ಕೊಪ್ಪಳದಲ್ಲಿ ಮನೆ ಕಳ್ಳತನ; 100 ಗ್ರಾಂ ಬಂಗಾರ ಕದ್ದ ಕಳ್ಳರು

home theft 100 gram gold cash silver gone
ಸಾಂದರ್ಭಿಕ ಚಿತ್ರ
Published on

ಕೊಪ್ಪಳ:ನಗರದ ಗಾಂಧಿ ವೃತ್ತದ ಬಳಿ ತರಕಾರಿ ವ್ಯಾಪಾರಿಯೊಬ್ಬರ ಮನೆಯಲ್ಲಿ 4 ಲಕ್ಷ ರೂ. ಮೊತ್ತದ 100 ಗ್ರಾಂ ಬಂಗಾರ, 11 ಗ್ರಾಂ ಬೆಳ್ಳಿ ಹಾಗೂ 20 ಸಾವಿರ ರೂ. ನಗದು ಕಳ್ಳತನವಾಗಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಚನ್ನವ್ವ ಉಪ್ಪಾರ್​ ಎಂಬುವರ ಅತ್ತೆ ಮರಣ ಹೊಂದಿದ ಕಾರಣ ಮೂರು ತಿಂಗಳು ಮನೆ ಬಿಡಬೇಕೆಂಬ ಕಾರಣ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ. ಮನೆಗೆ ಹೋಗಿ, ಬರುವುದು ಮಾಡಿದರೂ ರಾತ್ರಿ ಕುಟುಂಬ ಸದಸ್ಯರಾರು ಉಳಿಯುತ್ತಿರಲಿಲ್ಲ.

ನ.28ರಂದು ರಾತ್ರಿ ಮನೆ ಬೀಗ ತೆರೆದ ಕಳ್ಳರು 100 ಗ್ರಾಂ ತೂಕದ ಬಂಗಾರದ ಬಳೆ, ತಾಳಿ, ನೆಕ್ಲೆಸ್​, ಸರ, ಉಂಗುರ ಹಾಗೂ 16 ಗ್ರಾಂ ಬೆಳ್ಳಿ ಆಭರಣ ಮತ್ತು 20 ಸಾವಿರ ರೂ. ನಗದು ಕದ್ದು ಪರಾರಿಯಾಗಿದ್ದಾರೆ. ಘಟನೆ ಸಂಬಂದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net