ಹುಲಗಿ ಕಾಮಗಾರಿ ಪರಿಶೀಲಿಸಿದ ಎಡಿಸಿ

district koppal huligi temple adc sidrameswara visit
Published on

ಕೊಪ್ಪಳ: ತಾಲೂಕಿನ ಪ್ರಸಿದ್ಧ ಹುಲಿಗಿಯ ಹುಲಿಗೆಮ್ಮ ದೇವಿ ಸನ್ನಿಧಾನದಲ್ಲಿ ಅನುಷ್ಠಾನಗೊಳ್ಳುತ್ತಿರುವ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನೆ ಎಡಿಸಿ ಸಿದ್ರಾಮೇಶ್ವರ ಬುಧವಾರ ಪರಿಶೀಲಿಸಿದರು.

ದೇವಾಲಯಕ್ಕೆ ಭೇಟಿ ನೀಡಿದ ಎಡಿಸಿ, ಮಹಾ ನೆಯಂತೆ ಕೈಗೊಳ್ಳುತ್ತಿರುವ ಕಾಮಗಾರಿಗಳ ಮಾಹಿತಿ ಪಡೆದರು. ಕಾಮಗಾರಿ ನಡೆಸುವ ಸ್ಥಳಗಳನ್ನು ವೀಸಿದರು. ಲೋಕೋಪಯೋಗಿ, ನೀರಾವರಿ, ಅನುಷ್ಠಾನ ಏಜೆನ್ಸಿ ಅಭಿಯಂತರರನ್ನು ಸ್ಥಳಕ್ಕೆ ಕರೆಸಿ ವಿವರ ಪಡೆದರು. ಪಾರ್ಕಿಂಗ್​, ಯುಜಿಡಿ, ವಸತಿ, ಕುಡಿವ ನೀರು, ಸ್ನಾನ, ಶೌಚಗೃಹ, ದೇವಾಲಯದ ಕಾಮಗಾರಿಗಳು ಎಲ್ಲೆಲ್ಲಿ ಬರಲಿವೆ ಎಂಬ ಬಗ್ಗೆ ಸ್ಥಳ ಪರಿಶೀಲಿಸಿದರು. ನ.12ರಂದು ಡಿಸಿ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದೆ. ಲಭ್ಯ ಇರುವ ಅನುದಾನದಲ್ಲಿ ಆದ್ಯತೆ ಮೇರೆಗೆ ಯಾವೆಲ್ಲ ಕಾಮಗಾರಿ ಕೈಗೊಳ್ಳಬೇಕೆಂಬ ಬಗ್ಗೆ ಪಟ್ಟಿ ಸಲ್ಲಿಸಿ. ಸಭೆಯಲ್ಲಿ ಅನುಮೋದನೆ ಪಡೆದುಕೊಂಡು ಕಾಮಗಾರಿ ಆರಂಭಿಸಲು ಕ್ರಮ ಕೈಗೊಳ್ಳಲಾಗುವುದೆಂದು ಅಧಿಕಾರಿಗಳಿಗೆ ಸೂಚಿಸಿದರು.

ತಹಸೀಲ್ದಾರ್​ ವಿಠ್ಠಲ್​ ಚೌಗಲಾ, ದೇವಾಲಯ ಸಿಇಒ ಪ್ರಕಾಶ, ಪಿಎಸ್​ಐ ಸುನೀಲ್​ ಇತರ ಅಧಿಕಾರಿಗಳಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net