ಹುಲಿಗೆಮ್ಮನ ಹುಂಡಿ ಎಣಿಕೆ, ಒಂದು ಕೋಟಿಗೂ ಅಧಿಕ ನಗದು ಸಂಗ್ರಹ

0401-Kpl-Ravi-7
Published on

ಕೊಪ್ಪಳ: ನಾಡಿನ ಶಕ್ತಿ ದೇವತೆ ಹುಲಗಿ ಗ್ರಾಮದ ಹುಲಿಗೆಮ್ಮ ದೇವಿ ದೇವಾಲಯ ಹುಂಡಿ ಎಣಿಕೆ ಮಾಡಿದ್ದು,1,11,43,435 ರೂ.‌ನಗದು, 333ಗ್ರಾಂ ಕಚ್ಛಾ ಬಂಗಾರ ಮತ್ತು 11.300 ಕೆಜಿ ಬೆಳ್ಳಿ ಸಂಗ್ರಹವಾಗಿದೆ.‌

52 ದಿನಗಳ ಬಳಿಕ ಹುಂಡಿ ಎಣಿಕೆ ಮಾಡಿದ್ದು, ಬುಧವಾರ ಹಾಗೂ ಗುರುವಾರ ಎರಡು ದಿನ ಎಣಿಕೆ ಮಾಡಲಾಗಿದೆ. ಹುಣ್ಣಿಮೆ ಹಿನ್ನೆಲೆಯಲ್ಲಿ ಹೆಚ್ಚಿನ ಭಕ್ತರು ಭೇಟಿ ನೀಡಿದ‌ ಹಿನ್ನೆಲೆಯಲ್ಲಿ ಹಿಂದಿಗಿಂತ ಈ ಬಾರಿ ಹೆಚ್ಚು ಹಣ ಸಂಗ್ರಹವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net