

ಕೊಪ್ಪಳ: ತಾಲೂಕಿನ ಹುಲಗಿ ಗ್ರಾಮದ ಶಕ್ತಿ ದೇವತೆ ಹುಲಿಗೆಮ್ಮ ದೇವಿ ಹುಂಡಿ ಗುರುವಾರ ಎಣಿಕೆ ಮಾಡಿದ್ದು 73,74,890ರೂ. ನಗದು ಸಂಗ್ರಹಗೊಂಡಿದೆ.
2024ರ ಡಿಸೆಂಬರ್ 21ರಂದು ಎಣಿಕೆ ಮಾಡಲಾಗಿತ್ತು. 39 ದಿನಗಳ ಬಳಿಕ ಮರು ಎಣಿಕೆ ಮಾಡಿದ್ದು 73,74,890ರೂ, ನಗದು ಸಂಗ್ರಹವಾಗಿದೆ. 50 ಗ್ರಾಂ ಕಚ್ಛಾ ಬಂಗಾರ ಮತ್ತು 3 ಕೆಜಿ 500 ಗ್ರಾಂ ಕಚ್ಛಾ ಬೆಳ್ಳಿ ಸಂಗ್ರಹವಾಗಿದೆ. ದೇವಾಲಯ ಪ್ರಾಧಿಕಾರ ಸಿಇಒ ಪ್ರಕಾಶರಾವ್ ಹಾಗೂ ಇತರರ ಸಮ್ಮುಖದಲ್ಲಿ ಹುಂಡಿ ತೆಗೆದು ಎಣಿಕೆ ಮಾಡಲಾಯಿತು. 5, 10, 20, 50, 100, 200 ಹಾಗೂ 500 ರೂ. ಮುಖಬೆಲೆಯ ನೋಟುಗಳು, 1, 2, 5, 10 ಹಾಗೂ 20ರೂ. ಮುಖ ಬೆಲೆಯ ನಾಣ್ಯಗಳು ಸಂಗ್ರಹವಾಗಿವೆ.