮೋತಿ, ಮೆಹಬೂಬ ಪಾಷಾ , ಜಾವೀದ್ , ಸೈಯದ್ ಕಂಠಿ, ಶಬ್ಬೀರ್, ಹನಮಂತು, ಶಿವನಗೌಡ್ರು, ಆರ್.ಹೆಚ್.ಅತ್ತನೂರು, ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net