

ಕೊಪ್ಪಳ: ನಾಡಿನ ಶಕ್ತಿ ದೇವತೆ ಹುಲಿಗಿಯ ಹುಲಿಗೆಮ್ಮ ದೇವಿ ಮಹಾ ರಥೋತ್ಸವ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಸಾಂಗಾವಾಗಿ ನೆರವೇರಿತು.
ಪ್ರಾಧಿಕಾರ ರಚನೆಯಾದ ಬಳಿಕ ಮೊದಲ ಬಾರಿಗೆ ಜಾತ್ರೋತ್ಸವದಲ್ಲಿ ಅಚ್ಚುಕಟ್ಟಾದ ವ್ಯವಸ್ಥೆ ಕಲ್ಪಿಸಲಾಗಿದೆ. ವಾರದ ಹಿಂದೆಯೇ ಮಹಾದಾಸೋಹ ಆರಂಭವಾಗಿದೆ. ಮೊದಲ ಬಾರಿ ಒಂದು ತಿಂಗಳ ಕಾಲ ದಾಸೋಹ ವ್ಯವಸ್ಥೆ ಕಲ್ಪಿಸಲಾಗಿದೆ. ಭಕ್ತರು ನೆರವು ನೀಡಿದ್ದು, ವಿವಿಧ ಆಹಾರ ಪದಾರ್ಥ ಸಮರ್ಪಿಸುತ್ತಿದ್ದಾರೆ. ಹೋಳಿಗೆ, ಅನ್ನ, ಸಾಂಬಾರ್, ಬದನೆಕಾಯಿ ಪಲ್ಯ ಉಣಬಡಿಸಲಾಯಿತು. ಮಹಾರಥೋತ್ಸವಕ್ಕೆ ಇಡೀ ದಿನ ಮಳೆರಾಯ ಅಡ್ಡಿಯಾದ. ಸಂಜೆ 5.56ಕ್ಕೆ ಸರಿಯಾಗಿ ರಥ ಬೀದಿಯಲ್ಲಿ ಸಾಗಿತು. ಈ ವೇಳೆ ವರುಣ ಬಿಡುವು ನೀಡಿದ. ಭಕ್ತರು ಹಫಿೋರ್ದ್ಘಾರ ನಡುವೆ ದೇವಿಗೆ ನಮಿಸಿದರು. ಬಾಳೆಹಣ್ಣು, ಉತ್ತತ್ತಿ ಅರ್ಪಿಸಿ ಭಕ್ತಿ ಮೆರೆದರು. ಸಂಸದ ರಾಜಶೇಖರ ಹಿಟ್ನಾಳ, ಮಾಜಿ ಸಂಸದ ಸಂಗಣ್ಣ ಕರಡಿ, ವಿಪ ಸದಸ್ಯೆ ಹೇಮಲತಾ ನಾಯಕ ಸೇರಿ ವಿವಿಧ ಜನಪ್ರತಿನಿಧಿಗಳು ದೇವಿ ದರ್ಶನ ಪಡೆದರು.
ಜಾತ್ರೆ ಅಂಗವಾಗಿ ಬೆಳಗಿನಿಂದಲೇ ಭಕ್ತರು ದೇವಸ್ಥಾನದತ್ತ ಧಾವಿಸಿದರು. ಪಾದಯಾತ್ರಿಕರೂ ದಾರಿಯುದ್ದಕ್ಕೂ ಕಾಣಿಸಿಕೊಂಡರು. ಭಕ್ತರು ದೀರ್ಘದಂಡ ನಮಸ್ಕಾರ ಹಾಕಿ ಹರಕೆ ತೀರಿಸಿದರು. ಮಂಗಳಮುಖಿಯರು ತುಂಗಭದ್ರಾ ನದಿಯಲ್ಲಿ ಪವಿತ್ರ ಸ್ನಾನಗೈದರು. ದೇವಿಗೆ ವಿಶೇಫಿ ಪೂಜೆ ಸಲ್ಲಿಸಿದರು. ರಥೋತ್ಸವ ಸಮಯಕ್ಕೆ ಪರಸ್ಪರ ಭಂಡಾರ ಎರಚಿ ನೃತ್ಯ ಮಾಡುವ ಮೂಲಕ ಸಂಭ್ರಮಿಸಿದರು. ಭಕ್ತರು ಬೃಹತ್ ಹಾರಗಳನ್ನು ಹಾಕಿ ಹರಕೆ ತೀರಿಸಿದರು. ಕೆಲವರು ಡೋಲು ಬಾರಿಸಿ ಗಮನ ಸೆಳೆದರು.
ರಾಜ್ಯ, ಮಹಾರಾಫ್ಟಿ, ಆಂಧ್ರ, ತೆಲಂಗಾಣ, ತಮಿಳುನಾಡು ಸೇರಿ ವಿವಿಧ ರಾಜ್ಯದ ಭಕ್ತರು ಆಗಮಿಸಿ ದೇವಿ ದರ್ಶನ ಪಡೆದರು. ಜಾತ್ರೋತ್ಸವ ಹಿನ್ನೆಲೆಯಲ್ಲಿ ವಾರದಿಂದ ದೇವಿ ದರ್ಶನಕ್ಕೆ ಭಕ್ತರ ದಂಡು ಹೆಚ್ಚಿದೆ. ಬುಧವಾರ ಬೆಳಗಿನ ಜಾವದಿಂದಲೇ ಭಕ್ತರು ಸರತಿಯಲ್ಲಿ ದೇವಿ ದರ್ಶನ ಪಡೆದರು. ರಥೋತ್ಸವ ಅಂಗವಾಗಿ ದೇವಿಗೆ ವಿಶೇಫಿ ಪೂಜೆ, ಆರತಿ, ಕುಂಕುಮಾರ್ಚನೆ, ನೈವೇದ್ಯ ಸೇರಿ ವಿವಿಧ ಧಾರ್ಮಿಕ ವಿಧಿ ವಿಧಾನ ನೆರವೇರಿಸಿದರು.