ಕೊಪ್ಪಳ: ಕೊಪ್ಪಳ ಪರಿಸರ ಹಿತ ರಕ್ಷಣಾ ವೇದಿಕೆಯಿಂದ ಬಲ್ಡೋಟಾ ಕಾರ್ಖಾನೆ ವಿಸ್ತರಣೆ ವಿರೋಧಿಸಿ ೆ.15ರಂದು ಪೂರ್ವಭಾವಿ ಸಭೆ ಹಮ್ಮಿಕೊಂಡಿದೆ.
ನಗರದ ಕೆಇಬಿ ರಸ್ತೆಯ ಮಹಾಂತಯ್ಯನಮಠ ಕಲ್ಯಾನ ಮಂಟಪದಲ್ಲಿ ಬೆಳಗ್ಗೆ 10 ಗಂಟೆಗೆ ಸಭೆ ಆರಂಭವಾಗಲಿದೆ. ಪಾತೀತವಾಗಿ ಹೋರಾಟ ಹಮ್ಮಿಕೊಂಡಿದ್ದು, ಯುವಕ, ಮಹಿಳಾ ಹಾಗೂ ವಿವಿಧ ವೃತ್ತಿ, ಸಮುದಾಯ, ಕೆಲಸ ಆಧಾರಿತ ನೂರಾರು ಸಂಟನೆಗಳ ಮುಖಂಡರು ಬೆಂಬಲ ವ್ಯಕ್ತಪಡಿಸಿದ್ದಾರೆ. ಎಲ್ಲ ಪಕ್ಷದ ಹಾಲಿ, ಮಾಜಿ ಸಚಿವ, ಸಂಸದ, ಶಾಸಕರು, ವಿಪ ಸದಸ್ಯರು ಹಾಗೂ ನಗರ, ಸ್ಥಳಿಯ ಪ್ರತಿನಿಧಿಗಳಿಗೂ ಆಹ್ವಾನ ನೀಡಲಾಗಿದೆ. ಕಾರ್ಖಾನೆಗಳಿಂದ ಆಗುತ್ತಿರುವ ದುಷ್ಪರಿಣಾಮ ಹಾಗೂ ಬೃಹತ್ ಕಾರ್ಖಾನೆಗಳು ವಿಸ್ತರಣೆ ಆದಲ್ಲಿ ಆಗುವ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸಲಾಗುವುದು. ಈ ನಿಟ್ಟಿನಲ್ಲಿ ಪೂರ್ವಭಾವಿ ಸಭೆ ಹಮ್ಮಿಕೊಂಡಿದ್ದು, ಎಲ್ಲರ ಸಲಹೆ ಪಡೆದು ಮುಂದಿನ ಹೋರಾಟ ರೂಪಿಸಲು ನಿರ್ಧರಿಸಿದ್ದಾಗಿ ವೇದಿಕೆ ಪ್ರಮುಖರು ತಿಳಿಸಿದ್ದಾರೆ.