ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿದವರಿಗೆ ಶಿಕ್ಷೆಯಾಗಲಿ

hindu jagarana vedike memorandum to government to takeaction againest police
ಬಾಗಲಕೋಟೆಯಲ್ಲಿ ಹಿಂಜಾವೇ ಕಾರ್ಯಕರ್ತರ ಮೇಲಿನ ಹಲ್ಲೆ ಖಂಡಿಸಿ ವೇದಿಕೆ ಜಿಲ್ಲಾ ಪದಾಧಿಕಾರಿಗಳು ಸೋಮವಾರ ಚುನಾವಣಾ ವಿಭಾಗ ತಹಸೀಲ್ದಾರ್​ ರವಿ ವಸ್ತ್ರದ್​ ಮೂಲಕ ಡಿಸಿಗೆ ಮನವಿ ಸಲ್ಲಿಸಿದರು. ವೇದಿಕೆ ಸಂಚಾಲಕರಾದ ಹನುಮಂತ ರಡ್ಡಿ, ಅರುಣ್​ ಹೂಗಾರ, ಚನ್ನಬಸವ ಹೂಗಾರ, ಅಯ್ಯನಗೌಡ ಕನಕಗಿರಿ, ವಿರೇಶ ಹಂಚಿನಾಳ ಇದ್ದರು.
Published on

ಕೊಪ್ಪಳ: ಬಾಗಲಕೋಟೆಯಲ್ಲಿ ಹಿಂದು ಜಾಗರಣ ವೇದಿಕೆ ಕಾರ್ಯಕರ್ತರ ಮೇಲೆ ಪೊಲೀಸರು ಹಲ್ಲೆ ನಡೆಸಿದ್ದು, ಅವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಹಿಂಜಾವೇ ಕೊಪ್ಪಳ ಜಿಲ್ಲಾ ಪದಾಧಿಕಾರಿಗಳು ಸೋಮವಾರ ಡಿಸಿ ನಲಿನ್​ ಅತುಲ್​ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.

ಬಾಗಲಕೋಟೆಯಲ್ಲಿ ಹೋರಾಟ ನಿರತ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಲಾಗಿದೆ. ಸ್ವತ: ಎಸ್ಪಿ ಸೇರಿ ಸಿಪಿಐ ಹಾಗೂ ಇತರ ಪೊಲೀಸರು ಹಿಂದು ಕಾರ್ಯಕರ್ತರನ್ನ ಥಳಿಸಿದ್ದಾರೆ. ಒಬ್ಬೊಬ್ಬರನ್ನು ಏಳೆಂಟು ಪೊಲೀಸರು ಹಿಡಿದು ಬೂಟುಗಾಲಿನಿಂದ ಒದ್ದು, ಲಾಠಿಯಿಂದ ಪ್ರಹಾರ ನಡೆಸಿದ್ದಾರೆ. ಈ ಮೂಲಕ ಹೋರಾಟ ಹತ್ತಿಕ್ಕುವ ಯತ್ನ ನಡೆಸಿದ್ದಾರೆ. ಯಾರದೋ ಕುಮ್ಮಕ್ಕಿನಿಂದ ಈ ರೀತಿ ವರ್ತಿಸಿದ್ದಾರೆಂದು ಆರೋಪಿಸಿದರು.

ಕಾರ್ಯಕರ್ತರ ಮೇಲೆ ಹಲ್ಲೆ ನಡೆದರೆ ಸಾಮಾನ್ಯ ಹಿಂದುಗಳ ಪಾಡೇನು ? ತಕ್ಷಣ ಸಂಬಂಧಿಸಿದವರ ವಿರುದ್ಧ ತನಿಖೆ ನಡೆಸಬೇಕು. ಅನಗತ್ಯವಾಗಿ ಹಿಂಸೆಗೆ ಕಾರಣರಾದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ವೇದಿಕೆ ಮೂಲಕ ಹೋರಾಟ ಹಮ್ಮಿಕೊಳ್ಳಲಾಗುವುದೆಂದು ಎಚ್ಚರಿಸಿದರು. ವೇದಿಕೆ ಸಂಚಾಲಕರಾದ ಹನುಮಂತ ರಡ್ಡಿ, ಅರುಣ್​ ಹೂಗಾರ, ಚನ್ನಬಸವ ಹೂಗಾರ, ಅಯ್ಯನಗೌಡ ಕನಕಗಿರಿ, ವಿರೇಶ ಹಂಚಿನಾಳ, ಶರಣು ಗುಳದಾಳ, ವಿಶ್ವನಾಥ, ನೀಲಕಂಠ, ವರುಣ್​ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net