ಸ್ಕಿಜೋ್ರೇನಿಯಾ ಆರಂಭಿಕ ಪತ್ತೆ ಉತ್ತಮ, ಡಿಎಚ್​ಒ ಡಾ.ಟಿ.ಲಿಂಗರಾಜು ಹೇಳಿಕೆ

health department program dho dr.t.lingaraju
ಕೊಪ್ಪಳ ತಾಲೂಕಿನ ಟಣಕನಕಲ್​ನಲ್ಲಿ ಸೋಮವಾರ ಹಮ್ಮಿಕೊಂಡಿದ್ದ ವಿಶ್ವ ಸ್ಕಿಜೋಫ್ರೇನಿಯಾ ದಿನಾಚರಣೆಯಲ್ಲಿ ಡಿಎಚ್​ಒ ಡಾ.ಟಿ.ಲಿಂಗರಾಜ ಮಾತನಾಡಿದರು. ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ರವೀಂದ್ರನಾಥ, ಮನೋವೈದ್ಯೆ ಡಾ.ಲಕ್ಷಿ$್ಮದೇವಿ ಪಾಟೀಲ, ಡಾ.ಪ್ರಕಾಶ ಇದ್ದರು.
Published on

ಕೊಪ್ಪಳ: ಸ್ಕಿಜೋಫ್ರೇನಿಯಾ ತೀವ್ರ ಮಾನಸಿಕ ಕಾಯಿಲೆ. ಮೆದುಳಿನ ರಾಸಾಯನಿಕ ವಸ್ತುಗಳಲ್ಲಿ ಆಗುವ ಅಸಮತೋಲನದಿಂದ ರೋಗ ಕಾಣಿಸಿಕೊಳ್ಳುತ್ತದೆ. ಸೂಕ್ತ ಸಮಯದಲ್ಲಿ ರೋಗ ಪತ್ತೆಹಚ್ಚಿ ಸರಿಯಾದ ಚಿಕಿತ್ಸೆ ಪಡೆದುಕೊಂಡಲ್ಲಿ ಗುಣಮಖರಾಗಬಹುದು ಎಂದು ಡಿಎಚ್​ಒ ಡಾ.ಟಿ.ಲಿಂಗರಾಜು ಹೇಳಿದರು.

ಜಿಲ್ಲಾಡಳಿತದಿಂದ ಟಣಕನಕಲ್​ನಲ್ಲಿ ವಿಶ್ವ ಸ್ಕಿಜೋಫ್ರೇನಿಯಾ ದಿನಾಚರಣೆ ಅಂಗವಾಗಿ ಸೋಮವಾರ ಆಯೋಜಿಸಿದ್ದ ಮಾನಸಿಕ ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಯಾವುದೇ ಮಾನಸಿಕ ಕಾಯಿಲೆ ಲಕ್ಷಣ, ಭಾವನೆಗಳ ಏರಿಳಿತ, ನಡವಳಿಕೆಯಲ್ಲಿ ಬದಲಾವಣೆ ಕಂಡುಬಂದಲ್ಲಿ ತಕ್ಷಣ ಮನೋವೈದ್ಯರ ಬಳಿ ತೆರಳಿ. ತಪಾಸಣೆ ಮಾಡಿಸಿಕೊಳ್ಳಿ. ಸೂಕ್ತ ಸಮಯದಲ್ಲಿ ಸೂಕ್ತ ಚಿಕಿತ್ಸೆ, ಆಪ್ತಸಮಾಲೋಚನೆ ಪಡೆಯಬೇಕು. ಇದರಿಂದ ಸ್ಕಿಜೋಫ್ರೇನಿಯಾದಂತ ಮಾನಸಿಕ ಕಾಯಿಲೆಯಿಂದ ಗುಣವಾಗಬಹುದು. ಆರಂಭದಲ್ಲಿಯೇ ರೋಗ ಲಕ್ಷಣ ಗುರುತಿಸುವುದು ಮುಖ್ಯ. ಇದರಿಂದ ಚಿಕಿತ್ಸೆಗೆ ಸಹಕಾರಿಯಾಗಲಿದೆ ಎಂದರು.

ಜಿಲ್ಲಾ ಮಾನಸಿಕ ಆರೋಗ್ಯಾಧಿಕಾರಿ ಡಾ.ಪ್ರಕಾಶ ಎಚ್​. ಮಾತನಾಡಿ, ಮಾನಸಿಕ ರೋಗಿಗೆ ಚಿಕಿತ್ಸೆ ಎಷ್ಟು ಮುಖ್ಯವೋ ಕುಟುಂಬದ ಬೆಂಬಲವೂ ಅಷ್ಟೇ ಮುಖ್ಯ. ಮಾನಸಿಕ ರೋಗಿ ಹಾಗೂ ಅವರ ಪೋಷಕರಲ್ಲಿ ಕೀಳರಿಮೆ ಹಾಗೂ ಸಾಮಾಜಿಕ ಕಳಂಕ ತೊಡೆದು ಹಾಕುವಲ್ಲಿ ಸಮಾಜದ ಪಾತ್ರವೂ ಮುಖ್ಯ ಎಂದರು.

ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ರವೀಂದ್ರನಾಥ, ಮನೋವೈದ್ಯೆ ಡಾ.ಲಕ್ಷಿ$್ಮದೇವಿ ಪಾಟೀಲ, ದೇವಪ್ಪ ಕುರಿ ಮಾತನಾಡಿದರು. ಜಿಲ್ಲಾ ಆರ್​ಸಿಎಚ್​ ಅಧಿಕಾರಿ ಡಾ.ಪ್ರಕಾಶ ವಿ., ಸರ್ವೇಕ್ಷಣಾಧಿಕಾರಿ ಡಾ.ನಂದಕುಮಾರ, ಕ್ಷಯ ರೋಗ ನಿಮೂರ್ಲನಾಧಿಕಾರಿ ಡಾ.ಶಶೀಧರ, ಡಾ.ವೆಂಕಟೇಶ, ಶಿವಾನಂದ ಪೂಜಾರ, ಪುಷ್ಪಾ ತೆರೇಸಾ, ಮಮತಾ ಕೆ.ಎಸ್​., ವೀರಣ್ಣ ಅಂಗಡಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net