ಸಸ್ಯಸಂತೆ-ತೋಟಗಾರಿಕೆ ಅಭಿಯಾನಕ್ಕೆ ತೆರೆ

district koppal sasyasante abhiyana horticulture
Published on

ಕೊಪ್ಪಳ: ತೋಟಗಾರಿಕೆ ಇಲಾಖೆಯಿಂದ ಆ.15ರಿಂದ 20ವರೆಗೆ ನಡೆದ ಸಸ್ಯಸಂತೆ ಹಾಗೂ ತೋಟಗಾರಿಕೆ ಅಭಿಯಾನಕ್ಕೆ ಉತ್ತಮ ಸ್ಪಂದನೆ ದೊರೆತಿದೆ. 45ಲಕ್ಷಕ್ಕೂ ಹೆಚ್ಚಿನ ಸಸಿಗಳಿಗೆ ಬೇಡಿಕೆ ಸಲ್ಲಿಸಿರುವುದು ವಿಶೇಷ.

9ನೇ ವರ್ಷದ ಅಭಿಯಾನದಲ್ಲಿ ಸ್ವದೇಶಿ ಹಾಗೂ ವಿದೇಶಿ ತಳಿಯ 25 ಲಕ್ಷ ಸಸಿಗಳಿಗೆ ರೈತರು ಮುಂಗಡ ನೊಂದಣಿ ಮಾಡಿಕೊಂಡಿದ್ದಾರೆ. 2,000 ಎಕರೆ ತೋಟಗಾರಿಕೆ ಸಸಿಗಳು, ತರಕಾರಿ, ಅಲಂಕಾರಿಕ ಸಸಿಗಳು, ಎರೆಹುಳು ಗೊಬ್ಬರ, ಬೇವಿನ ಹಿಂಡಿ, ಎರೆಜಲ ಹಾಗೂ ವಿವಿಧ ಪರಿಕರಗಳನ್ನು ಖರೀದಿಸಲು ಬೇಡಿಕೆ ಇಟ್ಟಿದ್ದಾರೆ. ಜಿಲ್ಲೆ ಅಷ್ಟೇ ಅಲ್ಲದೆ ಅಕ್ಕ-ಪಕ್ಕದ ಜಿಲ್ಲೆಯ ರೈತರು ಭೇಟಿ ನೀಡಿದ್ದಾರೆ. 100ಕ್ಕೂ ಹೆಚ್ಚಿನ ಸ್ವದೇಶಿ ಹಾಗೂ ವಿದೇಶಿ ಹಣ್ಣಿನ ಸಸಿಗಳನ್ನು ಪರಿಚಯಿಸಿಕೊಂಡು ಬೆಳೆಯಲು ಮುಂದಾಗಿದ್ದಾರೆ. 4 ಸಾವಿರ ಮಿಯಾಜಾಕಿ ಮಾವಿನ ಸಸಿ, 2 ಸಾವಿರ ಅವಕಾಡೋ ಸಸಿ, ಮೆಕಡೋಮಿಯಾ, ಮ್ಯಾಂಗೋಸ್ಟಿನ್​, ಲಿಚ್ಚಿ, ವಿದೇಶಿ ಹಲಸು, ಚರ್ರಿ ಮುಂತಾದ ವಿದೇಶಿ ಹಣ್ಣಿನ ತಳಿಗಳ ಸಸಿಗಳು ಸೇರಿ 5 ಸಾವಿರಕ್ಕೂ ಹೆಚ್ಚಿನ ಸಸಿ ಪೂರೈಸುವಂತೆ ಬೇಡಿಕೆ ಇಟ್ಟಿದ್ದಾರೆ.

ಮಾವು (ಕೇಸರ್​) 20 ಸಾವಿರ, ಲಿಂಬೆ 6 ಸಾವಿರ, ತೆಂಗು 15 ಸಾವಿರ, ಪೇರಲ ಎಲ್​-49 ಸಸಿಗಳು 5 ಸಾವಿರ, ತೈವಾನ್​ ಪಿಂಕ್​ 1 ಸಾವಿರ, ತರಕಾರಿ ಸಸಿಗಳು 1 ಲಕ್ಷ, ನುಗ್ಗೆ 9 ಸಾವಿರ, ಕರಿಬೇವು 1 ಸಾವಿರ, ಡಾಗ್​ ರಿಡ್ಜ್​ 2 ಸಾವಿರ ಸಸಿಗಳು ಮತ್ತು ಅಲಂಕಾರಿಕ ಸಸಿಗಳಾದ ಗುಲಾಬಿ 5 ಸಾವಿರ, ರಾಯಲ್​ ಪಾಮ್​ 1500 ಸಸಿಗಳು, ಮನಿ ಪ್ಲಾಂಟ್​ 600, ಕ್ಯಾಕ್ಟಸ್​ ಮತ್ತು ಸೆಕ್ಯುಲೆಂಟ್ಸ್​ 700, ಅಕೆಲಿಪಾ 250, ಅರೆಕಾಪಾಮ್​ 800 ಸಸಿಗಳು, ಡೈಪನ್​ ಬೇಕಿಯಾ 700, ದುರಂತಾ 2500, ನಂದಿಬಟ್ಟಲು 700, ಡೇಸಿನಾ 800, ತುಳಸಿ 400, ದುಂಡು ಮಲ್ಲಿಗೆ 2500 ಮತ್ತು ಇತರೇ 3200 ಸಸಿಗಳು ಸೇರಿ ಒಟ್ಟಾರೆ 3.50 ಲಕ್ಷಕ್ಕೂ ಹೆಚ್ಚಿನ ಸಸಿಗಳು ಮಾರಟವಾಗಿವೆ.

4.50 ಲಕ್ಷ ಸಸಿಗಳ ಮುಂಗಡ ಬೇಡಿಕೆ ಸೃಷ್ಟಿಯಾಗಿದೆ. 50 ಟನ್​ ಎರೆಹುಳು ಗೊಬ್ಬರ, 10 ಸಾವಿರ ಲೀಟರ್​ ಎರೆಜಲ ಮತ್ತು 5 ಸಾವಿರ ಕೆ.ಜಿ. ಬೇವಿನ ಪುಡಿ, 500 ಕೆ.ಜಿ. ಜೈವಿಕ ಪರಿಕರಗಳನ್ನು ಸಹ ಮಾರಾಟ ಮಾಡಲಾಗಿದೆ.

ಪ್ರಾತ್ಯಕ್ಷಿಕೆಗಳ ಮೂಲಕ ಮಾಹಿತಿ

ಮಾದರಿ ಕೈತೋಟ, ತಾರಸಿ ತೋಟ, ವರ್ಟಿಕಲ್​ ಗಾರ್ಡನ್​ ಮತ್ತು ಹೈಡೋಫೋನಿಕ್ಸ್​ ಪ್ರಾತ್ಯಕ್ಷಿಕೆಗಳ ಮೂಲಕ ಸಾವಿರಾರು ರೈತರು ಮಾಹಿತಿ ಪಡೆದುಕೊಂಡರು. ತಾಳೆಬೆಳೆ ಬೆಳೆವ ಕುರಿತು ಮಾಹಿತಿ ನೀಡಿದ್ದು, 300 ರೈತರು ಬೆಳೆಯಲು ಮುಂದೆ ಬಂದಿದ್ದಾರೆ. ಮಣ್ಣು&ನೀರು ಪರೀೆ ಮಾಹಿತಿ ಒದಗಿಸಲಾಯಿತು. ಫ್ಲೋರೆಜನ್​ ಆರ್ಗ್ಯಾನಿಕ್ಸ್​ನಿಂದ ಹಲಸು ಬೆಳೆವ ಬಗ್ಗೆ 2,500 ರೈತರಿಗೆ ಸಾವಯವ ಕೃಷಿಯಲ್ಲಿ ಪದ್ಧತಿ ಮತ್ತು ದೃಢೀಕರಣ ಪಡೆಯುವ ಬಗ್ಗೆ ಮಾಹಿತಿ ನೀಡಲಾಯಿತು. 6 ದಿನ ನಡೆದ ಕಾರ್ಯಕ್ರಮದಲ್ಲಿ 10,000 ಕ್ಕೂ ಹೆಚಚಿನ ಜನರು ಭಾಗಿಯಾಗಿ ಮಾಹಿತಿ ಪಡೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net