ಕನಿಷ್ಠ ವೇತನ ಹೆಚ್ಚಳ ಸ್ವಾಗತಾರ್ಹ

district koppal hostel workers celebration minimum wage
Published on

ಕೊಪ್ಪಳ: ಕಾರ್ಮಿಕರ ಕನಿಷ್ಠ ವೇತನ ಹೆಚ್ಚಳ ಮಾಡಿದ್ದನ್ನು ಸ್ವಾಗತಿಸಿ ರಾಜ್ಯ ಸರ್ಕಾರಿ ಹಾಸ್ಟೆಲ್​ ಮತ್ತು ವಸತಿಶಾಲಾ ಹೊರಗುತ್ತಿಗೆ ನೌಕರರ ಸಂಘದ ಪದಾಧಿಕಾರಿಗಳು ಮಂಗಳವಾರ ನಗರದ ಅಶೋಕ ವೃತ್ತದಲ್ಲಿ ಸಂಭ್ರಮ ಆಚರಿಸಿದರು.

ವಿವಿಧ ಇಲಾಖೆಗಳಲ್ಲಿ 15&20 ವರ್ಷದಿಂದ ಹೊರಗುತ್ತಿಗೆ ನೌಕರರು, ಅಡುಗೆದಾರರು, ಅಡುಗೆ ಸಹಾಯಕರು ಕೆಲಸ ಮಾಡುತ್ತಿದ್ದಾರೆ. ಕಾರ್ಮಿಕ ಇಲಾಖೆ 4 ವಲಯ ಬದಲು ಮೂರು ವಲಯ ಮಾಡಿದೆ. 25,714ರೂ. ಕನಿಷ್ಠ ವೇತನ ನಿಗದಿಪಡಿಸಿ ಗೆಜೆಟ್​ ಹೊರಡಿಸಿದೆ. ಇದರಿಂದ ನಮಗೆಲ್ಲ ಅನುಕೂಲವಾಗಲಿದೆ. ಸಂ ಇದನ್ನು ಸ್ವಾಗತಿಸಲಿದೆ. ಹಲವು ಹೋರಾಟಗಳ ಲವಾಗಿ ಆದೇಶವಾಗಿರುವುದು ಅನುಕೂಲ ತಂದಿದೆ. ರಾಜ್ಯಾದ್ಯಂತ ಸಂಭ್ರಮ ಆಚರಿಸಲಾಗುತ್ತಿದೆ ಎಂದರು.

ಸಂದ ಜಿಲ್ಲಾಧ್ಯಕ್ಷ ಗ್ಯಾನೇಶ ಕಡಗದ, ಪದಾಧಿಕಾರಿಗಳಾದ ಮಹಮ್ಮದ ರಫಿ, ಕೀರಪ್ಪ, ಲೋಕೇಶ, ಬಸವರಾಜ, ಜ್ಯೋತಿ, ಪಾರ್ವತಿ, ರಮೇಶ, ಆನಂದ, ಮುತ್ತಣ್ಣ, ವೀರೇಶ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net