ಓಂಕಾರದ ಮೂಲ ಸ್ವರೂಪವೆ ಮಹಾಗಣಪತಿ

district koppal homa bhagyanagara
Published on

ಕೊಪ್ಪಳ: ಪ್ರಣವ ಸ್ವರುಪ ಹಾಗೂ ಓಂಕಾರದ ಮೂಲ ಸ್ವರುಪವೆ ಮಹಾಗಣಪತಿ. ಸಂಸಾರ ಮೋಹದಿಂದ ಮುಕ್ತಿಗಾಗಿ ಮಹಾ ಗಣಪತಿ ನಾಮ ಸ್ಮರಣೆಯಿಂದ ಸಾಧ್ಯವೆಂದು ಹೊಸಪೇಟೆ ಚಿಂತಾಮಣಿಮಠದ ಅಮರಾವತಿ ಶ್ರೀ ಶಿವಾನಂದ ಭಾರತೀ ಚಿಂತಾಮಣಿ ಮಹಾಸ್ವಾಮಿಗಳು ಹೇಳಿದರು.

ತಾಲೂಕಿನ ಭಾಗ್ಯನಗರ ಪಾನಂಟಿ ಕಲ್ಯಾಣ ಮಂಟಪದಲ್ಲಿ ಮೂರು ದಿನ ಹಮ್ಮಿಕೊಂಡಿದ್ದ ಶ್ರೀ ಗಾಯತ್ರಿ ಮತ್ತು ಲಕ್ಷ ಮೋದಕ ಶ್ರೀ ಗಣಪತಿ ಹೋಮ ಕಾರ್ಯಕ್ರಮದಲ್ಲಿ ಭಾನುವಾರ ಮಾತನಾಡಿದರು.

ಸಾಧನೆಗೆ ಅನೇಕ ಅಡೆತಡೆ ಬರುತ್ತವೆ. ಅವುಗಳನ್ನು ನಿವಾರಿಸಬೇಕು. ಲೋಕ ಕಲ್ಯಾಣಕ್ಕಾಗಿ ಕೊಪ್ಪಳದ ಶ್ರೀ ವೇದ ಮಾತಾ ಗಾಯಿತ್ರಿ ಸೇವಾ ಸಮಿತಿ ನಿಸ್ವಾರ್ಥವಾಗಿ ಹೊಮವನ್ನು ಆಯೋಜಿಸಿರುವುದು ಮಾದರಿ. ಶ್ರೀ ಶಂಕರಾಚರ್ಯರು ದೇಶದ ಉದ್ದಗಲ ಸಂಚರಿಸಿ ಸನಾತನ ಧರ್ಮದ ಉಳಿವಿಗಾಗಿ ಶ್ರಮಿಸಿದರು. ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಾವು ಸಾಗಬೇಕಿದೆ ಎಂದರು.

ಡಾ.ಬೆಳವಾಡಿ ಹರೀಶ್​ ಭಟ್​ ಮಾತನಾಡಿ, ಕೊಪ್ಪಳದ ಶ್ರೀ ವೇದ ಮಾತಾ ಗಾಯಿತ್ರಿ ಸೇವಾ ಸಮಿತಿ ಪ್ರತಿವರ್ಷ ಲೋಕ ಕಲ್ಯಾಣಕ್ಕಾಗಿ ಸೇವೆ ಮಾಡುತ್ತಾ ಬಂದಿದೆ. ಬರುವ ವರ್ಷ ರುದ್ರ ಯಾಗ ಮಾಡಲಿ ಎಂದು ಸಲಹೆ ನೀಡಿದರು.

ಶ್ರೀರಾಮಕೃಷ್ಣಾಶ್ರಮದ ಚೈತನ್ಯಾನಂದ ಸ್ವಾಮೀಜಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net