ಚಿಕ್ಕ ಕುಟುಂಬ ಚೊಕ್ಕ ಕುಟುಂಬ

Published on

ಕೊಪ್ಪಳ: ಹೆಣ್ಣಾಗಲಿ, ಗಂಡಾಗಲಿ ಎರಡೇ ಮಕ್ಕಳು ಸಾಕು. ಚಿಕ್ಕ ಕುಟುಂಬ, ಚೊಕ್ಕ ಕುಟುಂಬ ಎಂದು ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಮಹೇಶ ಉಮಚಗಿ ಹೇಳಿದರು.

ನಗರದ ಕುವೆಂಪು ನಗರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಎನ್​ಎಸ್​ವಿ ಪಾಕ ಹಾಗೂ ನವಜಾತ ಶಿಶು ಸಪ್ತಾಹ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪ್ರತಿ ವರ್ಷ ನ.21ರಿಂದ ಡಿ.5ವರೆಗೆ ಎನ್​ಎಸ್​ವಿ ಪಾಕ ಹಮ್ಮಿಕೊಳ್ಳಲಾಗುತ್ತದೆ. ಪುರುಷರಿಗೆ ಸಂತಾನ ಶಕ್ತಿ ನಿರೋಧ ಶಸ್ತ್ರಚಿಕಿತ್ಸೆ ಬಗ್ಗೆ ಅರಿವು ಮೂಡಿಸಲಾಗುತ್ತದೆ. ತಾಯಿ&ಶಿಶು ಮರಣ ತಡೆ, ಜನಸಂಖ್ಯೆ ನಿಯಂತ್ರಣದಲ್ಲಿ ಎಲ್ಲರ ಪಾತ್ರ ಮುಖ್ಯ. ಹೃದಯ ತೊಂದರೆ, ಕ್ಯಾನ್ಸರ್​ ಸೇರಿ ಗಂಭೀರ ಕಾಯಿಲೆ ಇರುವ ಮಹಿಳೆಯರ ಗಂಡಂದಿರು ಎನ್​ಎಸ್​ವಿ ಶಸ್ತ್ರಚಿಕಿತ್ಸೆಗೆ ಒಳಗಾಗಬಹುದು. ಇದು ಸರಳ, ಸುರತ ವಿಧಾನ. ಯಾವುದೇ ಅಡ್ಡ ಪರಿಣಾಮಗಳಿಲ್ಲ. ಪ್ರತಿ ಕುಟುಂಬ ಎರಡು ಮಕ್ಕಳನ್ನು ಹೊಂದಿದರೆ ಸಾಕು. ಚಿಕ್ಕ ಕುಟುಂಬ ಚೊಕ್ಕವಾಗಿರಲಿದೆ ಎಂದರು.

ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಿವಾನಂದ ಮಾತನಾಡಿ, ಶಿಶು ಮರಣ ತಡೆಗೆ ತಾಯಂದಿರು ಸಾಕಷ್ಟು ಎಚ್ಚರಿಕೆ ವಹಿಸಬೇಕು. ಹುಟ್ಟಿದ ಮಗು ಬೆಚ್ಚಗಿರುವಂತೆ ನೋಡಿಕೊಳ್ಳಿ. ಎದೆಹಾಲುಣಿಸಿ. ಸೋಂಕು ಹರಡದಂತೆ ತಡೆಗಟ್ಟಬೇಕು. ತಾಯಿ ಪಕ್ಕದಲ್ಲೇ ಮಗು ಇರಬೇಕು. ಹುಟ್ಟಿದ ಅರ್ಧ ಗಂಟೆಯಲ್ಲಿ ಎದೆ ಹಾಲು ನೀಡಬೇಕು. 6 ತಿಂಗಳವರೆಗೆ ತಾಯಿ ಹಾಲು ಬಿಟ್ಟು ಬೇರೆ ಆಹಾರ ನೀಡಬಾರದು ಎಂದು ತಿಳಿಸಿದರು.

ಆರೋಗ್ಯ ಇಲಾಖೆ ಸಿಬ್ಬಂದಿ ಶ್ರೀನಿವಾಸ, ಉದಯ, ಜಯಲಕ್ಷಿ$್ಮ, ಆಶಾ ಕಾರ್ಯಕರ್ತೆ ಪೂರ್ಣಿಮಾ, ಅಂಗನವಾಡಿ ಕಾರ್ಯಕರ್ತೆ ಮಂಜುಳಾ, ಗರ್ಭಿಣಿ, ಬಾಣಂತಿಯರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net