ಕೊಪ್ಪಳ: ನಗರದ ಕೃಷ್ಣಾವೆಜ್ ಲಾಡ್ಜ್ನಲ್ಲಿ ಗದಗ ತಾಲೂಕಿನ ಬೆಳದಡಿ ತಾಂಡಾ ನಿವಾಸಿ, ಹಾಸ್ಟೆಲ್ ವಾರ್ಡನ್ ಹಮೇಶ ಪುಜಾರ (39) ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಅ.18ರಿಂದ ಲಾಡ್ಜ್ನಲ್ಲಿ ವಾಸವಾಗಿದ್ದ. ಭಾನುವಾರ ರೂಮಿನ ಕಿಟಕಿಯಿಂದ ನೋಡಿದಾಗ ನೇಣು ಬಿಗಿದ ಸ್ಥಿತಿಯಲ್ಲಿ ಹಮೇಶ ಕಾಣಿಸಿಕೊಂಡಿದ್ದಾನೆ. ಕುಟುಂಬದವರು ಬಂದ ಬಳಿಕ ಬಾಗಿಲು ತೆರೆದಾಗ ಮೃತಪಟ್ಟಿರುವುದು ಗೊತ್ತಾಗಿದೆ. ಈ ಬಗ್ಗೆ ಮೃತನ ತಂದೆ ಗಣಪತಿ ಪೂಜಾರ ದೂರು ನೀಡಿದ್ದು, ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ತಿಳಿಸಿದ್ದಾರೆ. ಕೊಪ್ಪಳ ನಗರಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.