

ಕೊಪ್ಪಳ: ಸಮಾಜ ಕಲ್ಯಾಣ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವಸತಿ ನಿಲಯಗಳ ಹೊರಗುತ್ತಿಗೆ ನೌಕರರಿಗೆ ಇಎಸ್ಐ, ಪಿಎ್ ಸೌಲಭ್ಯ ನೀಡದ ಏಜೆನ್ಸಿಗಳನ್ನು ಕಪು$್ಪಪಟ್ಟಿಗೆ ಸೇರಿಸುವಂತೆ ಆಗ್ರಹಿಸಿ ರಾಜ್ಯ ಸರ್ಕಾರಿ ಹಾಸ್ಟೆಲ್ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಂದ ಪದಾಧಿಕಾರಿಗಳು ಶುಕ್ರವಾರ ನಗರದ ಡಿಸಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.
ಜಿಲ್ಲೆಯಲ್ಲಿ ಮೆ.ನಾಗಪ್ಪ ಸಂಗೀತಾ ಸೆಕ್ಯುರಿಟಿ ಸರ್ವಿಸ್ ಬೆಂಗಳೂರು, ಮೆ. ಎಂ.ನಾಗರಾಜ ಶಾರ್ಪ ವಾಚ್ ಇನ್ವೇಸ್ಟಿಗೇಷನ್ ಸೆಕ್ಯುರಿಟಿ ಸರ್ವಿಸ್ ಮೈಸೂರು ಏಜೆನ್ಸಿಗಳಿಗೆ ಆದೇಶ ನೀಡಲಾಗಿದೆ. ಈವರೆಗೆ ಏಜೆನ್ಸಿಗಳು ವೇತನ ಪಾವತಿ ಮಾಡಿಲ್ಲ. ಪಿಎ್, ಇಎಸ್ಐ ಸೌಲಭ್ಯ ನೀಡಿಲ್ಲ. ಈ ಬಗ್ಗೆ ಹಲವು ಬಾರಿ ಮನವಿ ಸಲ್ಲಿಸಿದ್ದೇವೆ. ಏಜೆನ್ಸಿಗಳು ಸ್ಥಳಿಯವಾಗಿ ಕಚೇರಿ ಹೊಂದಿಲ್ಲ. ಜಿಲ್ಲೆಯಲ್ಲಿ 715 ನೌಕರರಿದ್ದು, ಈ ಪೈಕಿ ಕೇವಲ 295 ಜನರಿಗೆ ವೇತನ ಪಾವತಿಸಿದ್ದಾರೆಂದು ಆರೋಪಿಸಿದರು.
ಇಎಸ್ಐ, ಪಿಎಪ್ ಸೌಲಭ್ಯ ನೀಡದ ಏಜೆನ್ಸಿಗಳನ್ನು ಕಪು$್ಪಪಟ್ಟಿಗೆ ಸೇರಿಸಿ. ಹೊರಗುತ್ತಿಗೆ ನೌಕರರಿಗೆ 31 ಸಾವಿರ ರೂ. ವೇತನ ನೀಡಿ. ವಾರದ ರಜೆ ಕಡ್ಡಾಯಗೊಳಿಸಿ. 10 ವರ್ಷ ಸೇವೆ ಪೂರೈಸಿದ ಸಿಬ್ಬಂದಿಗೆ 5 ಲಕ್ಷ ರೂ. ಇಡಿಗಂಟು ನೀಡಬೇಕು. ಸೇವಾ ಭದ್ರತೆ ಕಲ್ಪಿಸಿ. ಖಾಸಗಿ ಗುತ್ತಿಗೆ ರದ್ದುಪಡಿಸಿ. ವೇತನ ತಾರತಮ್ಯ ಸರಿಪಡಿಸಿ. ಕಾರ್ಮಿಕರ ಸಂಕ್ಕೆ ಟೆಂಡರ್ ವಿನಾಯಿತಿ ನೀಡಿ. ಇಲಾಖೆಯಿಂದ ನೇರವಾಗಿ ವೇತನ ಪಾವತಿಸಿ ಎಂದು ಒತ್ತಾಯಿಸಿದರು.
ಸಂದ ಜಿಲ್ಲಾಧ್ಯಕ್ಷ ಗ್ಯಾನೇಶ ಕಡಗದ, ಉಪಾಧ್ಯಕ್ಷ ಮಹಮ್ಮದ್ ರಫೀಕ್, ಇತರ ಪದಾಧಿಕಾರಿಗಳಾದ ಗಾಳೆಪ್ಪ ಬೆಟಗೇರಿ, ಮೈಲಾರಪ್ಪ ಕೆ., ಮೈಲವ್ವ ಪಿ., ಮಂಜುಳಾ ಎಂ., ನೂರಪಾಶಾ ಕೆ., ಮಹೇಶ ಹಳ್ಳಿಕೇರಿ, ಶಾಂಭವಿ ಸಿ. ಇತರರಿದ್ದರು.