ಹೊಸಕೇರಾದಲ್ಲಿ ದಲಲಿತರಿಗಲ್ಲ ಸ್ಮಶಾನ

Published on

ಕೊಪ್ಪಳ: ಗಂಗಾವತಿ ತಾಲೂಕಿನ ಹೊಸಕೇರಾ ಗ್ರಾಮದಲ್ಲಿ 4.30 ಎಕರೆ ರುದ್ರಭೂಮಿ ಇದೆ. ಇದರಲ್ಲಿ ದಲಿತರಿಗೆ ಪ್ರತ್ಯೇಕ 20 ಗುಂಟೆ ಜಾಗ ಮೀಸಲಿಡಬೇಕೆಂದು ಒತ್ತಾಯಿಸಿ ನ.11ರಂದು ಡಿಸಿ ಕಚೇರಿ ಮುಂದೆ ಪ್ರತಿಭಟನೆ ನಡೆಸುವುದಾಗಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಜಿಲ್ಲಾಧ್ಯಕ್ಷ ಬಸವರಾಜ ಮರಕುಂಬಿ ತಿಳಿಸಿದರು.

ಗ್ರಾಮದ ಸರ್ವೇ ನಂಬರ್​ 131ರಲ್ಲಿ 40.30 ಸರ್ಕಾರಿ ಜಮೀನಿದೆ. ಇದನ್ನು ರುದ್ರಭೂಮಿಗೆ ಮೀಸಲಿಡಲಾಗಿದೆ. ಇಲ್ಲಿ ಮಾದಿಗ ಸಮುದಾಯದವರ ಶವ ಸಂಸ್ಕಾರ ಮಾಡಲು ಸವರ್ಣಿಯರು, ಮೇಲ್ವರ್ಗದವರು ತಕರಾರು ಮಾಡುತ್ತಾರೆ. ಹಳ್ಳದ ಭಾಗಕ್ಕೆ ಹೊಂದಿಕೊಂಡಿರುವ 20 ಗುಂಟೆಯಷ್ಟು ಜಮೀನು ಶವ ಸಂಸ್ಕಾರಕೆಕ ನೀಡುವಂತೆ ಅಕ್ಟೋಬರ್​ 23ರಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದೇವೆ. ಆದರೂ ಮಂಜೂರು ಮಾಡಿಲ್ಲವೆಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಅಸ್ಪ-----ೃಶ್ಯತೆ ಆಚರಣೆ ಮಾಡದಂತೆ ಪೊಲೀಸರು ಸಂಧಾನ ನಡೆಸಿದ್ದಾರೆ. ಆದರೂ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ. ಸಭೆಯಲ್ಲಿ ಮಾದಿಗ ಸಮುದಾಯ ಮುಖಂಡರನ್ನು ಅವಮಾನಿಸಲಾಗಿದೆ. ದಲಿತ ಸದಸ್ಯನ ಮೇಲೆ ಹಲ್ಲೆಯಾಗಿದೆ. ಸಮುದಾಯದವರೂ ಸತ್ತ ಮೇಲೂ ಶವಸಂಸ್ಕಾರಕ್ಕೆ ಕಷ್ಟುಪಡುವಂತಾಗಿದೆ. ಅಧಿಕಾರಿಗಳು ಸಮಸ್ಯೆ ಪರಿಹಾರಕ್ಕೆ ಯತ್ನಿಸುತ್ತಿಲ್ಲ. ಇದನ್ನು ಖಂಡಿಸಿ ಅರ್ನಿಧಿಷ್ಟ ಅವಧಿ ಧರಣಿ ನಡೆಸುತ್ತೇವೆ ಎಂದರು. ಸಂದ ಕಾರ್ಯದರ್ಶಿ ಸುಂಕಪ್ಪ ಗದಗ, ಜಂಟಿ ಕಾರ್ಯದರ್ಶಿ ಕೆ.ಹುಸೇನಪ್ಪ, ಹೊಸಕೇರಾ ಗ್ರಾಮಸ್ಥರಾದ ಭೀಮಪ್ಪ ಪೂಜಾರಿ, ಹುಲುಗಪ್ಪ ಡಗ್ಗಿ, ಮಂಜುನಾಥ ಡಗ್ಗಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net