ಮಧ್ಯವರ್ತಿಗಳ ಮೋಸಕ್ಕೆ ಬಲಿಯಾಗದಿರಿ

Published on

ಕೊಪ್ಪಳ: ಹನಿ ನೀರಾವರಿ ಸೌಲಭ್ಯ ಕೊಡಿಸುವುದಾಗಿ ತೋಟಗಾರಿಕೆ ಇಲಾಖೆ ಹಾಗೂ ಕಂಪನಿಗಳ ಹೆಸರಿನಲ್ಲಿ ಮೋಸ ಮಾಡುವ ಮಧ್ಯವರ್ತಿಗಳನ್ನು ರೈತರು ನಂಬದಂತೆ ತೋಟಗಾರಿಕೆ ಅಧಿಕಾರಿಗಳು ಎಚ್ಚರಿಸಿದ್ದಾರೆ.

ಕನಕಗಿರಿ, ಕಾರಟಗಿ ಮತ್ತು ಗಂಗಾವತಿ ತಾಲೂಕಿನ ರೈತರಿಗೆ ಮಧ್ಯವರ್ತಿಗಳು ತೋಟಗಾರಿಕೆ ಇಲಾಖೆ ಹಾಗೂ ಕೆಲವೊಂದು ಕಂಪನಿ ಹೆಸರು ಹೇಳಿಕೊಂಡು ಪಿಎಂಕೆಎಸ್​ವೈ ಯೋಜನೆಯಡಿ ಹನಿ ನೀರಾವರಿ ಸಲಕರಣೆಗಳನ್ನು ಕೊಡಿಸುವುದಾಗಿ ಮೋಸ ಮಾಡುತ್ತಿದ್ದಾರೆ. ಹಣ ವಸೂಲಿ ಮಾಡುತ್ತಿದ್ದಾರೆ. ರೈತರು ಮಧ್ಯವರ್ತಿಗಳಿಂದ ಮೋಸ ಹೋಗದೆ, ನೇರವಾಗಿ ತೋಟಗಾರಿಕೆ ಇಲಾಖೆ ಕಚೇರಿ ಸಂಪರ್ಕಿಸಿ. ಇಲಾಖೆಯಿಂದ ಪಿಎಂಕೆಎಸ್​ವೈ ಯೋಜನೆಯಡಿ ಹನಿ ನೀರಾವರಿ ಅಳವಡಿಸಿಕೊಂಡು ಸಹಾಯಧನ ಪಡೆಯಲು ಅವಕಾಶವಿದೆ.

ಹೀಗಾಗಿ ಇಲಾಖೆಯಲ್ಲಿ ಅರ್ಜಿ ಸಲ್ಲಿಸಿ. ಸರ್ಕಾರದಿಂದ ಅನುಮೋದನೆಗೊಂಡ ಕಂಪನಿಗಳಲ್ಲಿ ತಮ್ಮಿಷ್ಟದ ಕಂಪನಿ ಆಯ್ಕೆ ಮಾಡಿಕೊಂಡು ಸೌಲಭ್ಯ ಪಡೆಯಬಹುದು. ಟಕ ವಂತಿಕೆ ಪಾವತಿಸಿ ಕಂಪನಿಯಿಂದ ಕೊಟೇಷನ್​ ಪಡೆದು ದಾಖಲೆ ಸಲ್ಲಿಸಬೇಕು. ಈ ಬಗ್ಗೆ ಇಲಾಖೆಗೆ ಮಾಹಿತಿ ನೀಡಬೇಕು. ಯಾರಾದರೂ ಮಧ್ಯವರ್ತಿಗಳು ಮೋಸಕ್ಕೆ ಯತ್ನಿಸಿದರೆ ಇಲಾಖೆ ಗಮನಕ್ಕೆ ತರುವಂತೆ ಹಿರಿಯ ಸಹಾಯಜ ತೋಟಗಾರಿಕೆ ಅಧಿಕಾರಿಗಳು ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net