ಹುಲಗಿಯಲ್ಲಿ ಅಂಗಡಿಗಳ ತೆರವುಗೊಳಿಸಿ ಪೊಲೀಸರು

IMG_20251008_081446
Published on

ಕೊಪ್ಪಳ : ತಾಲೂಕಿನ ಐತಿಹಾಸಿಕ ಪ್ರಸಿದ್ಧ ಧಾರ್ಮಿಕ‌ ಕ್ಷೇತ್ರ ಹುಲಿಗಿಯ ಹುಲಿಗೆಮ್ಮ ದೇವಿ ದೇವಸ್ಥಾನ ಸಂಪರ್ಕಿಸುವ ರಸ್ತೆ ಬದಿ ಅಂಗಡಿಗಳ ತೆರವು ಕಾರ್ಯಾಚರಣೆ ಬುಧವಾರ ಬೆಳಗ್ಗೆ ನಡೆಯಿತು.

ಮಂಗಳವಾರ ಸೀಗೆ ಹುಣ್ಣಿಮೆ ಅಂಗವಾಗಿ ಲಕ್ಷಾಂತರ ಭಕ್ತರು ಕ್ಷೇತ್ರಕ್ಕೆ ಆಗಮಿಸಿದ್ದರು. ರಸ್ತೆ ಬದಿ ಗೂಡಂಗಡಗಿಗಳು, ಎಲ್ಲೆಂದರಲ್ಲಿ ವಾಹನ ನಿಲ್ಲಿಸಿದ್ದರಿಂದ ಹಲವು ಗಂಟೆಗಳ ಕಾಲ ಟ್ರಾಫಿಕ್ ಉಂಟಾಗಿತ್ತು. ಜನರು ನಡೆದು ಹೋಗುವುದೂ ಕಷ್ಟವಾದ ಸ್ಥಿತಿ ನಿರ್ಮಾಣವಾಯಿತು.‌ ವೃದ್ಧರು, ಮಕ್ಕಳು ನೂಕು ನುಗ್ಗಲಿನಿಂದ‌ ಹೊರ ಬರಲು ಪರದಾಡಿದರು. ದೇವಾಲಯ ಸಂಪರ್ಕಿಸುವ ಎಲ್ಲ ರಸ್ತೆಗಳು ಬಂದ್ ಆಗಿದ್ದವು. ಪೊಲೀಸರು ಹರಸಾಹಸ ಮಾಡಿ ಟ್ರಾಫಿಕ್ ಚದುರಿಸಿದ್ದರು.

ಕಾಲ್ತುಳಿತವಾಗಿ ಅಪಾಯ ಸಂಭವಿಸುವ ಮಟ್ಟಿಗೆ ಪರಿಸ್ಥಿತಿ ಕೈಮೀರಿತ್ತು. ಇದರಿಂದ ಎಚ್ಚೆತ್ತ ಪೊಲೀಸರು ಬುಧವಾರ ಬೆಳ್ಳಂಬೆಳಗ್ಗೆ ಹುಲಿಗಿಗೆ ಆಗಮಿಸಿದರು. ರಸ್ತೆ ಬದಿ, ಪಾದಾಚಾರಿ‌ ರಸ್ತೆಗಳಲ್ಲಿನ ಗೂಡಂಗಡಿಗಳನ್ನು ತೆರವು ಮಾಡಿದರು. ದೇವಾಲಯದಿಂದ ಸುಮಾರು ಒಂದು ಕಿ.ಮೀ. ವ್ಯಾಪ್ತಿಯಲ್ಲಿ ತೆರವು ನಡೆಯಿತು. ವ್ಯಾಪಾರಿಗಳು ಒಲ್ಲದ ಮನಸಿನಿಂದ ಅಂಗಡಿ ತೆಗೆದರು. ಇನ್ನು ಮುಂದೆ ಪಾದಾಚಾರಿ ರಸ್ತೆಯಲ್ಲಿ ಅಂಡಗಿ ಇಡಬಾರದು. ಪಾದಾಚಾರಿಗಳು, ವಾಹನ ಸಂಚಾರಕ್ಕೆ ತೊಂದರೆ ಮಾಡುವಂತಿಲ್ಲ. ಮಾಡಿದಲ್ಲಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net