ಹುಲಿಗೆಮ್ಮ ಜಾತ್ರೆ 30ರಿಂದ

huligemma temple jaatra koppal dc naleen
Published on

ಕೊಪ್ಪಳ: ತಾಲೂಕಿನ ಹುಲಿಗಿ ಗ್ರಾಮದ ಹುಲಿಗೆಮ್ಮ ದೇವಿ ಜಾತ್ರೋತ್ಸವ ಮೇ 30ರಿಂದ ಜೂನ್​ 3ವರೆಗೆ ನಡೆಯಲಿದೆ. ಮೇ 30ರ ಸಂಜೆ 7 ಗಂಟೆಗೆ ಉತ್ಸವ, 31 ರಂದು ಅಕ್ಕಿಪಡಿ, ಮಹಾರಥೋತ್ಸವ ಜರುಗಲಿದೆ. ಜೂ.1 ರಂದು ಬಾಳಿದಂಡಿಗೆ, ರಾತ್ರಿ 8 ಗಂಟೆಗೆ ಕೊಂಡದ ಪೂಜಾ, ಬ್ರಾಹ್ಮೀ ಮುಹೂರ್ತದಲ್ಲಿ ಗಂಗಾದೇವಿ ಪೂಜೆ, ಶ್ರೀದೇವಿಗೆ ಪ್ರಸಾದ ಕೇಳುವುದು, ಬಾಳಿದಂಡಿಗೆ ಆರೋಹಣ ನಡೆಯಲಿದೆ.

ಜೂ.2ರಂದು ಪಾಯಸ ಅಗ್ನಿಕೊಂಡ ನಡೆಯಲಿದ್ದು, ಕೊಂಡದ ಪೂಜಾ, ಹಿಡಿದಕ್ಷಿಣೆ ವಿತರಣೆ, ಪಡಗದ ಪೂಜೆ, ಬ್ರಾಹ್ಮೀ ಮುಹೂರ್ತದಲ್ಲಿ ಗಂಗಾದೇವಿ ಪೂಜೆ, ಶ್ರೀದೇವಿಗೆ ಪ್ರಸಾದ ಕೇಳುವುದು, ಶ್ರೀದೇವಿಗೆ ಪಾಯಸ ಪ್ರಸಾದ ನಿವೇದನೆ, ಜೂ.3ರಂದು ಅಗ್ನಿಕುಂಡ ನಡೆಯಲಿದೆ. ಜೂ.25 ರಂದು ರಾತ್ರಿ 8 ಗಂಟೆಗೆ ಶ್ರೀದೇವಿಯವರ ಕಂಕಣ ವಿಸರ್ಜನೆ ನಡೆಯಲಿದೆ.

ಹುಲಿಗೆಮ್ಮ ದೇವಾಲಯದಿಂದ 5 ಕಿ.ಮೀ ವ್ಯಾಪ್ತಿಯಲ್ಲಿ ಮೇ 30ರ ಬೆಳಗ್ಗೆ 6ರಿಂದ ಜೂನ್​ 3ರ ರಾತ್ರಿ 11 ಗಂಟೆವರೆಗೆ ಮದ್ಯ ಮಾರಾಟ ನಿಷೇಧಿಸಿ ಡಿಸಿ ನಲಿನ್​ ಅತುಲ್​ ಆದೇಶಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net