

ಕೊಪ್ಪಳ: ಡಿಜೆ ಸದ್ದಿಗೆ ಮೈ ಮರೆತು ಕುಣಿದ ಜನ.. ಮೈ ಮೇಲೆ ಹನಿ ನೀರಿನ ಸಿಂಚನ.. ತರಹೇವಾರಿ ಬಣ್ಣದ ಮೆರಗು... ಎತ್ತ ನೋಡಿದರೂ ಜನವೋ ಜನ.. ನಿಯಂತ್ರಣಕ್ಕೆ ಹರಸಾಹಸಪಟ್ಟ ಪೊಲೀಸರು.. ಜನರೊಂದಿಗೆ ಹುಚ್ಚೆದ್ದು ಕುಣಿದ ಜನಪ್ರತಿನಿಧಿಗಳು...
ಇವು ನಗರದ ತಾಲೂಕು ಕ್ರೀಡಾಂಗಣದಲ್ಲಿ ಜಿಲ್ಲಾ ಅಥ್ಲೆಟಿಕ್ ಅಸೋಸಿಯೇಷನ್ನಿಂದ ಮೊದಲ ಬಾರಿಗೆ ಹಮ್ಮಿಕೊಂಡಿದ್ದ ಹೋಳಿ ಹಬ್ಬದ ಸಂಭ್ರಮದಲ್ಲಿ ಶುಕ್ರವಾರ ಕಂಡುಬಂದ ದೃಶ್ಯಗಳು. ಮನೆಯಂಗಳ, ರಸ್ತೆ ಹಾಗೂ ಬಡಾವಣೆಗೆ ಸೀಮಿತವಾಗಿದ್ದ ಹಬ್ಬ ಮೊದಲ ಬಾರಿಗೆ ಸಾರ್ವಜನಿಕ ಮೈದಾನಕ್ಕೆ ಬಂದಿತು. ನಿರೀೆಗಿಂತ ಜನರು ಕಕ್ಕಿರಿದು ಸೇರಿದರು. ಕೊಪ್ಪಳ, ಭಾಗ್ಯನಗರ ಸೇರಿ ಸುತ್ತಲಿನ ವಿವಿಧ ಗ್ರಾಮಗಳ ಪುರುಷ, ಮಹಿಳೆ, ಯುವಕರು, ಮಕ್ಕಳು ಬೆಳಗ್ಗೆಯೇ ಮೈದಾನದಲ್ಲಿ ಕಾಣಿಸಿಕೊಂಡರು. ಕ್ರೀಡಾಂಗಣದಲ್ಲೇ ನೀಡಿದ ಬಣ್ಣ ಪಡೆದು ಪರಸ್ಪರ ಎರಚಿಕೊಂಡು ಹ್ಯಾಪಿ ಹೋಳಿ ಎಂದು ಶುಭಾಶಯ ಕೋರಿಕೊಂಡರು.