ಹುಲಿಗೆಮ್ಮನ ಜಾತ್ರೆ ಸಂಪನ್ನ

district koppal huligi huligemma temple jatrha event
Published on

ಕೊಪ್ಪಳ: ನಾಡ ದೇವತೆ ಹುಲಗಿಯ ಹುಲಿಗೆಮ್ಮ ದೇವಿ ಜಾತ್ರೋತ್ಸವಕ್ಕೆ ಶನಿವಾರ ತೆರೆ ಬಿದ್ದಿದೆ. ಮೇ 13ರಿಂದಲೇ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾಗಿದ್ದವು. ಶುಕ್ರವಾರ ಬಾಳೆದಿಂಡಿಗೆ ನಡೆದಿದ್ದು, ಶನಿವಾರ ಪಾಯಸ, ಅಗ್ನಿಕುಂಡ ಕಾರ್ಯಕ್ರಮಗಳು ವಿಜೃಂಭಣೆಯಿಂದ ನೆರವೇರಿದವು.

ಒಂದು ವಾರ ಕಾಲ ಅಪಾರ ಸಂಖ್ಯೆಯ ಭಕ್ತರು ದೇವಿ ದರ್ಶನ ಪಡೆದರು. ಅಲ್ಲದೇ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ಸಂಭ್ರಮಿಸಿದರು. ತುಂಗಾಭದ್ರ ನದಿಯಲ್ಲಿ ಮಿಂದೆದ್ದು ಪವಿತ್ರ ಸ್ನಾನ ಮಾಡಿದರು. ವರುಣನ ಕಣ್ಣಾಮುಚ್ಚಾಲೆ ನಡುವೆಯೂ ತಾಯಿ ಜಾತ್ರೋತ್ಸವ ಅದ್ದೂರಿಯಾಗಿ ನೆರವೇರಿತು. ಶನಿವಾರ ಅಪಾರ ಭಕ್ತಗಣ ಸಮ್ಮುಖದಲ್ಲಿ ಅನ್ನ ಪಾಯಸ ನೈವೇದ್ಯ ಅರ್ಪಿಸಲಾಯಿತು. ದೇವಿ ಆರಾಧಕರು ಭಕ್ತ ಸಮೂಹದೆದುರು ಭಕ್ತಿಭಾವದೊಂದಿಗೆ ಕಾರ್ಯಕ್ರಮ ನಡೆಸಿಕೊಟ್ಟರು. ಅಗ್ನಿಕುಂಡ ಕಾರ್ಯಕ್ರಮವೂ ರ್ನಿವಿಗ್ನವಾಗಿ ಜರುಗಿತು. ಭಕ್ತರು ಹುಲಿಗೆಮ್ಮನಿಗ ಉಧೋ.. ಉಧೋ.. ಘೋಷಣೆ, ಜಯಕಾರ ಹಾಕಿ ಅಗ್ನಿಕುಂಡ ಪ್ರವೇಶಿಸಿದರು.

ಕೊನೆಯ ದಿನವಾಗಿದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ದೇವಸ್ಥಾನದತ್ತ ಧಾವಿಸಿದರು. ಬೆಳಗ್ಗೆಯಿಂದಲೇ ದರ್ಶನ ಪಡೆದು ಪುನೀತರಾದರು. ದಾಸೋಹ ಮುಂದುವರೆದಿದ್ದು, ಬಂದವರಿಗೆಲ್ಲ ಬಗೆ ಬಗೆ ಖಾದ್ಯದ ಸವಿ ಸವಿಯಲು ಸಿಕ್ಕಿತು. ಮಹಾ ದಾಸೋಹ ಇನ್ನು ಕೆಲ ದಿನ ಮುಂದುವರೆಯಲಿದ್ದು ದೇವಸ್ಥಾನಕ್ಕೆ ಆಗಮಿಸುವವರಿಗೆ ಪ್ರಸಾದ ದೊರೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net