ಹಿಟ್​ ಆ್ಯಂಡ್​ ರನ್​ ಪ್ರಕರಣ ಪರಿಹಾರ ಅರಿವು ಮೂಡಿಸಿ

Published on

ಕೊಪ್ಪಳ: ಹಿಟ್​ ಆ್ಯಂಡ್​ ರನ್​ ಪ್ರಕರಣದಲ್ಲಿ ಮರಣ ಹೊಂದಿದವರ ಕುಟುಂಬ ಹಾಗೂ ತೀವ್ರ ಗಾಯಗೊಂಡವರಿಗೆ ಪರಿಹಾರ ನೀಡಲು ಅನುಷ್ಠಾನಗೊಳಿಸಿರುವ ಯೋಜನೆ ಬಗ್ಗೆ ಜನರಿಗೆ ಅರಿವು ಮೂಡಿಸುವಂತೆ ಜಿಲ್ಲಾಧಿಕಾರಿ ಡಾ.ಸುರೇಶ ಬಿ.ಇಟ್ನಾಳ ಹಾಗೂ ಎಸ್ಪಿ ಡಾ.ರಾಮ್​ ಎಲ್​. ಅರಸಿದ್ದಿ ಸೂಚಿಸಿದ್ದಾರೆ.

ಮೋಟಾರ್​ ವಾಹನ ಕಾಯ್ದೆಯಡಿ ಅಪರಚಿತ ವಾಹನ ಡಿಕ್ಕಿಯಾಗಿ ವ್ಯಕ್ತಿ ಮರಣ ಹೊಂದಿದಲ್ಲಿ ವಾರಸುದಾರರಿಗೆ 2 ಲಕ್ಷ ರೂ., ತೀವ್ರ ಗಾಯಗೊಂಡರೆ 50 ಸಾವಿರ ರೂ. ಪರಿಹಾರ ನೀಡುವಂತೆ ಆದೇಶವಾಗಿದೆ. ಯೋಜನೆಯಡಿ ಸಂತ್ರಸ್ತರು ಅರ್ಜಿ ಸಲ್ಲಿಸಿದ 30 ದಿನದೊಳಗೆ ಎಸಿ, ತಹಸೀಲ್ದಾರ್​ಗಳು ಪರಿಶೀಲಿಸಿ ಶಿಾರಸ್ಸು ಮಾಡಿ ಡಿಸಿ ಕಚೇರಿಗೆ ಸಲ್ಲಿಸಬೇಕು. ಜಿಲ್ಲಾಧಿಕಾರಿ ಕಚೇರಿಯಲ್ಲಿ 15 ದಿನದಲ್ಲಿ ಪರಿಹಾರ ಮಂಜೂರು ಆದೇಶವನ್ನು ಜನರಲ್​ ಇನ್ಶೂರೆನ್ಸ್​ ಕೌನ್ಸಿಲ್​ಗೆ ಸಲ್ಲಿಸಲಾಗುವುದು. ಆದರೆ, ಅರ್ಜಿ ವಿಲೇವಾರಿ ವಿಳಂಬವಾಗುತ್ತಿದ್ದು, ಯೋಜನೆ ಆಶಯ ಈಡೇರುತ್ತಿಲ್ಲ.

ಅಪಘಾತ ನಡೆದ ವ್ಯಾಪ್ತಿ ಪೊಲೀಸ್​ ಠಾಣಾಧಿಕಾರಿ ಎ್​ಐಆರ್​ ದಾಖಲಿಸಿ ಸಂತ್ರಸ್ಥರಿಗೆ ಪರಿಹಾರ ಅರ್ಜಿ ನೀಡಬೇಕು. ಅಗತ್ಯ ದಾಖಲೆಗಳೊಂದಿಗೆ ತಹಸೀಲ್ದಾರ್​ ಇಲ್ಲವೇ ಉಪ ವಿಭಾಗಾಧಿಕಾರಿಗೆ ಅರ್ಜಿ ನೀಡಿ ಮನವರಿಕೆ ಮಾಡಿ ಪರಿಹಾರ ಪಡೆಯಲು ಸಹಕರಿಸಬೇಕು. ವಾರಸುದಾರರು ಠಾಣಾಧಿಕಾರಿಯಿಂದ ಅರ್ಜಿ ಪಡೆದು ಎ್​ಐಆರ್​ ಸಿ ರಿಪೋರ್ಟ್​, ಬ್ಯಾಂಕ್​ ಪಾಸ್​ ಬುಕ್​, ಮೃತ ಪಕ್ರರಣದಲ್ಲಿ ಮರಣೋತ್ತರ ವರದಿ ದಾಖಲೆ, ತೀವ್ರ ಗಾಯಗೊಂಡಿದಲ್ಲಿ ಚಿಕಿತ್ಸೆ ಪಡೆದ ವಿವರಗಳು, ಆಧಾರ್​ ಇನ್ನಿತರ ದಾಖಲೆ ಸಹಿತ ತಹಸೀಲ್ದಾರ್​/ಎಸಿ ಕಚೇರಿಗೆ ಸಲ್ಲಿಸಬೇಕು.

ಡಿಸಿಯಿಂದ ಪರಿಹಾರ ಆದೇಶ ಜಾರಿಯಾದ 15 ದಿನದೊಳಗೆ ಜನರಲ್​ ಇನ್ಶೂರನ್ಸ್​ ಕೌನ್ಸಿಲ್​ ಸಂಬಂಧಿಸಿದವರ ಖಾತೆಗೆ ನೇರವಾರಿ ಪರಿಹಾರ ಮೊತ್ತ ಜಮಾ ಮಾಡಲಿದೆ. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಜನರಿಗೆ ಅರಿವು ಮೂಡಿಸುವಂತೆ ಪ್ರಟಣೆ ಮೂಲಕ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net