

ಕೊಪ್ಪಳ: ಶ್ರೀ ಹುಲಿಗೆಮ್ಮ ದೇವಿ ಜಾತ್ರೋತ್ಸವಕ್ಕೆ ಆಗಮಿಸುವ ಭಕ್ತರಿಗೆ ಅವಶ್ಯ ಮೂಲ ಸೌಕರ್ಯ ಕಲ್ಪಿಸಲಾಗುವುದೆಂದು ಸಂಸದ ರಾಜಶೇಖರ ಹಿಟ್ನಾಳ ತಿಳಿಸಿದರು.
ನಗರದ ತಮ್ಮ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಮೇ 20ರಿಂದ 24ವರೆಗೆ ಧಾರ್ಮಿಕ ಕಾರ್ಯಕ್ರಮ ಇರಲಿವೆ. ಒಂದು ತಿಂಗಳು ಜಾತ್ರೆ ನಡೆಯಲಿದೆ. ಕರ್ನಾಟಕ, ಆಂಧ್ರ, ಮಹಾರಾಷ್ಟ್ರ ಸೇರಿ ಇತರ ರಾಜ್ಯಗಳಿಂದ ಲಾಂತರ ಭಕ್ತರು ಬರುವರು. ಮೇ 12ರಿಂದ ಜಾತ್ರೆ ಮುಗಿವವರೆಗೆ ನಿತ್ಯ ಬೆಳಗ್ಗೆ 10 ಗಂಟೆಯಿಂದ ರಾತ್ರಿವರೆಗೆ ಪ್ರಸಾದ ವ್ಯವಸ್ಥೆ ಇರಲಿದೆ. ಸರ್ಕಾರದ ಜತೆಗೆ ಭಕ್ತರು ಸ್ವಯಂ ಸೇವೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಜನದಟ್ಟಣೆ ಇರುವೆಡೆ ಕುಡಿವ ನೀರು, ಕೊಪ್ಪಳ, ಹಿಟ್ನಾಳ, ಗಂಗಾವತಿ ಕಡೆಯಿಂದ ಬರುವವರಿಗೆ ಮೂರು ಕಡೆ ಪ್ರತ್ಯೇಕ ಸ್ನಾನ, ಶೌಚಗ ಗೃಹ ಕಲ್ಪಿಸಲಾಗುವುದು. ದೇವಾಲಯ ಎಡ&ಬಲದಲ್ಲಿ ಪಾರ್ಕಿಂಗ್ ಕಲ್ಪಿಸಿದ್ದು ಸಾರಿಗೆ ಬಸ್ ಅಲ್ಲಿವರೆಗೆ ಸಂಚರಿಸಲಿವೆ ಎಂದರು.
ಸಿಸಿಟಿವಿ ಕ್ಯಾಮೆರಾ, ವಿವೊಧೆಡೆ ಸ್ವಾಗತ ಗೇಟು, ಪ್ಲೆಕ್ಸ್, ಸೂಚನಾ ಲಕ, ಮಾಹಿತಿ ಕೇಂದ್ರ ಹಾಗೂ ದೇವಸ್ಥಾನದ ವಿವಿಧೆಡೆ ಲೈಟಿಂಗ್ ವ್ಯವಸ್ಥೆ, ಎಲ್ಇಡಿ ವಾಲ್- ಅಳವಡಿಸಿ ಭಕ್ತರಿಗೆ ಅವಕಾಶ ಕಲ್ಪಿಸಲಾಗುವುದು. ಧಾರ್ಮಿಕ ಕಾರ್ಯಕ್ರಮಗಳ ಲೈವ್ ನೀಡಲಾಗುವುದು. ಸ್ವಯಂ ಸೇವಕರು ಸ್ವಚ್ಛತೆ ಸೇರಿ ಇತರ ಕೆಲಸಗಳನ್ನು ನಿಭಾಯಿಸುವರು. ಆರೋಗ್ಯ, ಅಗ್ನಿಶಾಮಕ, ಪೊಲೀಸ್ ತಂಡಗಳನ್ನು ನಿಯೋಜಿಸಲಾಗುವುದೆಂದು ತಿಳಿಸಿದರು.