ಪತ್ನಿ ಕೊಂದು ತಾನೂ ಆತ್ಮಹತ್ಯೆಗೆ ಶರಣಾದ ಪತಿ

husband wife death in Budashetnal village koppal taluku and district
ಲಕ್ಷ್ಮವ್ವ, ನಿಂಗಪ್ಪ
Published on

ಕೊಪ್ಪಳ: ತಾಲೂಕಿನ ಬುಡಶೆಟ್ನಾಳ ಗ್ರಾಮದಲ್ಲಿ ಪತಿಯೋರ್ವ ತನ್ನ ಪತ್ನಿ ತಲೆ ಮೇಲೆ ಕಲ್ಲು ಹಾಕಿ ಕೊಲೆ ಮಾಡಿದ್ದು, ತಾನೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಗ್ರಾಮದ ನಿಂಗಪ್ಪ ವಾಲಿಕಾರ (40) ಹಾಗೂ ಇತರ ಪತ್ನಿ ಲಕ್ಷ್ಮವ್ವ ವಾಲಿಕಾರ (36) ಮೃತರು. ಮದ್ಯ ವ್ಯಸನಿಯಾಗಿದ್ದ ನಿಂಗಪ್ಪ ಆಗಾಗ ಪತ್ನಿ ಲಕ್ಷ್ಮವ್ವಳೊಂದಿಗೆ ಜಗಳವಾಡುತ್ತಿದ್ದನೆನ್ನಲಾಗಿದೆ. ಮಂಗಳವಾರ ರಾತ್ರಿ ಪತ್ನಿ ಮಲಗಿರುವ ವೇಳೆ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದಾನೆ. ಬಳಿಕ ಮನೆಯಿಂದ ಕಾಲ್ಕಿತ್ತಿದ್ದು, ಗ್ರಾಮದ ಹೊರವಲಯದಲ್ಲಿನ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕುಡಿತದ ದಾಸನಾಗಿದ್ದ ನಿಂಗಪ್ಪ ಸಾಲ ಮಾಡಿಕೊಂಡಿದ್ದನೆನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net